ಡಿಸೆಂಬರ್ 1 ರಿಂದ ವಾಣಿಜ್ಯ LPG ಸಿಲಿಂಡರ್‌ಗಳ ಬೆಲೆಯಲ್ಲಿ ಇಳಿಕೆಯಾಗಿದ್ದು, ಬಳಕೆದಾರರಿಗೆ ರಿಲೀಫ್ ಸಿಕ್ಕಿದೆ. ಆದರೆ, ದೇಶಾದ್ಯಂತ ಗೃಹ ಬಳಕೆಯ 14.2 ಕೆಜಿ ಸಿಲಿಂಡರ್‌ಗಳ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ, ಬೆಲೆಗಳು ಸ್ಥಿರವಾಗಿವೆ.
ಪ್ರತಿ ತಿಂಗಳಿನಂತೆ ಇಂದು ವಾಣಿಜ್ಯ LPG (ದ್ರವೀಕೃತ ಪೆಟ್ರೋಲಿಯಂ ಅನಿಲ) ಸಿಲಿಂಡರ್ ಮತ್ತು ದೇಶೀಯ ಸಿಲಿಂಡರ್‌ಗಳ ದರಗಳನ್ನು ಡಿಸೆಂಬರ್ 1 ರಂದು ನವೀಕರಿಸಲಾಗಿದೆ. ವಾಣಿಜ್ಯ ಸಿಲಿಂಡರ್ ಬಳಕೆದಾರರಿಗೆ ಮತ್ತೊಮ್ಮೆ ರಿಲೀಫ್ ಸಿಕ್ಕಿದೆ. ಗೃಹ ಬಳಕೆಯ LPG ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
25
ಪ್ರಮುಖ ನಗರಗಳಲ್ಲಿ ದರ
ಇಂದು, ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳ ಸಿಲಿಂಡರ್‌ಗಳ ಬೆಲೆಯಲ್ಲಿ ₹10 ರಷ್ಟು ಕಡಿಮೆ ಮಾಡಲಾಗಿದೆ. ಇಂದಿನಿಂದ ದೆಹಲಿಯಲ್ಲಿ 19 ಕೆಜಿ ಎಲ್‌ಪಿಜಿ ಸಿಲಿಂಡರ್ 1590.50 ರೂ. ಬದಲಿಗೆ 1580.50 ರೂ.ಗೆ ಲಭ್ಯವಾಗಲಿದೆ. ಕೋಲ್ಕತ್ತಾದಲ್ಲಿ ಈಗ 1684 ರೂ.ಗೆ ಲಭ್ಯವಾಗಲಿದೆ. ಮೊದಲು ಇದು 1694 ರೂ.ಗೆ ಲಭ್ಯವಿತ್ತು. ಇಲ್ಲಿಯೂ ಸಹ 10 ರೂ.ಗಳ ಪರಿಹಾರವಿದೆ.
35
ವಾಣಿಜ್ಯ ಸಿಲಿಂಡರ್ ಬೆಲೆ
ಮುಂಬೈನಲ್ಲಿಂದು ವಾಣಿಜ್ಯ ಸಿಲಿಂಡರ್ ಬೆಲೆ 1531.50 ರೂ.ಗೆ ಸಿಗಲಿದೆ. ಮೊದಲು (ನವೆಂಬರ್‌ನಲ್ಲಿ) ಇದರ ಬೆಲೆ 1542 ರೂ.ಗೆ ಇತ್ತು. ಚೆನ್ನೈನಲ್ಲಿ, ಇಂದಿನಿಂದ ವಾಣಿಜ್ಯ ಸಿಲಿಂಡರ್ 1739.50 ರೂ.ಗೆ ಲಭ್ಯವಿರುತ್ತದೆ. ಮೊದಲು ಇದರ ಬೆಲೆ 1750 ರೂ.ಗೆ ಇತ್ತು. ಇನ್ನು ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ 19 ಕೆಜಿ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯಲ್ಲಿಯೂ 1,654 ರೂಪಾಯಿಗೆ ಸಿಗಲಿದೆ. ಬೆಂಗಳೂರಿನಲ್ಲಿ 10.50 ರೂ. ಇಳಿಕೆಯಾಗಿದೆ.
ಇಂಡಿಯನ್ ಆಯಿಲ್‌ನ ದತ್ತಾಂಶದ ಆಧಾರದ ಮೇಲೆ, ಭಾರತದಲ್ಲಿ ಎಲ್‌ಪಿಜಿ (ದ್ರವೀಕೃತ ಪೆಟ್ರೋಲಿಯಂ ಅನಿಲ) ಬೆಲೆಗಳು, 14.2 ಕೆಜಿ ಗೃಹಬಳಕೆ ಸಿಲಿಂಡರ್ ಪ್ರಸ್ತುತ ದೆಹಲಿಯಲ್ಲಿ ₹853, ಮುಂಬೈನಲ್ಲಿ ₹852.50 ಮತ್ತು ಲಕ್ಕೋದಲ್ಲಿ ₹890.50 ಗೆ ಲಭ್ಯವಿದೆ. ಕಾರ್ಗಿಲ್‌ನಲ್ಲಿ ₹985.5, ಪುಲ್ವಾಮಾದಲ್ಲಿ ₹969 ಮತ್ತು ಬಾಗೇಶ್ವರದಲ್ಲಿ ₹890.5 ಆಗಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 14 ಕೆಜಿ ಗೃಹ ಬಳಕೆ ಸಿಲಿಂಡರ್ ಬೆಲೆ 855 ರೂಪಾಯಿ ಆಗಿದೆ. 5 ಕೆಜಿ ಸಿಲಿಂಡರ್ ಬೆಲೆ 318.50 ರೂ, 47.5 ಕೆಜಿ ಸಿಲಿಂಡರ್ ಬೆಲೆ 4,132.50 ರೂಪಾಯಿ ಆಗಿದೆ. ನವೆಂಬರ್‌ನಲ್ಲಿ 19 ಕೆಜಿ ಸಿಲಿಂಡರ್ ಬೆಲೆಯಲ್ಲಿ 4.50 ರೂ. ಕುಸಿತವಾಗಿತ್ತು.