ಬಾಳೆಹಣ್ಣು ದರದಲ್ಲಿ ಮಧ್ಯವರ್ತಿಗಳ ಗೋಲ್‌ಮಾಲ್‌: ರೈತರಿಂದ 25 ರೂ.ಗೆ ಖರೀದಿ, ಗ್ರಾಹಕರಿಗೆ 120 ರೂ. ಮಾರಾಟ

First Published | Aug 16, 2023, 8:24 PM IST

ಬೆಂಗಳೂರು (ಆ.16): ರಾಜ್ಯದಲ್ಲಿ ಮುಂಗಾರುಮಳೆ ಕೊರತೆಯಾಗಿದೆ ಎಂಬ ನೆಪವೊಡ್ಡಿ ಬಾಳೆಹಣ್ಣಿನ ದರವನ್ನು ವ್ಯಾಪಾರಿಗಳೇ ಬೆಲೆ ಏರಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ರೈತರಿಂದ 25 ರೂ.ಗೆ ಹಣ್ಣು ಖರೀದಿ ಮಾಡುವ ಮಧ್ಯವರ್ತಿಗಳು ಗ್ರಾಹಕರಿಗೆ 120ರೂ.ಗೆ ಮಾರಾಟ ಮಾಡುತ್ತಿದ್ದಾರೆ ಎಂದು ರೈತರು ಹೇಳಿಕೊಂಡಿದ್ದಾರೆ. 

ನೈಜವಾಗಿ ಬಾಳೆಹಣ್ಣಿನ ಇಳುವರಿ ಕಡಿಮೆಯಾಗಿಲ್ಲ. ರೈತರಿಂದ ಕೇವಲ 25 ರೂ.ಗೆ ಖರೀದಿ ಮಾಡುತ್ತಿರುವ ಮಧ್ಯವರ್ತಿಗಳು ಹಾಗೂ ವ್ಯಾಪಾರಿಗಳು ಗ್ರಾಹಕರಿಗೆ 120 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಇದಕ್ಕೆ ಸರ್ಕಾರವೇ ಮದ್ಯಸ್ಥಿಕೆವಹಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಕಳೆದ ಎರಡು ತಿಂಗಳಿಂದ ದುಬಾರಿ ಬೆಲೆಯಲ್ಲಿ (ಪ್ರತಿ ಕೆ.ಜಿ ಟೊಮೆಟೊಗೆ 100 ರೂ.ಗಿಂತ ಅಧಿಕ) ಮಾರಾಟವಾಗುತ್ತಿದ್ದ ಈಗ ಇಳಿಕೆಯಾಗಿದೆ. ಆದರೆ, ಈಗ ಬಾಳೆಹಣ್ಣಿನ ಬೆಲೆ 60 ರೂ.ಗಳಿಂದ ದುಪ್ಪಟ್ಟಾಗಿದ್ದು, 120 ರೂ.ಗೆ ಏರಿಕೆಯಾಗಿದೆ. ಈಗ ಬಾಳೆಹಣ್ಣು ಬೆಲೆ ಏರಿಕೆಗೆ ವ್ಯಾಪಾರಿಗಳು ಮತ್ತು ಮಧ್ಯವರ್ತಿಗಳೇ ಕಾರಣ ಎಂದು ರೈತರು ಹೇಳಿಕೊಂಡಿದ್ದಾರೆ. 

Tap to resize

ಕೊಡಗು, ಮೈಸೂರು, ಹಾಸನ ಸೇರಿದಂತೆ ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಸಾಕಷ್ಟು ಮಂದಿ ಬಾಳೆ ಬೆಳೆಯುತ್ತಿದ್ದಾರೆ. ಆದರೆ ರೈತರು ನೇರವಾಗಿ ಮಾರುಕಟ್ಟೆಗೆ ಹಣ್ಣುಗಳನ್ನು ಪೂರೈಸಲು ಆಗುತ್ತಿಲ್ಲ. ಆದರೆ, ಶ್ರಾವಣ ಮಾಸದಲ್ಲಿ ಜನರು ಎಷ್ಟೇ ದುಬಾರಿ ಇದ್ದರೂ ಬಾಳೆಹಣ್ಣು ಖರೀದಿ ಮಾಡುತ್ತಾರೆಂಬ ದೃಷ್ಟಿಯಿಂದ ವ್ಯಾಪಾರಿಗಳೇ ಬೆಲೆ ಏರಿಕೆ ಮಾಡಿದ್ದಾರೆ ಎಂದು ರೈತರು ಹೇಳಿದ್ದಾರೆ. 

ರೈತರು ಬೆಳೆದ ಬಾಳೆಹಣ್ಣನ್ನು ನಗರಕ್ಕೆ ಸಾಗಣೆ ಮಾಡಲು ಕಷ್ಟವಾಗುತ್ತದೆ. ಆದ್ದರಿಂದದ ಸಾಗಣೆದಾರರಿಗೆ ಪ್ರತಿ ಕೆ.ಜಿ. ಬಾಳೆಹಣ್ಣಿಗೆ 25 ರೂಪಾಯಿಗೆ ನೀಡುತ್ತೇವೆ. ಇಲ್ಲಿಂದ ತೆಗೆದುಕೊಂಡು ಹೋದ ಬಾಳೆಹಣ್ಣನ್ನು ದುಬಾರಿ ಬೆಲೆಗೆ ಮಾರುತ್ತಿದ್ದಾರೆ. ಕಷ್ಟಪಟ್ಟು ಹಣ್ಣು ಬೆಳೆದ ರೈತನಿಗೆ ಶೇ.30 ಲಾಭವೂ ಸಿಗುವುದಿಲ್ಲ. 
 

ಬಾಳೆಹಣ್ಣನ್ನು ಮಾರುಕಟ್ಟೆಯ ವ್ಯಾಪಾರಿಗಳ ಮಾಲೀಕತ್ವದ ಸಣ್ಣ ಟ್ರಕ್‌ಗಳಿಗೆ ಲೋಡ್ ಮಾಡಬೇಕು. ಅವರು 20,000 ಕೆ.ಜಿ ಲೋಡ್ ಆಗುವವರೆಗೆ ಅವರು ಹೊರಡುವುದಿಲ್ಲ. ಕೆಲವು ಬಾರಿ ಸ್ಥಳೀಯ ಜಮೀನುಗಳಲ್ಲಿ ಅಷ್ಟು ಇಳುವರಿ ಇರುವುದಿಲ್ಲ. ಇದರಿಂದ ಬಾಳೆಹಣ್ಣು ಇಳುವರಿ ಕಡಿಮೆಯಾಗಿದೆ ಎಂದು ತಮ್ಮಷ್ಟಕ್ಕೆ ತಾವೇ ಮಾರುಕಟ್ಟೆಯಲ್ಲಿನ ಹಣ್ಣಿನ ಮಾರಾಟ ಬೆಲೆ ಹೆಚ್ಚಳ ಮಾಡುತ್ತಾರೆ.

ಇನ್ನು ಕೆಲವು ಬಾರಿ ಬಾಳೆಯ ತೋಟದಲ್ಲಿ ಕಟಾವು ಮೂರು ಅಥವಾ ನಾಲ್ಕನೇ ಬಾರಿಗೆ ಆಗುತ್ತಿದ್ದರೆ, 20 ಟನ್‌ಗಟ್ಟಲೇ ಹಣ್ಣುಗಳು ಸಿಗೊಲ್ಲ. ಆಗ, ಕಡಿಮೆಯಿರುವ ಹಣ್ಣನ್ನು ತೆಗೆದುಕೊಂಡು ಹೋಗಲು ಮಾರುಕಟ್ಟೆಯಿಂದ ವಾಹನ ಕಳಿಸದೇ ಇದ್ದಾಗ ಅನ್ಯಾಯವಾಗಿ ಕೊಳೆತು ಹೋಗುತ್ತವೆ. ಆದ್ದರಿಂದ ಬಾಳೆಹಣ್ಣು ಇಳುವರಿ ಕಡಿಮೆ ಆಗಿದೆಯೆಂದು ವ್ಯಾಪಾರಿಗಳು ದಿಢೀರನೆ ಏರಿಕೆ ಮಾಡುತ್ತಿದ್ದಾರೆ.

ಚಿತ್ರದುರ್ಗ, ರಾಮನಗರ, ತುಮಕೂರು ಭಾಗದಲ್ಲಿನ ಗುಡ್ಡಗಾಡು ಪ್ರದೇಶಗಳಿಂದ ಬೆಂಗಳೂರು ಕೇವಲ 100-200 ಕಿಮೀ ದೂರದಲ್ಲಿರುವಾಗ, ನಮ್ಮ ಉತ್ಪನ್ನಗಳನ್ನು ಅಲ್ಲಿಗೆ ಸಾಗಿಸಲು ನಮಗೆ ಸಣ್ಣ ಗಾತ್ರದ ಟ್ರಕ್‌ಗಳ ಸಂಘಟಿತ ಸಾರಿಗೆ ಅಗತ್ಯವಿದೆ. ನಮ್ಮ ಕಷ್ಟವನ್ನು ಬಂಡವಾಳ ಮಾಡಿಕೊಳಳುವ ಮಧ್ಯವರ್ತಿಗಳು ನಮಗಿಂದಲೂ ದುಪ್ಪಟ್ಟು ಲಾಭ ಪಡೆಯುತ್ತಾರೆ. 

Latest Videos

click me!