ಸೈಕಲ್‌ ಸವಾರಿಯಿಂದ ಷೇರು ಮಾರುಕಟ್ಟೆ ದಿಗ್ಗಜರಾದ ಮಧುಸೂದನ್ ಕೆಲಾ; ಈಗ ₹3,800 ಕೋಟಿ ಒಡೆಯ!

Published : May 14, 2025, 06:17 PM IST

ಷೇರ್ ಮಾರುಕಟ್ಟೆಯ ಯಶಸ್ಸಿನ ಕಥೆ: ಒಂದು ಕಾಲದಲ್ಲಿ ಹಳ್ಳಿಯ ಒಡೆದ ರಸ್ತೆಗಳಲ್ಲಿ ಸೈಕಲ್ ತುಳಿದು ಕಾಲೇಜಿಗೆ ಹೋಗುತ್ತಿದ್ದ ಹುಡುಗನ ಬಂಡವಾಳ ಇಂದು 3,801 ಕೋಟಿ ರೂ. ತಲುಪಿದೆ. ಗ್ರಾಮೀಣ ಪ್ರದೇಶದಲ್ಲಿ ಹಿಂದಿ ಮಾಧ್ಯಮದಲ್ಲಿ ಓದಿ ಷೇರ್ ಮಾರುಕಟ್ಟೆಯಲ್ಲಿ ಯಶಸ್ಸು ಗಳಿಸಿದ ಕಥೆ ತುಂಬಾ ಆಸಕ್ತಿದಾಯಕವಾಗಿದೆ.  

PREV
16
ಸೈಕಲ್‌ ಸವಾರಿಯಿಂದ ಷೇರು ಮಾರುಕಟ್ಟೆ ದಿಗ್ಗಜರಾದ ಮಧುಸೂದನ್ ಕೆಲಾ; ಈಗ ₹3,800 ಕೋಟಿ ಒಡೆಯ!

ಇದು ಷೇರು ಮಾರುಕಟ್ಟೆಯ ದಿಗ್ಗಜ ಹೂಡಿಕೆದಾರ ಮಧುಸೂದನ್ ಕೆಲಾ ಅವರ ಕಥೆ. ಛತ್ತೀಸ್‌ಗಢದ ಒಂದು ಸಣ್ಣ ಹಳ್ಳಿಯಲ್ಲಿ ಜನಿಸಿದ ಮಧುಸೂದನ್ ಕೆಲಾ ಅವರ ಬಾಲ್ಯವು ಬಹಳ ಕಷ್ಟದಲ್ಲಿ ಕಳೆದಿದೆ. ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಹಿಂದಿ ಮಾಧ್ಯಮದಲ್ಲಿ ಶಿಕ್ಷಣ ಪಡೆದರು. ನಂತರ ಬಿಕಾಂಗೆ ಪ್ರವೇಶ ಪಡೆದರು. ಹಳ್ಳಿಯಿಂದ ಕಾಲೇಜು 30 ಕಿ.ಮೀ ದೂರದಲ್ಲಿದ್ದರಿಂದ ಪ್ರತಿದಿನ ಸೈಕಲ್ ತುಳಿದು ಕಾಲೇಜಿಗೆ ಹೋಗುತ್ತಿದ್ದರು.

ನಂತರ ಎಂಬಿಎ ಮಾಡಲು ಮುಂಬೈಗೆ ಹೋದರು. ಅಲ್ಲಿ ಕೆಜೆ ಸೋಮಯ್ಯ ಕಾಲೇಜಿನಿಂದ ಪದವಿ ಪಡೆದರು. ಅಲ್ಲಿನ ವ್ಯಾಸಂಗ ಇಂಗ್ಲಿಷ್ ಮಾಧ್ಯಮದಲ್ಲಿತ್ತು ಆದರೆ ಮಧುಸೂದನ್ ಯಾವುದೇ ಭಯವಿಲ್ಲದೆ ಓದುತ್ತಾ ತಮ್ಮ ಮ್ಯಾನೇಜ್‌ಮೆಂಟ್ ಪದವಿ ಪೂರ್ಣಗೊಳಿಸಿದರು.

26

ಉದ್ಯೋಗದಿಂದ ಅನುಭವ ಪಡೆದು ಸ್ವಂತ ಕಂಪನಿ ಸ್ಥಾಪನೆ:

ಮಧುಸೂದನ್ ಪದವಿ ಪಡೆದ ನಂತರ ಮೋತಿಲಾಲ್ ಓಸ್ವಾಲ್ ಮತ್ತು ಯುಬಿಎಸ್ ಗ್ರೂಪ್‌ನಂತಹ ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡಿದರು. ಅಲ್ಲಿ ಅವರು ಷೇರು ಮಾರುಕಟ್ಟೆಯಲ್ಲಿ ಹಣವನ್ನು ಹೇಗೆ ಗಳಿಸುವುದು ಎಂದು ಕಲಿತರು. ನಂತರ ಅವರು ತಮ್ಮದೇ ಆದ ಸಂಶೋಧನೆ ಮತ್ತು ತಿಳುವಳಿಕೆಯಿಂದ ಸಣ್ಣ ಮತ್ತು ಮಿಡ್‌ಕ್ಯಾಪ್ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿದರು. ಅವರು ಆಯ್ಕೆ ಮಾಡಿದ ಎಲ್ಲಾ ಷೇರುಗಳು ಮಲ್ಟಿಬ್ಯಾಗರ್ ಆದವು.

36

ಫಾರ್ಮಾ ವಲಯದಲ್ಲಿ ಹೂಡಿಕೆ, MK ವೆಂಚರ್ಸ್ ಆರಂಭ: 
2009 ರ ನಂತರ, ಅವರು ಫಾರ್ಮಾ ವಲಯದ ಮೇಲೆ ಹೂಡಿಕೆ ಮಾಡಲು ಕೇಂದ್ರೀಕರಿಸಿದರು. ಈ ನಿರ್ಧಾರವು ಅವರ ವೃತ್ತಿ ಜೀವನದ ತಿರುವಾಗಿ ಪರಿಣಮಿಸಿತು. ಮಧುಸೂದನ್ ಅವರು ಭಾರಿ ಲಾಭ ಗಳಿಸಿದರು. 2018 ರಲ್ಲಿ ಅವರು ಸ್ವಂತವಾಗಿ MK ವೆಂಚರ್ಸ್  ಎನ್ನುವ ಕಂಪನಿ ಪ್ರಾರಂಭಿಸಿದರು. ಇದು ಇಂದು ಹಲವಾರು ಹೋಲ್ಡಿಂಗ್ ಕಂಪನಿಗಳನ್ನು ಹೊಂದಿದೆ.

46

ರಿಪ್ರೊ ಇಂಡಿಯಾದಲ್ಲಿ ಹೂಡಿಕೆ, ಕೋಟಿಗಟ್ಟಲೆ ಲಾಭ: 

ಕೆಲವು ವರ್ಷಗಳ ಹಿಂದೆ ಮಧುಸೂದನ್ ಕೆಲಾ ರಿಪ್ರೊ ಇಂಡಿಯಾ ಕಂಪನಿಯ 4.75 ಲಕ್ಷ ಷೇರುಗಳನ್ನು ಖರೀದಿಸಿದರು. ಆಗ ಜನರಿಗೆ ಅಂತಹ ಕಂಪನಿ ಇದೆ ಎಂದು ತಿಳಿದಿರಲಿಲ್ಲ. ಆದರೆ ನೋಡನೋಡುತ್ತಿದ್ದಂತೆ ಅದರ ಷೇರುಗಳು ಏರಿಕೆಯಾಗಿ ಮಧುಸೂದನ್ ಕೆಲಾ ಅವರ ಜೇಬಿಗೆ ದೊಡ್ಡ ಲಾಭ ಬಂತು. ಈಗ ಎಲ್ಲರೂ ಮಧುಸೂದನ್ ಹಣ ಹೂಡಿದಲ್ಲಿ ಚಿನ್ನ ಬೆಳೆಯುತ್ತದೆ ಎಂದು ನಂಬುತ್ತಾರೆ.

56

ಮಧುಸೂದನ್ ಕೆಲಾ ಅವರ ನಿವ್ವಳ ಮೌಲ್ಯ ಮತ್ತು ಬಂಡವಾಳ: 

trendlyne.com ನ ಮಾರ್ಚ್ 2025 ರ ಕಾರ್ಪೊರೇಟ್ ಷೇರುದಾರಿಕೆಯ ಪ್ರಕಾರ, ಮಧುಸೂದನ್ ಕೆಲಾ ಅವರು ಸಾರ್ವಜನಿಕವಾಗಿ 17 ಷೇರುಗಳನ್ನು ಹೊಂದಿದ್ದಾರೆ, ಇದರ ಒಟ್ಟು ನಿವ್ವಳ ಮೌಲ್ಯ 3,801 ಕೋಟಿ ರೂ.ಗಿಂತ ಹೆಚ್ಚು. ವಿನಿಮಯ ಕೇಂದ್ರದಲ್ಲಿ ದಾಖಲಾಗಿರುವ ಷೇರುದಾರಿಕೆ ದತ್ತಾಂಶದ ಪ್ರಕಾರ, ಮಧುಸೂದನ್ ಕೆಲಾ ಹಲವು ಷೇರುಗಳನ್ನು ಹೊಂದಿದ್ದಾರೆ.

66

ರಾಕೇಶ್ ಜುಂಜುನ್ವಾಲಾ ತಮ್ಮ ಗುರುವೆಂದು ಸ್ವೀಕಾರ: 
ಇನ್ನು 
ಮಧುಸೂದನ್ ಕೆಲಾ ಅವರು ಹಲವಾರು ಸಂದರ್ಶನಗಳಲ್ಲಿ 'ರಾಕೇಶ್ ಜುಂಜುನ್ವಾಲಾ ಇಲ್ಲದಿದ್ದರೆ, ನಾನು ಇಲ್ಲಿಯವರೆಗೆ ಬರುತ್ತಿರಲಿಲ್ಲ' ಎಂದು ಹೇಳಿದ್ದಾರೆ. ಅವರು ಜುಂಜುನ್ವಾಲಾ ಅವರಿಂದ ಬಹಳಷ್ಟು ಕಲಿತರು. ವಿಶೇಷವಾಗಿ ಹೂಡಿಕೆಯ ಚಿಂತನೆ, ಅಪಾಯಗಳನ್ನು ತೆಗೆದುಕೊಳ್ಳುವುದು ಮತ್ತು ದೀರ್ಘಾವಧಿಯ ಯೋಜನೆ. ಹೀಗಾಗಿ ರಾಕೇಶ್ ಜುಂಜುನ್ವಾಲಾ ಅವರನ್ನು ತಮ್ಮ ಗುರುಗಳೆಂದು ಪರಿಗಣಿಸಿದ್ದಾರೆ.

ಹಕ್ಕುತ್ಯಾಗ: ಯಾವುದೇ ರೀತಿಯ ಹೂಡಿಕೆ ಮಾಡುವ ಮೊದಲು ನಿಮ್ಮ ಮಾರುಕಟ್ಟೆ ತಜ್ಞರ ಸಲಹೆಯನ್ನು ಪಡೆಯಿರಿ.

Read more Photos on
click me!

Recommended Stories