ಕರ್ನಾಟಕದಲ್ಲಿ ಲಕ್ಷಾಂತರ ರೈತರಿದ್ದಾರೆ. ಈ ಪೈಕಿ, ನಾನಾ ಬೆಳೆಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಈ ಪೈಕಿ, ಯಾವ್ಯಾವ ಬೆಳೆಗಳು ಯಾವ್ಯಾವ ಸ್ಥಾನದಲ್ಲಿದೆ ಅನ್ನೋದರ ಬಗ್ಗೆಯೂ ತಿಳಿದುಕೊಳ್ಳುವುದು ಉತ್ತಮ. ಈ ಬಗ್ಗೆ ಈ ಲೇಖನದಲ್ಲಿದೆ ವಿವರ..
ಕಾಫಿ ರಾಜ್ಯದ ಪ್ರಮುಖ ಬೆಳೆಗಳಲ್ಲೊಂದು. ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆ ಸೇರಿ ಇನ್ನೂ ಹಲವು ಜಿಲ್ಲೆಗಳಲ್ಲಿ ಕಾಫಿ ಬೆಳೆಯಲಾಗುತ್ತದೆ. ಕಾಫಿ ಬೆಳೆಯಲ್ಲಿ ರಾಜ್ಯ ನಂ. 1 ಸ್ಥಾನದಲ್ಲಿದೆ.
216
ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಕಷ್ಟು ರೇಷ್ಮೆ ಬೆಳೆಗಾರರಿದ್ದಾರೆ. ಮಹಿಳೆಯರು ರೇಷ್ಮೆ ಸೀರೆ ಉಟ್ಟು ಚೆಂದ ಕಾಣುವಂತೆ ಮಾಡಲು ಈ ರೇಷ್ಮೆಯ ಪಾತ್ರ ಪ್ರಮುಖ. ರೇಷ್ಮೆಯಲ್ಲೂ ಸಹ ರಾಜ್ಯ ನಂ. 1 ಸ್ಥಾನದಲ್ಲಿದೆ.
316
ರಾಗಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಪ್ರಮುಖ ಆಹಾರಗಳಲ್ಲೊಂದಾಗಿದೆ. ಇದೇ ರೀತಿ, ರಾಜ್ಯದಲ್ಲಿ ರಾಗಿ ಬೆಳೆಯುವವರ ಸಂಖ್ಯೆಯೂ ಹೆಚ್ಚಿದೆ. ರಾಗಿ ಬೆಳೆಯಲ್ಲೂ ಕರ್ನಾಟಕ ನಂ. 1 ಸ್ಥಾನದಲ್ಲಿದೆ.
416
ನಮ್ಮ ಆಹಾರದ ರುಚಿ, ಖಾರ ಹೆಚ್ಚಿಸುವಲ್ಲಿ ಹಸಿ ಮೆಣಸಿನಕಾಯಿ ಪ್ರಮುಖ ಪಾತ್ರ ವಹಿಸುತ್ತದೆ. ಹಸಿ ಮೆಣಸಿನಕಾಯಿಯನ್ನು ರಾಜ್ಯದಲ್ಲೂ ಹೆಚ್ಚಾಗಿ ಬೆಳೆಯಲಾಗುತ್ತದೆ. ಈ ಬೆಳೆಯಲ್ಲೂ ಸಹ ಕರ್ನಾಟಕ ನಂ. 1 ಸ್ಥಾನದಲ್ಲಿದೆ.
516
ಸೂರ್ಯಕಾಂತಿಯ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಸೂರ್ಯಕಾಂತಿ ಎಣ್ಣೆಯನ್ನು ಬಹುತೇಕರು ಬಳಕೆ ಮಾಡುತ್ತಾರೆ. ರಾಜ್ಯ ಸೂರ್ಯಕಾಂತಿ ಬೆಳೆಗಾರರಲ್ಲಿ ಸಹ ನಂ. 1 ಸ್ಥಾನದಲ್ಲಿದೆ.
616
ಹುಣಸೆಹಣ್ಣು ಸಹ ನಮ್ಮ ಆಹಾರದ ರುಚಿಯನ್ನು ಹೆಚ್ಚಿಸಲು ಸಹಕರಿಸುತ್ತದೆ. ಹುಣಸೆ ಮರದ ಬಳಿ ಕತ್ತಲಲ್ಲಿ ಹೋಗಲು ಜನ ಎದುರಿದ್ರೂ, ಬೆಳೆಗಾರರ ಸಂಖ್ಯೆ ಕಡಿಮೆ ಏನಿಲ್ಲ. ಈ ಬೆಳೆಯಲ್ಲೂ ರಾಜ್ಯ ನಂ. 1 ಸ್ಥಾನದಲ್ಲಿದೆ.
716
ಅಡಿಕೆ ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಗಳಲ್ಲೊಂದು. ಮಲೆನಾಡು, ಕರಾವಳಿ, ಅರೆ ಮಲೆನಾಡು ಭಾಗದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಈ ಬೆಳೆಯಲ್ಲೂ ರಾಜ್ಯ ನಂ. 1 ಸ್ಥಾನದಲ್ಲಿದೆ.
816
ಕ್ಯಾಪ್ಸಿಕಮ್ ಅಥವಾ ದೊಣ್ಣೆ ಮೆಣಸಿನಕಾಯಿ ಒಂದು ತರಕಾರಿಯಾಗಿದ್ದು, ಪಲ್ಯ ಹಾಗೂ ಬಜ್ಜಿ ಮುಂತಾದ ಅಡುಗೆ ಮಾಡಲು ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ. ಈ ಬೆಳೆಯಲ್ಲೂ ರಾಜ್ಯ ನಂ. 1 ಸ್ಥಾನದಲ್ಲಿದೆ.
916
ಟೊಮ್ಯಾಟೋ ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದೆ. ಏಕೆಂದರೆ ಇದರ ಬೆಲೆ ಕೆಜಿಗೆ 200 - 300 ರೂ. ಗೆ ಹತ್ತಿರ ಹೋಗಿತ್ತು. ಇದನ್ನು ಪಲ್ಯ, ಸಾಂಬಾರ್, ಜ್ಯೂಸ್‌ಗೆ ಸಹ ಬಳಸಲಾಗುತ್ತದೆ. ಈ ಬೆಳೆಗೆ ರಾಜ್ಯ ಎರಡನೇ ಸ್ಥಾನದಲ್ಲಿದೆ.
1016
ಸಪೋಟಾ ಹಣ್ಣು ಹಲವರ ನೆಚ್ಚಿನ ಹಣ್ಣುಗಳಲ್ಲೊಂದು. ಇದರಿಂದ ಸಾಕಷ್ಟು ಪೊಷಕಾಂಶಗಳು ಸಹ ಸಿಗುತ್ತದೆ. ಈ ಬೆಳೆಯಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ.
1116
ರಾಜ್ಯದಲ್ಲಿ ತೆಂಗು ಬೆಳೆಗಾರರು ಸಾಕಷ್ಟು ಹೆಚ್ಚಿದ್ದು, ಇದನ್ನು ತೆಂಗಿನಕಾಯಿ, ಎಳನೀರು, ತೆಂಗಿನ ಮೊಟ್ಟೆ - ಇನ್ನೂ ಸಾಕಷ್ಟು ಪ್ರಯೋಜನಗಳಿವೆ. ಇದನ್ನು ಕಲ್ಪವೃಕ್ಷ ಎಂದೂ ಕರೆಯಲಾಗುತ್ತದೆ. ಈ ಬೆಳೆಯಲ್ಲಿ ರಾಜ್ಯ 2ನೇ ಸ್ಥಾನದಲ್ಲಿದೆ.
1216
ದಾಳಿಂಬೆ ಹಣ್ಣು ಸಹ ಹಲವರಿಗೆ ಪ್ರಿಯವಾಗಿದೆ. ಇದು ಹಲವರ ನೆಚ್ಚಿನ ಹಣ್ಣುಗಳಲ್ಲೊಂದಾಗಿದ್ದು, ರಾಜ್ಯದ ಹಲವೆಡೆ ಇದನ್ನು ಬೆಳೆಯಲಾಗುತ್ತದೆ. ದಾಳಿಂಬೆ ಬೆಳೆಗೆ ರಾಜ್ಯ 3ನೇ ಸ್ಥಾನದಲ್ಲಿದೆ.
1316
ಪೈನಾಪಲ್ ಅಥವಾ ಅನಾನಸ್ ಹಣ್ಣನ್ನು ಸಹ ಹೆಚ್ಚು ರೈತರು ಬೆಳೆಯುತ್ತಾರೆ. ಇದು ಸಹ ಹಲವರಿಗೆ ಅಚ್ಚುಮೆಚ್ಚು. ಅನಾನಸ್ ಬೆಳೆಯಲ್ಲೂ ಕರ್ನಾಟಕ 3ನೇ ಸ್ಥಾನದಲ್ಲಿದೆ.
1416
ಪಪ್ಪಾಯ ಹಣ್ಣನ್ನು ಸಹ ಹೆಚ್ಚಿನ ಜನರು ಇಷ್ಟಪಡುತ್ತಾರೆ. ಇದರಿಂದ ಆರೋಗ್ಯಕ್ಕೂ ನಾನಾ ಪ್ರಯೋಜನಗಳಿವೆ. ಇದು ಸಹ ರಾಜ್ಯದ ಪ್ರಮುಖ ಬೆಳೆಗಳಲ್ಲಿ ಒಂದಾಗಿದ್ದು, ಇದು ಸಹ 3ನೇ ಸ್ಥಾನದಲ್ಲಿದೆ.
1516
ಕಲ್ಲಂಗಡಿ ಹಣ್ಣನ್ನು ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಬೆಳೆಯಲಾಗುತ್ತದೆ. ಬಿಸಿಲಿನ ಬೇಗೆ ತಣಿಸಲು ಇದು ಪ್ರಮುಖ ಹಣ್ಣುಗಳಲ್ಲೊಂದು. ಈ ಬೆಳೆ ಸಹ ರಾಜ್ಯದಲ್ಲಿ 3ನೇ ಸ್ಥಾನದಲ್ಲಿದೆ.
1616
ಈರುಳ್ಳಿ ಹೆಚ್ಚಿದರೇನೋ ಕಣ್ಣೀರು ಬರುತ್ತೆ ನಿಜ. ಆದರೆ, ಇದನ್ನು ಹೆಚ್ಚಿನ ಆಹಾರಗಳಲ್ಲಿ ಬಳಸಲಾಗುತ್ತದೆ. ಇದು ಇಲ್ಲದಿದ್ದರೆ ಆಹಾರದ ರುಚಿಯೇ ಬೇರೆಯಾಗಿರುತ್ತದೆ. ನಾನಾ ಆರೋಗ್ಯ ಪ್ರಯೋಜನಗಳೂ ಇವೆ. ಈ ಬೆಳೆ ಸಹ ರಾಜ್ಯದಲ್ಲಿ 3ನೇ ಸ್ಥಾನದಲ್ಲಿದೆ.