ಅತಿಹೆಚ್ಚು ಗೋಲ್ಡ್‌ ಸ್ಟಾಕ್‌ ಇಟ್ಟುಕೊಂಡಿರುವ ಜಗತ್ತಿನ ಟಾಪ್ 10 ದೇಶಗಳಿವು..! ಈ ಲಿಸ್ಟ್‌ನಲ್ಲಿದೆಯಾ ಭಾರತ?

First Published Aug 16, 2023, 5:11 PM IST

ಬೆಂಗಳೂರು: ಜಗತ್ತಿನಲ್ಲಿ ಚಿನ್ನದ ದಾಸ್ತಾನು ಎಷ್ಟಿದೆ ಎನ್ನುವುದರ ಆಧಾರದ ಮೇಲೆ ಆ ದೇಶದ ಆರ್ಥಿಕತೆ ಎಷ್ಟು ಸದೃಢವಾಗಿದೆ ಎನ್ನುವುದನ್ನು ಲೆಕ್ಕಾಹಾಕಲಾಗುತ್ತದೆ. 2023ರ ಜೂನ್ ಅಂತ್ಯದ ವೇಳೆಗೆ ಅತಿಹೆಚ್ಚು ಗೋಲ್ಡ್ ರಿಸರ್ವ್ ಹೊಂದಿದ ಟಾಪ್ 10 ದೇಶಗಳ ಮಾಹಿತಿಯನ್ನು ನಿಮ್ಮ ಮುಂದಿಡುತ್ತಿದ್ದೇವೆ ನೋಡಿ..

1. ಅಮೆರಿಕ ಸಂಯುಕ್ತ ಸಂಸ್ಥಾನ:

ಜಗತ್ತಿನ ಶ್ರೀಮಂತ ರಾಷ್ಟ್ರ ಎನಿಸಿಕೊಂಡಿರುವ ಅಮೆರಿಕದ ಬಳಿಕ 8,133.46 ಟನ್‌ ಚಿನ್ನದ ಸಂಗ್ರಹವಿದೆ. ಈ ಮೂಲಕ ಜಗತ್ತಿನ ಅತಿಹೆಚ್ಚು ಗೋಲ್ಡ್‌ ರಿಸರ್ವ್‌ ಹೊಂದಿದ ದೇಶ ಎನಿಸಿದೆ. ಇದಷ್ಟೇ ಅಲ್ಲದೇ ಟಾಪ್‌ 10 ಗೋಲ್ಡ್‌ ರಿಸರ್ವ್‌ ಹೊಂದಿದ ಉತ್ತರ ಅಮೆರಿಕಾದ ರಾಷ್ಟ್ರಗಳ ಪೈಕಿ ಸ್ಥಾನಪಡೆದ ಏಕೈಕ ದೇಶ ಎನಿಸಿದೆ.

2. ಜರ್ಮನಿ:

ಪಶ್ಚಿಮ ಯೂರೋಪಿನ ಶ್ರೀಮಂತ ರಾಷ್ಟ್ರಗಳ ಪೈಕಿ ಒಂದು ಎನಿಸಿರುವ ಜರ್ಮನಿ ಬಳಿ 3,354.89 ಟನ್ ಚಿನ್ನ ಸಂಗ್ರಹವಿದೆ. ಈ ಮೂಲಕ ಎರಡನೇ ಅತಿಹೆಚ್ಚು ಗೋಲ್ಡ್‌ ರಿಸರ್ವ್ ಹೊಂದಿದ ದೇಶ ಎನ್ನುವ ಕೀರ್ತಿಗೆ ಜರ್ಮನಿ ಪಾತ್ರವಾಗಿದೆ.

3. ಇಟಲಿ:

ಪ್ರವಾಸಿಗರ ಪಾಲಿನ ನೆಚ್ಚಿನ ತಾಣ ಎನಿಸಿಕೊಂಡಿರುವ ಇಟಲಿ, ಪ್ರವಾಸೋದ್ಯಮ ಮಾತ್ರವಲ್ಲದೇ ಗೋಲ್ಡ್‌ ರಿಸರ್ವ್‌ ವಿಚಾರದಲ್ಲೂ ಹಲವು ರಾಷ್ಟ್ರಗಳಿಗಿಂತ ಮುಂದಿದೆ. ಇಟಲಿ ಬಳಿ 2,451.84 ಟನ್ ಚಿನ್ನದ ದಾಸ್ತಾನು ಇದೆ. ಈ ಮೂಲಕ ಪಶ್ಚಿಮ ಯೂರೋಪಿನಲ್ಲಿ ಎರಡನೇ ಅತಿಹೆಚ್ಚು ಗೋಲ್ಡ್ ರಿಸರ್ವ್ ಹೊಂದಿದ ಹಾಗೂ ಒಟ್ಟಾರೆ ಜಗತ್ತಿನ ಮೂರನೇ ಅತಿಹೆಚ್ಚು ಗೋಲ್ಡ್ ರಿಸರ್ವ್ ಹೊಂದಿದ ದೇಶ ಎನಿಸಿದೆ.
 

4. ಫ್ರಾನ್ಸ್‌;

ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ, ಟೂರಿಸ್ಟ್‌ಗಳ ಹಾಟ್ ಫೇವರೇಟ್ ತಾಣ ಫ್ರಾನ್ಸ್‌ ಬಳಿ ಬರೋಬ್ಬರಿ 2,436.81 ಟನ್‌ ಚಿನ್ನದ ಸಂಗ್ರಹವಿದೆ. ಈ ಮೂಲಕ ಪಶ್ಚಿಮ ಯೂರೋಪ್‌ನ ಮೂರನೇ ಹಾಗೂ ಒಟ್ಟಾರೆ 4ನೇ ಅತಿಹೆಚ್ಚು ಗೋಲ್ಡ್ ರಿಸರ್ವ್ ಹೊಂದಿದ ದೇಶ ಎನಿಸಿಕೊಂಡಿದೆ.

5. ರಷ್ಯನ್ ಫೆಡರೇಷನ್‌:

ಪೂರ್ವ ಯೂರೋಪ್‌ನ ಶ್ರೀಮಂತ ರಾಷ್ಟ್ರ ಎನಿಸಿಕೊಂಡಿರುವ ರಷ್ಯಾ ಬಳಿ 2,326.52 ಟನ್‌ ಗೋಲ್ಡ್ ರಿಸರ್ವ್ ಇದೆ. ವ್ಲಾಡಿಮಿರ್ ಪುಟಿನ್ ನೇತೃತ್ವದ ರಷ್ಯಾ, ಉಕ್ರೇನ್ ಎದುರು ಹೋರಾಟ ನಡೆಸುತ್ತಿರುವುದರ ಹೊರತಾಗಿಯೂ ಚಿನ್ನ ಸ್ಟಾಕ್ ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ.

6. ಚೀನಾ:

ನೆರೆಯ ಚೀನಾ ಬಳಿ ಬರೋಬ್ಬರಿ 2,068.36 ಟನ್‌ ಚಿನ್ನದ ಸ್ಟಾಕ್ ಇದೆ. 14 ರಾಷ್ಟ್ರಗಳ ಜತೆ ತನ್ನ ಗಡಿ ಹಂಚಿಕೊಂಡಿರುವ ಚೀನಾ, ಎರಡನೇ ಅತಿಹೆಚ್ಚು ಜನಸಂಖ್ಯೆ ಹೊಂದಿದ ರಾಷ್ಟ್ರವೂ ಹೌದು. ಕಮ್ಯುನಿಸ್ಟ್ ರಾಷ್ಟ್ರವಾದ ಚೀನಾವು 6ನೇ ಅತಿಹೆಚ್ಚು ಗೋಲ್ಡ್ ರಿಸರ್ವ್ ಹೊಂದಿದ ರಾಷ್ಟ್ರ ಎನಿಸಿದೆ.
 

7. ಸ್ವಿಟ್ಜರ್‌ಲ್ಯಾಂಡ್:

ಪಶ್ಚಿಮ ಯೂರೋಪಿನ ಅತಿಹೆಚ್ಚು ಆದಾಯ ಹೊಂದಿದ ರಾಷ್ಟ್ರ ಎನಿಸಿಕೊಂಡಿರುವ ಸ್ವಿಟ್ಜರ್‌ಲ್ಯಾಂಡ್ ಬಳಿ 1,040.00 ಟನ್‌ ಚಿನ್ನದ ದಾಸ್ತಾನು ಇದೆ. ಬ್ಯಾಂಕಿಂಗ್& ಫೈನಾನ್ಸ್ ಈ ದೇಶದ ಪ್ರಮುಖ ಆದಾಯದ ಮೂಲ ಎನಿಸಿದೆ.

8. ಜಪಾನ್

ಜಪಾನ್ ಒಂದು ಪುಟ್ಟ ದ್ವೀಪ ರಾಷ್ಟ್ರವಾಗಿದ್ದರೂ ಸಹಾ, ಶ್ರೀಮಂತಿಕೆಯ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಜಪಾನ್ ಬಳಿ 846 ಟನ್‌ ಚಿನ್ನದ ಸ್ಟಾಕ್ ಇದೆ. ಈ ಮೂಲಕ ಅತಿಹೆಚ್ಚು ಚಿನ್ನ ದಾಸ್ತಾನು ಮಾಡಿದ ರಾಷ್ಟ್ರಗಳ ಪಟ್ಟಿಯಲ್ಲಿ 8ನೇ ಸ್ಥಾನ ಪಡೆದಿದೆ.
 

9. ಭಾರತ:

ಜಗತ್ತಿನ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಅಭಿವೃದ್ದಿಶೀಲ ರಾಷ್ಟ್ರವಾಗಿರುವ ಭಾರತದ ಬಳಿ 794.62 ಟನ್ ಚಿನ್ನದ ದಾಸ್ತಾನಿದೆ. ಭಾರತ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಅಭಿವೃದ್ದಿಶೀಲ ರಾಷ್ಟ್ರ ಎನಿಸಿಕೊಂಡಿರುವುದು ಮತ್ತೊಂದು ವಿಶೇಷವಾಗಿದೆ.
 

10. ನೆದರ್‌ಲ್ಯಾಂಡ್ಸ್‌:

ಜಗತ್ತಿನ ಲಕ್ಷಾಂತರ ಪ್ರವಾಸಿಗರನ್ನು ಸೆಳೆಯುವ ಕ್ಷಮತೆ ಹೊಂದಿರುವ ನೆದರ್‌ಲ್ಯಾಂಡ್‌/ಹಾಲೆಂಡ್ ಬಳಿ 612.45 ಟನ್ ಚಿನ್ನದ ಸಂಗ್ರಹವಿದ್ದು, ಟಾಪ್ 10 ಪಟ್ಟಿಯಲ್ಲಿ 10ನೇ ಸ್ಥಾನ ಪಡೆದಿದೆ.

click me!