ಪಿಂಚಣಿ ಪಡೆಯಲು ಲೈಫ್ ಸರ್ಟಿಫಿಕೇಟ್ ಕಡ್ಡಾಯ, ಆನ್‌ಲೈನ್-ಆಫ್‌ಲೈನ್ ಮೂಲಕ ಸಲ್ಲಿಕೆ ಹೇಗೆ?

Published : Nov 02, 2025, 04:31 PM IST

ಪಿಂಚಣಿ ಪಡೆಯಲು ಲೈಫ್ ಸರ್ಟಿಫಿಕೇಟ್ ಕಡ್ಡಾಯ, ಆನ್‌ಲೈನ್-ಆಫ್‌ಲೈನ್ ಮೂಲಕ ಸಲ್ಲಿಕೆ ಹೇಗೆ? ಜೀವನ್ ಪ್ರಮಾಣ ಪತ್ರ ಸಲ್ಲಿಸದಿದ್ದರೆ ಪಿಂಚಣಿ ಪಡೆಯಲು ಸಮಸ್ಯೆಗಳು ಎದುರಾಗಲಿದೆ. ಸುಲಭವಾಗಿ ಈ ಪ್ರಕ್ರಿಯೆ ಮುಗಿಸುವುದು ಹೇಗೆ?

PREV
16
ನವೆಂಬರ್ ತಿಂಗಳಲ್ಲಿ ಸಲ್ಲಿಕೆ ಮಾಡಬೇಕು ಪ್ರಮಾಣಪತ್ರ

ಪಿಂಚಣಿದಾರರು ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಜೀವನ ಪ್ರಮಾಣ ಪತ್ರ ಅಥವಾ ಲೈಫ್ ಸರ್ಟಿಫಿಕೇಟ್ ಸಲ್ಲಿಸಬೇಕು. ಪಿಂಚಣಿದಾರರು ತಮ್ಮ ಲೈಫ್ ಸರ್ಟಿಫಿಕೇಟ್ ಸಲ್ಲಿಕೆ ಮಾಡಿದರೆ ಮಾತ್ರ ಪಿಂಚಣಿ ಪಡೆಯಲು ಸಾಧ್ಯವಾಗುತ್ತದೆ. ಎರಡು ವಿಧಾನದ ಮೂಲಕ ಈ ಪತ್ರ ಸಲ್ಲಿಕೆ ಮಾಡಬಹುದು. ಒಂದು ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಮತ್ತೊಂದು ಬಯೋಮೆಟ್ರಿಕ್ ಆಧಾರಿತ ಜೀವನ್ ಪ್ರಮಾಣ ಪತ್ರ.

26
ಯಾರೆಲ್ಲಾ ಪಿಂಚಣಿದಾರರು ಲೈಫ್ ಸರ್ಟಿಫಿಕೇಟ್ ಸಲ್ಲಿಕೆ ಮಾಡಬೇಕು

80 ವರ್ಷ ಮೇಲ್ಪಟ್ಟ ಪಿಂಚಣಿದಾರರು ಕಡ್ಡಾಯವಾಗಿ ಪ್ರತಿ ವರ್ಷ ನೆವೆಂಬರ್ ತಿಂಗಳಲ್ಲಿ ಈ ಪ್ರಮಾಣಪತ್ರ ಸಲ್ಲಿಕೆ ಮಾಡಬೇಕು. ಈ ವರ್ಷ ಇದರ ಅವಧಿ ಅಕ್ಟೋಬರ್ 1, 2025ರಿಂದ ನವೆಂಬರ್ 30, 2025ರ ವರೆಗೆ ನೀಡಲಾಗಿದೆ. ಈ ತಿಂಗಳ ಅಂತ್ಯದೊಳಗೆ ಸಲ್ಲಿಕೆ ಮಾಡದಿದ್ದರೆ ಪಿಂಚಣಿ ಮೊತ್ತ ಖಾತೆಗೆ ಜಮೆ ಆಗುವುದಿಲ್ಲ.

36
ಪ್ರಮಾಣಪತ್ರ ಸಲ್ಲಿಕೆ ಮೊದಲು ಈ ದಾಖಲೆ ನಿಮ್ಮ ಕೈಯಲ್ಲಿರಲಿ

ಜೀವನ ಪ್ರಮಾಣಪತ್ರ ಅಥವಾ ಲೈಫ್ ಸರ್ಟಿಫಿಕೇಟ್ ಸಲ್ಲಿಕೆ ಮಾಡುವ ಮೊದಲು ಕೆಲ ದಾಖಲೆಗಳನ್ನು ತೆಗೆದಿಟ್ಟುಕೊಳ್ಳಿ. ಪ್ರಮುಖವಾಗಿ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ, ಪೆನ್ಶನ್ ಪೇಮೆಂಟ್ ಆರ್ಡರ್ (ಪಿಪಿಒ), ಬ್ಯಾಂಕ್ ಖಾತೆ ಸಂಖ್ಯೆ ಸೇರಿ ಬ್ಯಾಂಕ್ ವಿವರ, ಪಿಂಚಣಿ ಹಾಕುತ್ತಿರುವ ಸಂಸ್ಥೆಯ ಹೆಸರು, ವಿಳಾಸ ದಾಖಲೆಗಳು ನಿಮ್ಮ ಬಳಿ ಇರಲಿ.

46
ಆಫ್ ಲೈನ್ ಮೂಲಕ ಸಲ್ಲಿಕೆ ಹೇಗೆ?

ಬ್ಯಾಂಕ್ ಶಾಖೆ ಮೂಲಕ, ಹತ್ತಿರದ ಒನ್ ಕೇಂದ್ರದ ಮೂಲಕ, ನಾಗರೀಕ ಸೇವಾ ಕೇಂದ್ರದ ಮೂಲಕ, ಪೋಸ್ಟ್ ಆಫೀಸ್ ಡೋರ್ ಸ್ಟೆಪ್ ಬ್ಯಾಂಕಿಂಗ್ ಮೂಲಕವೂ ಸಲ್ಲಿಕೆ ಮಾಡಲು ಸಾಧ್ಯವಿದೆ. ಅರ್ಜಿ ನಮೂನೆ ಭರ್ತಿ ಮಾಡಿ ಪಿಂಚಣಿ ಜಮೆ ಆಗುವ ಬ್ಯಾಂಕ್ ಶಾಖೆ, ಅಥವಾ ಪೋಸ್ಟ್ ಆಫೀಸ್ ಡೋರ್ ಸ್ಟೆಪ್ ಬ್ಯಾಂಕಿಂಗ್ ಸೇವೆ, ಅಥವಾ ನಾಗರೀಕ ಸೇವಾ ಕೇಂದ್ರದ ಮೂಲಕ ಅರ್ಜಿ ಸಲ್ಲಿಕೆ ಮಾಡಬೇಕು.

ಆಫ್ ಲೈನ್ ಮೂಲಕ ಸಲ್ಲಿಕೆ ಹೇಗೆ?

56
ಆನ್‌ಲೈನ್ ಸಲ್ಲಿಕೆ ಹೇಗೆ?

ಲೈಫ್ ಸರ್ಟಿಫಿಕೇಟ್ ಆನ್‌ಲೈನ್ ಮೂಲಕ ಸಲ್ಲಿಕೆ ಮಾಡಲು ಬಯಸಿದರೆ ಲ್ಯಾಪ್‌ಟಾಪ್, ಡೆಸ್ಕ್‌ಟಾಪ್ ಅಥವಾ ಮೊಬೈಲ್ ಮೂಲಕ https://jeevanpramaan.gov.in ಅಧಿಕೃತ ವೆಬ್‌ಸೈಟ್ ಕ್ಲಿಕ್ ಮಾಡಿ ಅಧಾರ್ ಅಥೆಂಟಿಕೇಶನ್ ಮೂಲಕ ಲಾಗಿನ್ ಆಗಬೇಕು. ಬಯೋಮೆಟ್ರಿಕ್ ಸೇರಿದಂತೆ ಕೆಲ ದಾಖಲೆಗಳನ್ನು ಒದಗಿಸಿ ಅಥೆಂಟಿಕೇಶನ್ ಮಾಡಿಸಿಕೊಳ್ಳಬೇಕು. ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ಸಬ್‌ಮಿಟ್ ಮಾಡಬೇಕು.

ಆನ್‌ಲೈನ್ ಸಲ್ಲಿಕೆ ಹೇಗೆ?

66
ಉಮಂಗ್ ಆ್ಯಪ್ ಮೂಲಕ ಸಲ್ಲಿಕೆ ಹೇಗೆ?

ಗೂಗಲ್ ಪ್ಲೇ ಸ್ಟೋರ್ ಮೂಲಕ ಉಮಂಗ್ (UMANG)ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ. ಲಾಗಿನ್ ಬಳಿಕ ಜನರೇಟ್ ಲೈಫ್ ಸರ್ಟಿಫಿಕೇಟ್ ಕ್ಲಿಕ್ ಮಾಡಿ ಅಗತ್ಯ ದಾಖಲೆ ಮಾಹಿತಿ ಭರ್ತಿ ಮಾಡಿ. ಬಳಿಕ ಜನರೇಟ್ ಬಟನ್ ಕ್ಲಿಕ್ ಮಾಡಿದರೆ ಲೈಫ್ ಸರ್ಟಿಫಿಕೇಟ್ ಜನರೇಟ್ ಆಗಲಿದೆ. ಈ ಸರ್ಟಿಫಿಕೇಟ್ ಅಲ್ಲೆ ಸಲ್ಲಿಕೆ ಮಾಡಿದರೆ ಕೆಲಸ ಮುಗಿಯಿತು.

ಉಮಂಗ್ ಆ್ಯಪ್ ಮೂಲಕ ಸಲ್ಲಿಕೆ ಹೇಗೆ?

Read more Photos on
click me!

Recommended Stories