2000 ರೂ. ನೋಟು ವಾಪಸ್‌ಗೆ ಇವತ್ತೇ ಕೊನೆಯ ದಿನ: ಗಡುವು ಮುಕ್ತಾಯ ಬಳಿಕ ನೋಟು ಅಮಾನ್ಯ?

First Published | Sep 30, 2023, 8:10 AM IST

ಕೊನೆಯ ದಿನ ಸಾರ್ವಜನಿಕರು ತಮ್ಮ ಹತ್ತಿರದ ಯಾವುದೇ ಬ್ಯಾಂಕ್‌ಗೆ ತೆರಳಿ ತಮ್ಮಲ್ಲಿರುವ 2,000 ರೂ. ಮುಖಬೆಲೆಯ ನೋಟುಗಳನ್ನು ಯಾವುದೇ ಬ್ಯಾಂಕುಗಳಲ್ಲಿ ನೀಡಿ ಇತರ ನೋಟುಗಳಿಂದ ಬದಲಾಯಿಸಿಕೊಳ್ಳಬಹುದು ಅಥವಾ ತಮ್ಮ ಬ್ಯಾಂಕ್‌ ಖಾತೆಯಲ್ಲಿ ಠೇವಣಿ ಮಾಡಬಹುದಾಗಿದೆ.

ಕಳೆದ ಮೇನಲ್ಲಿ 2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದುಕೊಂಡಿದ್ದ ಆರ್‌ಬಿಐ, ಬಳಿಕ ಅವುಗಳನ್ನು ಬ್ಯಾಂಕ್‌ಗೆ ಹಿಂದಿರುಗಿಸಲು ನೀಡಿದ್ದ 3 ತಿಂಗಳ ಗಡುವು (ಸೆಪ್ಟೆಂಬರ್‌ 30) ಶನಿವಾರ ಕೊನೆಗೊಳ್ಳಲಿದೆ.

ಹೀಗಾಗಿ ಕೊನೆಯ ದಿನ ಸಾರ್ವಜನಿಕರು ತಮ್ಮ ಹತ್ತಿರದ ಯಾವುದೇ ಬ್ಯಾಂಕ್‌ಗೆ ತೆರಳಿ ತಮ್ಮಲ್ಲಿರುವ 2,000 ರೂ. ಮುಖಬೆಲೆಯ ನೋಟುಗಳನ್ನು ಯಾವುದೇ ಬ್ಯಾಂಕುಗಳಲ್ಲಿ ನೀಡಿ ಇತರ ನೋಟುಗಳಿಂದ ಬದಲಾಯಿಸಿಕೊಳ್ಳಬಹುದು ಅಥವಾ ತಮ್ಮ ಬ್ಯಾಂಕ್‌ ಖಾತೆಯಲ್ಲಿ ಠೇವಣಿ ಮಾಡಬಹುದಾಗಿದೆ.

Tap to resize

ಈಗಾಗಲೇ ಚಲಾವಣೆಯಲ್ಲಿದ್ದ 3.32 ಲಕ್ಷ ಕೋಟಿ ರೂ. ಮೌಲ್ಯದ ನೋಟುಗಳ ಪೈಕಿ ಶೇ.93ರಷ್ಟು ನೋಟುಗಳು ಬ್ಯಾಂಕುಗಳಿಗೆ ಮರಳಿವೆ. ಹೀಗಾಗಿ ನೋಟು ಹಿಂದಿರುಗಿಸಲು ನೀಡಿರುವ ಗಡುವನ್ನು ವಿಸ್ತರಿಸುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ.

2016ರ ನವೆಂಬರ್ 8 ರಂದು ಆಗ ಚಲಾವಣೆಯಲ್ಲಿದ್ದ 1,000 ರೂ. ಮತ್ತು 500 ರೂ. ಮುಖಬೆಲೆಯ ನೋಟುಗಳನ್ನು ಏಕಾಏಕಿ ರದ್ದುಗೊಳಿಸಿದ್ದ ಆರ್‌ಬಿಐ, ಬಳಿಕ 2,000 ಮುಖಬೆಲೆಯ ನೋಟುಗಳನ್ನು ತಾತ್ಕಾಲಿಕ ಆರ್ಥಿಕ ವ್ಯವಸ್ಥೆಯನ್ನು ಸರಿದೂಗಿಸಲು ಜಾರಿಗೆ ತಂದಿತು. ಬಳಿಕ 2018-19ನೇ ಸಾಲಿನಲ್ಲೇ 2,000 ರೂ. ಮುಖಬೆಲೆಯ ನೋಟುಗಳ ಮುದ್ರಣವನ್ನು ನಿಲ್ಲಿಸಲಾಗಿತ್ತು.

2016 ರಲ್ಲಿ, 500 ಮತ್ತು 1,000 ರೂಪಾಯಿಗಳ ನೋಟುಗಳ ನಿಷೇಧದ ನಂತರ, ಸರ್ಕಾರವು ಈ ಮುಖಬೆಲೆಯ ನೋಟುಗಳನ್ನು ಹೊಂದಿರುವುದು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಿತ್ತು ಎಂಬುದು ಗಮನಿಸಬೇಕಾದ ಸಂಗತಿ.
 

ಅಲ್ಲದೆ, 500 ಅಥವಾ 1000 ರೂ.ಗಳ 10 ಕ್ಕಿಂತ ಹೆಚ್ಚು ಹಳೆಯ ನೋಟುಗಳನ್ನು ಹೊಂದಿರುವವರು ಜೈಲು ಶಿಕ್ಷೆಯೊಂದಿಗೆ ಕನಿಷ್ಠ 10,000 ರೂ. ದಂಡ ವಿಧಿಸಲಾಗುತ್ತದೆ ಎಂದು ಹೇಳಿದೆ. ಸೆಪ್ಟೆಂಬರ್ 30 ರ ನಂತರ 2,000 ರೂ. ನೋಟುಗಳಿಗೆ ಸಹ ಇದೇ ರೀತಿಯ ದಂಡ ಅನ್ವಯಿಸಬಹುದು ಎಂದು ನಿರೀಕ್ಷಿಸಲಾಗಿದೆ.

Latest Videos

click me!