ಮುಂಬರುವ ವಾರಗಳಲ್ಲಿ ಹಲವು ಕಂಪನಿಗಳು ಬೋನಸ್ ಷೇರುಗಳು, ಡಿವಿಡೆಂಡ್ ಹಾಗೂ ಷೇರು ಮರುಖರೀದಿ ಘೋಷಿಸಿವೆ. ವಿಎಸ್‌ಟಿ ಇಂಡಸ್ಟ್ರೀಸ್, ದೀಪಕ್ ಫರ್ಟಿಲೈಸರ್ಸ್, ಗೋವಾ ಕಾರ್ಬನ್ ಸೇರಿದಂತೆ ಹಲವು ಕಂಪನಿಗಳ ಷೇರುಗಳ ಮೇಲೆ ಪರಿಣಾಮ ಬೀರಲಿದೆ.
ಷೇರು ಮಾರುಕಟ್ಟೆಯಲ್ಲಿ ಮುಂಬರುವ ವಾರಗಳು ಬೋನಸ್ ಸ್ಟಾಕ್ಸ್, ಸ್ಟಾಕ್ ವಿಭಜನೆಗಳು ಹಾಗೂ ಷೇರು ಮರುಖರೀದಿ ಮಾಡುವ ಕಂಪನಿಗಳ ರೆಕಾರ್ಡ್ ಡೇಟ್‌ಗಳಿಂದಲೇ ತುಂಬಿವೆ. ಯಾವ ಕಂಪನಿಗಳು ಏನು ಘೋಷಣೆ ಮಾಡಿದೆ ಅನ್ನೋದರ ವಿವರ ಇಲ್ಲಿದೆ.
ಡಿ ಮಾರ್ಟ್ ಮಾಲೀಕತ್ವ ಹೊಂದಿರುವ ಅವೆನ್ಯೂ ಸೂಪರ್‌ಮಾರ್ಟ್‌ನ ಮಾಲೀಕ ರಾಧಾಕೃಷ್ಣ ಧಮಾನಿ ಅವರ ಪೋರ್ಟ್‌ಫೋಲಿಯೋದಲ್ಲಿರುವ ಪ್ರಮುಖ ಷೇರು ಇದು. ಸೆಪ್ಟೆಂಬರ್ 6ರ ಒಳಗಾಗಿ ಯಾರ ಬಳಿ ವಿಎಸ್‌ಟಿ ಇಂಡಸ್ಟ್ರೀಸ್‌ನ ಷೇರುಗಳು ಇರುತ್ತವೆಯೋ ಪ್ರತಿ ಷೇರಿಗೆ 10 ಷೇರುಗಳನ್ನು ಕಂಪನಿ ಉಚಿತವಾಗಿ ನೀಡಲಿದೆ. ತಂಬಾಕು ಉತ್ಪನ್ನಗಳ ಕಂಪನಿ ಇದೇ ಮೊದಲ ಬಾರಿಗೆ ಬೋನಸ್ ಷೇರುಗಳನ್ನು ನೀಡುತ್ತಿದೆ.
310
ದೀಪಕ್ ಫರ್ಟಿಲೈಸರ್ಸ್ (Deepak Fertilisers)
ಕೈಗಾರಿಕಾ ಮತ್ತು ಕೃಷಿ ರಾಸಾಯನಿಕಗಳು, ಬೆಳೆ ಪೋಷಕಾಂಶಗಳು ಮತ್ತು ರಸಗೊಬ್ಬರಗಳ ಭಾರತೀಯ ತಯಾರಕ ಕಂಪನಿ ದೀಪಕ್ ಫರ್ಟಿಲೈಸರ್ಸ್ ಮತ್ತು ಪೆಟ್ರೋಕೆಮಿಕಲ್ಸ್ ಕಾರ್ಪೊರೇಷನ್ ಲಿಮಿಟೆಡ್. ಪ್ರತಿ ಷೇರಿಗೆ 8.5 ರೂಪಾಯಿ ಡಿವಿಡೆಂಡ್ ಘೋಷಣೆ ಮಾಡಿದ್ದು, ಸೆಪ್ಟೆಂಬರ್ 3ರವರೆಗೆ ಈ ಕಂಪನಿಯ ಷೇರುಗಳನ್ನು ಹೊಂದಿರುವ ಹೂಡಿಕೆದಾರರಿಗೆ ಡಿವಿಡೆಂಡ್ ಪಾವತಿಯಾಗಲಿದೆ.
410
ಗೋವಾ ಕಾರ್ಬನ್ (Goa Carbon)
ಗೋವಾ ಕಾರ್ಬನ್ ಲಿಮಿಟೆಡ್ ಭಾರತೀಯ ಪೆಟ್ರೋಕೆಮಿಕಲ್ ಕಂಪನಿಯಾಗಿದೆ ಮತ್ತು ಕ್ಯಾಲ್ಸಿನ್ಡ್ ಪೆಟ್ರೋಲಿಯಂ ಕೋಕ್ ತಯಾರಿಕೆ ಮತ್ತು ಮಾರಾಟದಲ್ಲಿ ತೊಡಗಿಕೊಂಡಿದೆ. ಪ್ರತಿ ಷೇರಿಗೆ 10 ರೂಪಾಯಿಯಂತೆ ಡಿವಿಡೆಂಡ್ ಘೋಷಣೆ ಮಾಡಿದ್ದು, ಸೆಪ್ಟೆಂಬರ್ 3ಕ್ಕೆ ರೆಕಾರ್ಡ್ ಡೇಟ್ ಆಗಿ ಘೋಷಿಸಿದೆ. ನೀವು ಡಿವಿಡೆಂಡ್‌ಗೆ ಅರ್ಹರಾಗಲು ಬಯಸಿದರೆ ಅದರ ಈಕ್ವಿಟಿ ಷೇರುಗಳನ್ನು ಖರೀದಿಸಲು ಇಂದು ಕೊನೆಯ ದಿನವಾಗಿರುತ್ತದೆ.
510
ಗಲ್ಫ್ ಆಯಿಲ್ ಲೂಬ್ರಿಕೆಂಟ್ಸ್ (Gulf Oil Lubricants)
ಗಲ್ಫ್ ಆಯಿಲ್ ಲೂಬ್ರಿಕೆಂಟ್ಸ್ ತನ್ನ ತ್ರೈಮಾಸಿಕ ಫಲಿತಾಂಶಗಳೊಂದಿಗೆ ಪ್ರತಿ ಷೇರಿಗೆ ₹20 ರ ಅಂತಿಮ ಲಾಭಾಂಶವನ್ನು ಘೋಷಿಸಿತ್ತು ಮತ್ತು ಅದಕ್ಕೆ ದಾಖಲೆ ದಿನಾಂಕವನ್ನು ಸೆಪ್ಟೆಂಬರ್ 5 ಎಂದು ನಿಗದಿ ಮಾಡಿದೆ.
610
ಜಿಎನ್‌ಎಫ್‌ಸಿ (Gujarat Narmada Valley Fert & Chem. Ltd)
ರಸಗೊಬ್ಬರ ಕಂಪನಿಯಾದ ಜಿಎನ್‌ಎಫ್‌ಸಿ ಪ್ರತಿ ಷೇರಿಗೆ ₹16.5 ರ ಅಂತಿಮ ಲಾಭಾಂಶವನ್ನು ಈಗಾಗಲೇ ಘೋಷಣೆ ಮಾಡಿದೆ. ಅದಕ್ಕೆ ದಾಖಲೆ ದಿನಾಂಕವನ್ನು ಸೆಪ್ಟೆಂಬರ್ 6 ಎಂದು ನಿಗದಿ ಮಾಡಿದೆ.
710
ನ್ಯೂಕ್ಲಿಯಸ್ ಸಾಫ್ಟ್‌ವೇರ್ (Nucleus Software)
ನ್ಯೂಕ್ಲಿಯಸ್ ಸಾಫ್ಟ್‌ವೇರ್ ಷೇರು ಖರೀದಿಸಲು ಇಂದು ಕೊನೆಯ ದಿನವಾಗಿದೆ. ಷೇರಿನ ಮರುಖರೀದಿಗೆ ಅರ್ಹತೆ ಪಡೆಯಲು ಸೆಪ್ಟೆಂಬರ್ 3 ಕ್ಕೆ ರೆಕಾರ್ಡ್ ದಿನಾಂಕವನ್ನು ನಿಗದಿಪಡಿಸಲಾಗಿದೆ. ಕಂಪನಿಯು ತನ್ನ ಷೇರುಗಳನ್ನು ಪ್ರತಿ ಷೇರಿಗೆ ₹1,615 ದರದಲ್ಲಿ ಟೆಂಡರ್ ಮೂಲಕ ಮರುಖರೀದಿ ಮಾಡುವುದಾಗಿ ತಿಳಿಸಿದೆ.
810
ಟ್ರಾನ್ಸ್‌ಪೋರ್ಟ್ ಕಾರ್ಪೊರೇಷನ್ ಆಫ್ ಇಂಡಿಯಾ (Transport Corporation of India)
ಭಾರತದ ಹರಿಯಾಣದ ಗುರುಗ್ರಾಮ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಭಾರತೀಯ ಲಾಜಿಸ್ಟಿಕ್ಸ್ ಮತ್ತು ಪೂರೈಕೆ ಸರಪಳಿ ನಿರ್ವಹಣಾ ಕಂಪನಿ ಇದಾಗಿದೆ. ತನ್ನ ಷೇರುಗಳ ಮರುಖರೀದಿಯನ್ನು ಪ್ರತಿ ಷೇರಿಗೆ ₹1,200 ದರದಲ್ಲಿ ಟೆಂಡರ್ ಆಫರ್ ಮಾರ್ಗದ ಮೂಲಕ ಘೋಷಿಸಿದೆ. ಮರುಖರೀದಿಯ ದಾಖಲೆ ದಿನಾಂಕವನ್ನು ಸೆಪ್ಟೆಂಬರ್ 4 ಎಂದು ನಿಗದಿಪಡಿಸಲಾಗಿದೆ.
910
ಆರತಿ ಡ್ರಗ್ಸ್ (Aarti Drugs)
2016ರಿಂದ ಆರತಿ ಡ್ರಗ್ಸ್ ತನ್ನ ಈಕ್ವಿಟಿ ಷೇರುಗಳ ಆರನೇ ಮರುಖರೀದಿಯನ್ನುಘೋಷಣೆ ಮಾಡಿದೆ. ಪ್ರತಿ ಷೇರಿಗೆ ₹900 ರಂತೆ ಮರುಖರೀದಿಯನ್ನು ನಡೆಸಲಿದೆ, ಇದು ಅದರ ಹಿಂದಿನ ದಿನದ ಷೇರು ಬೆಲೆಗಿಂತ 60% ರಷ್ಟು ಪ್ರೀಮಿಯಂ ಆಗಿದೆ. ಇದಕ್ಕೆ ರೆಕಾರ್ಡ್ ಡೇಟ್‌ಅನ್ನು ಸೆಪ್ಟೆಂಬರ್ 5 ಎಂದು ನಿಗದಿಪಡಿಸಲಾಗಿದೆ.
1010
ಸಫೈರ್ ಫುಡ್ಸ್ (Sapphire Foods)
ಕೆಎಫ್‌ಸಿ, ಪಿಜಾ ಹಟ್, ಟಾಕೋಬೆಲ್ ಸೇರಿದಂತೆ ಪ್ರಮುಂ ಫ್ರಾಂಚೈಸಿಗಳ ಲೈಸೆನ್ಸ್ ಹೊಂದಿರುವ ಸಫೈರ್ ಫುಡ್ಸ್ 10 ರೂಪಾಯಿಯ ಒಂದು ಈಕ್ವಿಟಿ ಷೇರನ್ನು ₹2 ಮುಖಬೆಲೆಯ ಐದು ಈಕ್ವಿಟಿ ಷೇರುಗಳಾಗಿ ವಿಭಜಿಸುವುದಾಗಿ ಘೋಷಿಸಿತ್ತು. ಇದಕ್ಕೆ ದಾಖಲೆ ದಿನಾಂಕವನ್ನು ಸೆಪ್ಟೆಂಬರ್ 5 ಎಂದು ನಿಗದಿಪಡಿಸಲಾಗಿದೆ.