ಸೇವಾ ಪೂರೈಕೆದಾರರಿಗೆ ಮಾಹಿತಿ ನೀಡಿ
ಆನ್‌ಲೈನ್ ಪಾವತಿಯಲ್ಲಿ ಸೌಲಭ್ಯದ ಜೊತೆಗೆ ವಂಚನೆ ಸಾಧ್ಯತೆಯೂ ಇರುತ್ತದೆ. ಈ ಸಂಬಂಧ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. UPI ವಂಚನೆಯಾದರೆ GPay, PhonePe ಅಥವಾ Paytm ನಂತಹ UPI ಸೇವಾ ಪೂರೈಕೆದಾರರಿಗೆ ಮೊದಲು ಮಾಹಿತಿ ನೀಡಬೇಕೆಂದು RBI ಸೂಚಿಸುತ್ತದೆ.
ಪಾವತಿ ಅಪ್ಲಿಕೇಶನ್ ನಿಷ್ಕ್ರಿಯಗೊಳಿಸಿ
ವಂಚನೆಯಾದರೆ, ಮತ್ತೆ ಯಾವುದೇ ಹಗರಣ ನಡೆಯದಂತೆ ನಿಮ್ಮ UPI ಪಾವತಿ ಅಪ್ಲಿಕೇಶನ್ ಅನ್ನು ನಿಷ್ಕ್ರಿಯಗೊಳಿಸಿ. ಮುನ್ನೆಚ್ಚರಿಕೆ ಕ್ರಮವಾಗಿ, ನಿಮ್ಮ UPI ಪಾವತಿ ವಿಧಾನದಲ್ಲಿ ನೀವು ಸೇರಿಸಿರುವ ಎಲ್ಲಾ ಖಾತೆಗಳನ್ನೂ ರಿಮೂವ್ ಮಾಡಿ.
ಹಣ ಮರಳಿ ಪಡೆಯುವ ಸಾಧ್ಯತೆ
UPI ಪಾವತಿ ಸಮಯದಲ್ಲಿ ವಂಚನೆಯಾದರೆ, PSP ಅಥವಾ TPAP ಅಪ್ಲಿಕೇಶನ್ ಮೂಲಕ ದೂರು ದಾಖಲಿಸುವ ಮೂಲಕ ತಪ್ಪು UPI ವಹಿವಾಟು ಅಥವಾ ವಂಚನೆಗಾಗಿ ಮರುಪಾವತಿಯನ್ನು ಕೋರಬಹುದು. ಹಣ ವಾಪಸ್ ಸಿಗದಿದ್ದರೆ ನೀವು PSP ಬ್ಯಾಂಕ್, ನಿಮ್ಮ ಬ್ಯಾಂಕ್ ಅಥವಾ NPCI ಗೆ ದೂರು ನೀಡಬಹುದು.
UPI ದೂರು ಸಲ್ಲಿಕೆ
UPI ಪಾವತಿ ಸಮಯದಲ್ಲಿ ವಂಚನೆ ಅಥವಾ ಇತರೆ ದೂರುಗಳಿಗಾಗಿ BHIM ಟೋಲ್-ಫ್ರೀ ಸಂಖ್ಯೆ +91 22 40009100 ಅಥವಾ ಹೆಲ್ಪ್‌ಲೈನ್ ಸಂಖ್ಯೆ 022 4050 8500 ಗೆ ಕರೆ ಮಾಡಬಹುದು. ಇದರೊಂದಿಗೆ ನೀವು cms.rbi.org.in ಅಥವಾ crpc@rbi.org.in ಗೆ ಇ-ಮೇಲ್ ಕಳುಹಿಸುವ ಮೂಲಕವೂ ನಿಮ್ಮ ದೂರು ದಾಖಲಿಸಬಹುದು. ಇದಲ್ಲದೆ, 1930 ಗೆ ಕರೆ ಮಾಡಿ ದೂರು ದಾಖಲಿಸಬಹುದು.
UPI ID ಯಿಂದ ದೂರವಿರಿ
ವಂಚನೆಯಿಂದ ತಪ್ಪಿಸಿಕೊಳ್ಳಲು UPI ID ಅನ್ನು ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಲಿಂಕ್ ಮಾಡಬೇಡಿ. UPI ವಂಚನೆಯಿಂದ ತಪ್ಪಿಸಿಕೊಳ್ಳಲು ವ್ಯಾಲೆಟ್ ಬಳಸಿ. ನಿಮ್ಮ UPI ID ಮತ್ತು ಪಿನ್ ಅನ್ನು ಯಾರಿಗೂ ಹೇಳಬೇಡಿ.