ಅದೃಷ್ಟ ಕೂಡ ಡಿಸ್ಕೌಂಟ್‌ನಲ್ಲಿ ಬರುತ್ತೆ, ಆದರೆ ದುರದೃಷ್ಟ ಬೋನಸ್ ಜೊತೆ ಬರುತ್ತೆ. ಇದು ಒಂದು ಸಿನಿಮಾದ ಡೈಲಾಗ್. ಅದೃಷ್ಟ ಡಿಸ್ಕೌಂಟ್‌ನಲ್ಲಿ ಬರುತ್ತೆ ಅನ್ನೋದಕ್ಕೆ ಲಾಟರಿಗಳೇ ಬೆಸ್ಟ್ ಉದಾಹರಣೆ. ಲಾಟರಿಯಲ್ಲಿ ಒಂದು ಕೋಟಿ ಗೆದ್ದರೆ ಕೈಗೆ ಎಷ್ಟು ಹಣ ಸಿಗುತ್ತೆ ಗೊತ್ತಾ?
ಲಾಟರಿ ಗೆಲ್ಲಬೇಕು ಅಂತ ಯಾರಿಗೆ ತಾನೇ ಆಸೆ ಇರಲ್ಲ ಹೇಳಿ. ಒಂದೇ ಟಿಕೆಟ್‌ನಿಂದ ಜೀವನ ಬದಲಾಗುತ್ತೆ ಅನ್ನೋ ನಂಬಿಕೆ ಬಹಳ ಜನರಲ್ಲಿ ಇರುತ್ತೆ. ಒಂದು ಕೋಟಿ ರೂಪಾಯಿ ಲಾಟರಿ ಹೊಡೆದರೆ ತಕ್ಷಣ ಕೋಟ್ಯಾಧಿಪತಿಗಳಾದೆವು ಅಂದುಕೊಳ್ಳುತ್ತಾರೆ. ಆದರೆ, ವಾಸ್ತವ ಸ್ವಲ್ಪ ಬೇರೆಯೇ ಇರುತ್ತೆ. ಲಾಟರಿ ಗೆದ್ದ ಪೂರ್ತಿ ಹಣ ನೇರವಾಗಿ ಖಾತೆಗೆ ಬರುತ್ತಾ ಅಂದರೆ, ಉತ್ತರ ಇಲ್ಲ ಅಂತಾನೇ ಹೇಳಬೇಕು. ಅದರಿಂದ ದೊಡ್ಡ ಮೊತ್ತದ ತೆರಿಗೆ ಕಟ್ ಆಗುತ್ತೆ.
26
ಲಾಟರಿ ಮೇಲೆ ಯಾಕೆ ತೆರಿಗೆ ಬೀಳುತ್ತೆ?
ಭಾರತದಲ್ಲಿ ಗಳಿಸುವ ಪ್ರತಿಯೊಂದು ಆದಾಯವೂ ಆದಾಯ ತೆರಿಗೆ ವ್ಯಾಪ್ತಿಗೆ ಬರುತ್ತೆ. ಲಾಟರಿ, ಗೇಮ್ ಶೋ, ಕುದುರೆ ರೇಸ್, ಕಾರ್ಡ್ಸ್ ಆಟ, ಕ್ರಾಸ್‌ವರ್ಡ್ ಸ್ಪರ್ಧೆಗಳಲ್ಲಿ ಗೆದ್ದ ಹಣವನ್ನೂ ಆದಾಯ ಅಂತಾನೇ ಪರಿಗಣಿಸಲಾಗುತ್ತೆ. ಆದಾಯ ತೆರಿಗೆ ಕಾಯ್ದೆ 1961ರ ಪ್ರಕಾರ, ಲಾಟರಿಯಿಂದ ಬಂದ ಹಣ ತೆರಿಗೆ ಪಾವತಿಸಬೇಕಾದ ಆದಾಯವೇ ಆಗಿದೆ. ಅದಕ್ಕಾಗಿಯೇ ಲಾಟರಿ ಗೆದ್ದ ತಕ್ಷಣ ತೆರಿಗೆ ಅನ್ವಯವಾಗುತ್ತೆ.
36
ಲಾಟರಿ ಗೆದ್ದ ಹಣದ ಮೇಲೆ ಎಷ್ಟು ಶೇಕಡಾ ತೆರಿಗೆ ಕಟ್ ಆಗುತ್ತೆ?
ಇತರ ಆದಾಯಗಳ ಮೇಲೆ ಸ್ಲ್ಯಾಬ್ ಪ್ರಕಾರ ತೆರಿಗೆ ಇದ್ದರೆ, ಲಾಟರಿ ಗೆಲುವಿನ ಮೇಲೆ ಫಿಕ್ಸೆಡ್ ರೇಟ್ ಇರುತ್ತೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 115BB ಪ್ರಕಾರ, ಲಾಟರಿ ಗೆಲುವಿನ ಮೇಲೆ ನೇರವಾಗಿ 30% ತೆರಿಗೆ ವಿಧಿಸಲಾಗುತ್ತೆ. ಇದರಲ್ಲಿ ಯಾವುದೇ ವಿನಾಯಿತಿ ಇರುವುದಿಲ್ಲ. ಇದರ ಜೊತೆಗೆ ಸರ್‌ಚಾರ್ಜ್, ಶಿಕ್ಷಣ ಸೆಸ್ ಮತ್ತು ಉನ್ನತ ಶಿಕ್ಷಣ ಸೆಸ್ ಕೂಡ ಅನ್ವಯವಾಗುತ್ತೆ.
ಒಬ್ಬ ವ್ಯಕ್ತಿ ಲಾಟರಿಯಲ್ಲಿ 1 ಕೋಟಿ ರೂ. ಗೆದ್ದರೆ, ಮೊದಲು 30% ತೆರಿಗೆ ಕಟ್ ಆಗುತ್ತೆ. ಅಂದರೆ 30 ಲಕ್ಷ ರೂ. ಅದರ ಮೇಲೆ 10% ಸರ್‌ಚಾರ್ಜ್ ಅನ್ವಯವಾಗುತ್ತೆ. ಶಿಕ್ಷಣ ಸೆಸ್ ಕೂಡ ಸೇರುತ್ತೆ. ಇದೆಲ್ಲಾ ಸೇರಿ ಸುಮಾರು 33 ಲಕ್ಷ ರೂ. ವರೆಗೆ ತೆರಿಗೆ ಕಟ್ ಆಗುತ್ತೆ. ಅಂದರೆ, ಒಂದು ಕೋಟಿ ಲಾಟರಿ ಗೆದ್ದರೂ ಕೈಗೆ ಸಿಗೋದು ಸುಮಾರು 67 ಲಕ್ಷ ರೂ. ಮಾತ್ರ.
56
ಲಾಟರಿ ಗೆದ್ದರೆ ನೆನಪಿಡಬೇಕಾದ ಮುಖ್ಯ ವಿಷಯಗಳು
ಲಾಟರಿ ಗೆಲುವಿನ ಮೇಲೆ ಯಾವುದೇ ಬೇಸಿಕ್ ವಿನಾಯಿತಿ ಇರುವುದಿಲ್ಲ. ಬೇರೆ ಆದಾಯಗಳಂತೆ ತೆರಿಗೆ ಕಡಿಮೆ ಮಾಡಿಕೊಳ್ಳುವ ಅವಕಾಶವೂ ಇಲ್ಲ. ಗೆದ್ದ ಮೊತ್ತದಿಂದಲೇ ತೆರಿಗೆ ಕಟ್ ಮಾಡಿ ಉಳಿದ ಹಣವನ್ನು ಮಾತ್ರ ವಿಜೇತರಿಗೆ ನೀಡಲಾಗುತ್ತೆ. ಹಾಗಾಗಿ, ಲಾಟರಿ ಗೆದ್ದ ತಕ್ಷಣ ಖರ್ಚಿನ ಯೋಜನೆ ಮಾಡುವ ಮುನ್ನ ತೆರಿಗೆ ವಿಷಯವನ್ನು ಖಂಡಿತ ನೆನಪಿಟ್ಟುಕೊಳ್ಳಬೇಕು. ಇಲ್ಲದಿದ್ದರೆ, ನಿರೀಕ್ಷಿಸಿದ ಮೊತ್ತಕ್ಕೂ ಕೈಗೆ ಬಂದ ಹಣಕ್ಕೂ ದೊಡ್ಡ ವ್ಯತ್ಯಾಸ ಕಾಣಿಸುತ್ತೆ.
66
ಗಮನಿಸಿ:
ಈ ಮಾಹಿತಿಯನ್ನು ಇಂಟರ್‌ನೆಟ್‌ನಲ್ಲಿ ಲಭ್ಯವಿರುವ ತೆರಿಗೆ ನಿಯಮಗಳ ಆಧಾರದ ಮೇಲೆ ನೀಡಲಾಗಿದೆ. ತೆರಿಗೆ ದರಗಳು ಮತ್ತು ನಿಯಮಗಳು ಬದಲಾಗುವ ಸಾಧ್ಯತೆ ಇರುತ್ತದೆ. ಖಚಿತವಾದ ಲೆಕ್ಕಾಚಾರಕ್ಕಾಗಿ ತೆರಿಗೆ ತಜ್ಞರ ಸಲಹೆ ಪಡೆಯುವುದು ಉತ್ತಮ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.