ಮಕ್ಕಳ ವಿದ್ಯಾಭ್ಯಾಸದ ಚಿಂತೆ ಕಾಡುತ್ತಿದೆಯಾ? ಇಲ್ಲಿದೆ ಉತ್ತಮ ಉಳಿತಾಯ ಯೋಜನೆ!

Published : Nov 11, 2024, 02:38 PM IST

ನೀವು ಕೂಡ ನಿಮ್ಮ ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ಈಗಿನಿಂದಲೇ ಹಣ ಉಳಿಸಬೇಕೆಂದು ಯೋಚಿಸುತ್ತಿದ್ದರೆ, ಈ ಕೆಳಗಿನ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು.  

PREV
15
ಮಕ್ಕಳ ವಿದ್ಯಾಭ್ಯಾಸದ ಚಿಂತೆ ಕಾಡುತ್ತಿದೆಯಾ? ಇಲ್ಲಿದೆ ಉತ್ತಮ ಉಳಿತಾಯ ಯೋಜನೆ!

ಮಕ್ಕಳ ವಿದ್ಯಾಭ್ಯಾಸ ಈಗ ಸುಲಭವಲ್ಲ. ಎಲ್‌ಕೆಜಿ, ಯುಕಿಜೆಯಿಂದಲೇ ಲಕ್ಷ ಲಕ್ಷ ರೂಪಾಯಿ ಡೋನೇಶನ್ ಫೀಸ್ ಕಟ್ಟಿ ಓದಿಸುವುದು ಪೋಷಕರಿಗೆ ಸವಾಲು. ಅದೆಷ್ಟೇ ಕಷ್ಟವಾದರೂ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಪೋಷಕರು ಪ್ರಯತ್ನಿಸುತ್ತಾರೆ. ಆದರೆ ಆರಂಭಿಕ ಹಂತದಲ್ಲಿ ಹಣ ಹೊಂದಿಸಿ ಶಿಕ್ಷಣ ಪೂರೈಸಲು ಸಾಧ್ಯವಿದೆ. ಆದರೆ ಕಾಲೇಜು, ಉನ್ನತ ವ್ಯಾಸಾಂಗ, ವೃತ್ತಿಪರ ಕೋರ್ಸ್‌ಗೆ ಹೆಚ್ಚಿನ ಫೀಸ್ ಪಾವತಿಸುವುದು ಕಷ್ಟವಾಗಲಿದೆ. ಈ ವೇಳೆ ಸಣ್ಣ ಸಣ್ಣ ಉಳಿತಾಯ ಯೋಜನೆ ಮೂಲಕ ಹೂಡಿಕೆ ಮಾಡಿದ್ದರೆ ಮಕ್ಕಳ ಭವಿಷ್ಯ ಸುಭದ್ರವಾಗಲಿದೆ. 

25

ಪಿಪಿಎಫ್ ಉಳಿತಾಯ ಯೋಜನೆ ಮೂಲಕ ಹೂಡಿಕೆ ಮಾಡುತ್ತಾ ಹೋದರೆ ಮಕ್ಕಳು ದೊಡ್ಡವರಾಗಿ ಕಾಲೇಜು ಉನ್ನತ ವ್ಯಾಸಾಂಗದ ವೇಳೆ ಉತ್ತಮ ಮೊತ್ತ ಕೈಸೇರಲಿದೆ. ಪಿಪಿಎಫ್ 15 ವರ್ಷದ ಸುದೀರ್ಘ ಹೂಡಿಕೆ ಯೋಜನೆ. ತಿಂಗಳಿಗೆ 500 ರೂಪಾಯಿಯಿಂದ ಹೂಡಿಕೆ ಆರಂಭಿಸಲು ಸಾಧ್ಯವಿದೆ  ಉದಾಹರಣೆಗೆ 2,000 ರೂಪಾಯಿ ತಿಂಗಳಿಗೆ ಹೂಡಿಕೆ ಮಾಡುತ್ತಾ ಹೋದರೆ ಹೂಡಿಕೆ ಮೊತ್ತ 3,60,000 ರೂಪಾಯಿ, ಬಡ್ಡಿ ಮೊತ್ತ 2,90,913 ರೂಪಾಯಿ ಸಿಗಲಿದೆ. 15 ವರ್ಷಗಳಲ್ಲಿ  6,50,913 ರೂಪಾಯಿ ಕೈಸೇರಲಿದೆ

35

ಹೆಚ್ಚಿನ ಆದಾಯ ನೀಡುವ ಹೂಡಿಕೆಗಳು
ಹಲವು ಉಳಿತಾಯ ಯೋಜನೆಗಳು ಲಭ್ಯವಿದೆ. ಎಸ್ಐಪಿ ಯೋಜನೆ ಮೂಲಕ ಹೂಡಿಕೆ ಮಾಡಿದರೆ ಗರಿಷ್ಠ ಆದಾಯ ಗಳಿಸಬಹುದು. ಪ್ರತಿ ತಿಂಗಳು ಎಸ್ಐಪಿ ಮೂಲಕ 5,000 ರೂಪಾಯಿ ಹೂಡಿಕೆ ಮಾಡಿದರೆ ಶೇಕಡಾ 12ರಷ್ಟು ಬಡ್ಡಿ ಸಿಗಲಿದೆ. ಹೂಡಿಕೆ ಮೊತ್ತ 6 ಲಕ್ಷ ರೂಪಾಯಿ ಆದರೆ, 5.62 ಲಕ್ಷ ರೂಪಾಯಿ ಬಡ್ಡಿ ಸಿಗಲಿದೆ. ಈ ಮೂಲಕ 11.62 ಲಕ್ಷ ರೂಪಾಯಿ ಒಟ್ಟು ಮೊತ್ತ ಸಿಗಲಿದೆ. ಇನ್ನು ವಾಲ್ಯುಂಟರಿ ಪ್ರೊವಿಡೆಂಟ್ ಫಂಡ್(VPF) ಯುನಿಟ್ ಲಿಂಕ್ಡ್ ಇನ್ಶುರೆನ್ಸ್ ಪ್ಲಾನ್(ULIPs),  ನ್ಯಾಷನ್ಲ್ ಸೇವಿಂಗ್ಸ್ ಸರ್ಟಿಫಿಕೇಟ್(NSC), ಮಹಿಳಾ ಸಮ್ಮಾನ್ ಯೋಜನೆ ಸೇರಿದಂತೆ ಹಲವು ಉಳಿತಾಯ ಯೋಜನಗಳು ಲಭ್ಯವಿದೆ.

45

ಹೆಣ್ಣುಮಕ್ಕಳಿಗಾಗಿ ಸುಕನ್ಯ ಸಮೃದ್ದಿ ಯೋಜನೆ ಸೇರಿದಂತೆ ಹಲವು ಯೋಜನೆಗಳು ಲಭ್ಯವಿದೆ. ಇನ್ನು ಮಕ್ಕಳ ಹೆಸರಿನಲ್ಲೇ ಜೀವ ವಿಮೆ ಸೌಲಭ್ಯಗಳು ಲಭ್ಯವಿದೆ. ಸಣ್ಣ ವಯಸ್ಸಿನಿಂದ ಮಕ್ಕಳ ಹೆಸರಿನಲ್ಲಿ ಉಳಿತಾಯ ಆರಂಭಿಸಿದರೆ ಕಡಿಮೆ ಮೊತ್ತದಲ್ಲಿ ದೊಡ್ಡ ಮೊತ್ತವನ್ನು ಪಡೆಯಲು ಸಾಧ್ಯವಿದೆ. ಇದು ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಲಿದೆ.

55

ಕಿಸಾನ್ ವಿಕಾಸ್ ಪತ್ರ ಸೇರಿದಂತೆ ಹಲವು ಯೋಜನೆಗಳ ಮೂಲಕ ಹೂಡಿಕೆ ಮಾಡಿ ಮಕ್ಕಳ ಭವಿಷ್ಯವನ್ನು ಸುಭದ್ರವಾಗಿಸಬಹುದು. ಇನ್ನು ಪಿಂಚಣಿ ಸೇರಿದಂತೆ ಇತರ ಯೋಜನಗಳ ಮೂಲಕ ಹೂಡಿಕೆ ಮಾಡಿ ನಿವತ್ತಿ ವೇಳೆ ಜೀವನಕ್ಕೂ ನೆರವಾಗಲಿದೆ. 

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories