ಆಂಧ್ರದ ಕಿಯಾ ಕಾರು ಘಟಕದಿಂದ 5 ವರ್ಷದಲ್ಲಿ 900 ಇಂಜಿನ್‌ ಕಳ್ಳತನ, ಆಡಳಿತ ಮಂಡಳಿಗೆ ಅಚ್ಚರಿ!

Published : Apr 09, 2025, 04:23 PM ISTUpdated : Apr 09, 2025, 04:31 PM IST

ಆಂಧ್ರಪ್ರದೇಶದ ಕಿಯಾ ಕಾರು ಕಂಪನಿಯಿಂದ 900 ಎಂಜಿನ್‌ಗಳು ಕಳವು ಆಗಿವೆ. ಕಂಪನಿಯ ಒಳಗಿನವರ ಕೈವಾಡವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ, ತನಿಖೆ ಮುಂದುವರೆದಿದೆ.

PREV
14
ಆಂಧ್ರದ ಕಿಯಾ ಕಾರು ಘಟಕದಿಂದ 5 ವರ್ಷದಲ್ಲಿ 900 ಇಂಜಿನ್‌ ಕಳ್ಳತನ, ಆಡಳಿತ ಮಂಡಳಿಗೆ ಅಚ್ಚರಿ!

ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯ ಪೆನುಕೊಂಡದಲ್ಲಿರುವ ಕಿಯಾ ಕಾರು ಕಂಪನಿಯ ಉತ್ಪಾದನಾ ಘಟಕದಿಂದ ಕಳೆದ ಐದು ವರ್ಷಗಳಲ್ಲಿ 900 ಕಿಯಾ ಕಾರು ಎಂಜಿನ್‌ಗಳನ್ನು ಕಳವು ಮಾಡಲಾಗಿದೆ. ಈ ಬೃಹತ್ ಕಳ್ಳತನದ ಹಿಂದೆ ಕಂಪನಿಯ ಒಳಗಿನವರ ಪಾತ್ರ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

 

 

24

ದಕ್ಷಿಣ ಕೊರಿಯಾದ ಕಾರು ತಯಾರಕ ಕಂಪನಿಯು ಆರಂಭದಲ್ಲಿ ಮಾರ್ಚ್ 19 ರಂದು ರಹಸ್ಯ ಆಂತರಿಕ ತನಿಖೆಯ ನಂತರ ಪೊಲೀಸರಿಗೆ ದೂರು ನೀಡಿದೆ. ಇದರ ನಂತರ, ಪೊಲೀಸರು ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ. ಇಲ್ಲಿಯವರೆಗೆ ನಡೆಸಿದ ತನಿಖೆಯಲ್ಲಿ ಎಂಜಿನ್ ಕಳ್ಳತನಗಳು ಸುಮಾರು ಐದು ವರ್ಷಗಳ ಹಿಂದಿನಿಂದ ಪ್ರಾರಂಭವಾಗಿರಬಹುದು ಎಂದು ತಿಳಿದುಬಂದಿದೆ. "ಇದು (ಎಂಜಿನ್ ಕಳ್ಳತನಗಳು) 2020 ರಲ್ಲಿ ಪ್ರಾರಂಭವಾಯಿತು. ಇದು ಸುಮಾರು ಐದು ವರ್ಷಗಳಿಂದ ನಿರಂತರ ಪ್ರಕ್ರಿಯೆಯಾಗಿದೆ. ನಾವು ತನಿಖೆಯನ್ನು ಆಳವಾಗಿ ಪರಿಶೀಲನೆ ಮಾಡುತ್ತಿದ್ದೇವೆ" ಎಂದು ಪೆನುಕೊಂಡ ಉಪ-ವಿಭಾಗೀಯ ಪೊಲೀಸ್ ಅಧಿಕಾರಿ ವೈ. ವೆಂಕಟೇಶ್ವರಲು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

34
kia cars

ವೆಂಕಟೇಶ್ವರಲು ಅವರ ಪ್ರಕಾರ, ಆರಂಭಿಕ ತನಿಖೆಗಳಲ್ಲಿ 900 ಎಂಜಿನ್‌ಗಳನ್ನು ಕಳವು ಮಾಡಲಾಗಿದೆ ಎಂದು ದೃಢಪಡಿಸಲಾಗಿದೆ. ಉತ್ಪಾದನಾ ಘಟಕಕ್ಕೆ ಹೋಗುವ ಮತ್ತು ಬರುವ ಮಾರ್ಗದಲ್ಲಿ ಎಂಜಿನ್‌ಗಳನ್ನು ಕಳವು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಬೃಹತ್ ಕಳ್ಳತನವು 'ಒಳಗಿನರ ಕೆಲಸ' ಎಂದು ಪೊಲೀಸರು ಶಂಕಿಸಿದ್ದಾರೆ, ಇದು ಕಾರು ತಯಾರಕರ ಹಿಂದಿನ ಮತ್ತು ಪ್ರಸ್ತುತ ಉದ್ಯೋಗಿಗಳನ್ನು ತನಿಖೆ ಮಾಡಲು ಒತ್ತಾಯಿಸಿದೆ.

ಕಿಯಾದಿಂದ ಬಿಡುಗಡೆಯಾಗುತ್ತಿದೆ ಹೊಸ ಪ್ರಿಮಿಯಂ MPV ಕಾರು, ಇನ್ನೋವಾ ಕ್ರೈಸ್ಟಾಗಿಂತ ಕಡಿಮೆ ಬೆಲೆ

44
Kia Theft

"ಇದು ಹೊರಗಿನವರಿಂದ ಆಗಿದ್ದಲ್ಲ, ಒಳಗಿನವರಿಂದಲೇ  ಆಗಿದ್ದು. ಅವರ (ಕಿಯಾ ಆಡಳಿತ ಮಂಡಳಿ) ಅನುಮತಿಯಿಲ್ಲದೆ ಒಂದೇ ಒಂದು ತುಣುಕು ಹೊರಬರುವುದಿಲ್ಲ. ಇದರಲ್ಲಿ ಯಾರು ಭಾಗಿಯಾಗಿದ್ದಾರೆಂದು ನಾವು ಪರಿಶೀಲಿಸುತ್ತಿದ್ದೇವೆ" ಎಂದು ಅವರು ಹೇಳಿದರು.

"ನಾವು ಪ್ರಾಥಮಿಕ ತನಿಖೆ ನಡೆಸಿದ್ದೇವೆ, ಕೆಲವು ಲೋಪದೋಷಗಳನ್ನು ದೃಢಪಡಿಸಿದ್ದೇವೆ ಮತ್ತು ಹಳೆಯ ಉದ್ಯೋಗಿಗಳನ್ನು ಪ್ರಶ್ನಿಸುವುದು ನಮ್ಮ ಮುಖ್ಯ ಗಮನವಾಗಿದೆ, ಆದರೆ ಕೆಲವು ಪ್ರಸ್ತುತ ಉದ್ಯೋಗಿಗಳು ಸಹ ಭಾಗಿಯಾಗಿದ್ದಾರೆ" ಎಂದು ವೆಂಕಟೇಶ್ವರಲು ಹೇಳಿದರು. ಕಳ್ಳತನದ ಕುರಿತು ಹೆಚ್ಚಿನ ತನಿಖೆ ನಡೆಸಲು ಪೊಲೀಸರು ತಂಡಗಳನ್ನು ರಚಿಸಿದ್ದಾರೆ ಮತ್ತು ಈ ಪ್ರಕ್ರಿಯೆಯಲ್ಲಿ ಹಲವಾರು ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಕಂಪನಿಯಲ್ಲಿ ತನಿಖೆ ನಡೆಯುತ್ತಿದೆ.

ಬಿಡುಗಡೆಯಾಗುತ್ತಿದೆ ಕಡಿಮೆ ಬೆಲೆಯ 7 ಸೀಟರ್ ಕಾರು, ಹೈಬ್ರಿಡ್-ಇವಿ ಮಾದರಿಯಲ್ಲಿ ಲಭ್ಯ

Read more Photos on
click me!

Recommended Stories