ನೀತಾ ಅಂಬಾನಿ ಹಾಗೂ ಅವರ ಲೈಫ್ ಸ್ಟೈಲ್ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದರೆ ಅವರಿಗಿಂತ ನಾಲ್ಕು ವರ್ಷ ಕಿರಿಯ ಮಮತಾ ದಲಾಲ್ ಬಗ್ಗೆ ಬಹುತೇಕರಿಗೆ ತಿಳಿದಿಲ್ಲ. ನೀತಾ ಅಂಬಾನಿ ಸೌಂದರ್ಯಕ್ಕೆ ಅನೇಕರು ಮಾರು ಹೋಗಿದ್ದಾರೆ. ಆದರೆ ಅವರ ತಂಗಿ ಅವರಿಗಿಂತಲೂ ರೂಪವತಿಯಾಗಿದ್ದಾರೆ.
ಮಮತಾ ದಯಾಲ್ ಸಾಮಾನ್ಯವಾಗಿ ಲೈಮ್‌ಲೈಟ್‌ನಿಂದ ದೂರವಿರುತ್ತಾರೆ. ಆದರೆ ಆಕಾಶ್ ಅಂಬಾನಿ ಮದುವೆ ಬಳಿಕ ಅವರ ಕೆಲ ಫೋಟೋಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದವು. ಇವುಗಳಲ್ಲಿ ಅವರು ಅತ್ಯಂತ ಸುಂದರವಾಗಿ ಕಾಣಿಸಿಕೊಂಡಿದ್ದರು.
ಇನ್ನು ಸೌಂದರ್ಯದ ವಿಚಾರದಲ್ಲಿ ನೀತಾ ಅಂಬಾನಿ ತಾಯಿ ಪೂರ್ಣಿಮಾ ದಲಾಲ್ ಬಗ್ಗೆ ಹೇಳದಿರಲು ಸಾಧ್ಯವೇ? ಇಬ್ಬರೂ ಮಕ್ಕಳು ಸೌಂದರ್ಯದಲ್ಲಿ ತನ್ನ ತಾಯಿಯನ್ನೇ ಹೋಲುತ್ತಾರೆ.
ಇನ್ನು ಮಮತಾ ದಯಾಲ್ ಧೀರೂಭಾಯಿ ಅಂಬಾನಿ ಇಂಟರ್ ನ್ಯಾಷನಲ್ ಸ್ಕೂಲ್‌ನ ಮ್ಯಾನೇಜ್ಮೆಂಟ್ ನಿರ್ವಹಿಸುತ್ತಾರೆ, ಜೊತೆಗೆ ಮಕ್ಕಳಿಗೆ ಪಾಠವನ್ನೂ ಮಾಡುತ್ತಾರೆ. ಈ ಶಾಲೆಯ ಚೇರ್ಮನ್ ಖುದ್ದು ಅವರ ಅಕ್ಕ ನೀತಾ ಅಂಬಾನಿಯೇ ಆಗಿದ್ದಾರೆ.
ಮಮತಾ ದಯಾಲ್ ಯಾವ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೋ ಅಲ್ಲಿ ಅನೇಕ ಸೆಲೆಬ್ರಿಟಿಗಳ ಮಕ್ಕಳೂ ಓದುತ್ತಾರೆ. ಅಲ್ಲದೇ ಅವರು ಶಾರುಖ್ ಖಾನ್ ಹಾಗೂ ಸಚಿನ್ ತೆಂಡೂಲ್ಕರ್ ಮಕ್ಕಳಿಗೂ ಪಾಠ ಹೇಳಿಕೊಟ್ಟಿದ್ದಾರೆ.
ನೀತಾ ಅಂಬಾನಿ ಹಾಗೂ ಮಮತಾ ವೃತ್ತಿಯಲ್ಲಿ ಇಬ್ಬರೂ ಶಿಕ್ಷಕರು. ನೀತಾಗೂ ಮಕ್ಕಳಿಗೆ ಪಾಠ ಹೇಳಿ ಕೊಡುವ ಆಸಕ್ತಿ ಹಾಗೂ ಅನುಭವ ಇದೆ. ಮದುವೆಗೂ ಮುನ್ನ ಅವರು ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದವರು. ಮದುವೆಯಾದ ಬಳಿಕವೂ ಕೆಲ ವರ್ಷ ಅವರು ಈ ವೃತ್ತಿಯನ್ನು ಮುಂದುವರೆಸಿದ್ದರು.
ಶಿಕ್ಷಕಿ ವೃತ್ತಿಯ ಜೊತೆ ನೀತಾ ತಂಗಿ ಮಾಡೆಲಿಂಗ್ ಕೂಡಾ ಮಾಡಿದ್ದಾರೆ. ಮಮತಾ ದಲಾಲ್ ಫ್ಯಾಷನ್ ಡಿಸೈನರ್ ಮಲ್ಹೋತ್ರಾರ ಡ್ರೆಸಸ್‌ಗೆ ಮಾಡೆಲಿಂಗ್ ಮಾಡಿದ್ದರು.
ಇನ್ನು ಈ ಇಬ್ಬರೂ ಸಹೋದರಿಯರ ಲೈಫ್‌ಸ್ಟೈಲ್ ವಿಭಿನ್ನವಾಗಿದೆಯಾದರೂ ಇಬ್ಬರ ನಡುವಿನ ಬಾಂಧವ್ಯ ಉತ್ತಮವಾಗಿದೆ. ಅಲ್ಲದೇ ನೀತಾ ಮಗಳು ಇಶಾಗೂ ಚಿಕ್ಕಮ್ಮ ಎಂದರೆ ಅಚ್ಚುಮೆಚ್ಚು.