ಜಿಯೋ ಬಂಪರ್ ಆಫರ್, ಕೇವಲ 11 ರೂಪಾಯಿ ರೀಚಾರ್ಜ್ ಪ್ಲಾನ್‌ಗೆ ಸಿಗುತ್ತೆ ಅನ್‌ಲಿಮಿಟೆಡ್ ಡೇಟಾ

Published : Jul 05, 2026, 03:29 PM IST

ಜಿಯೋ ಇದೀಗ ಗ್ರಾಹಕರಿಗೆ ಬಂಪರ್ ಆಫರ್ ನೀಡುತ್ತಿದೆ. ಕೇವಲ 11 ರೂಪಾಯಿ ರೀಚಾರ್ಜ್ ಪ್ಲಾನ್. ಇದು ಸದ್ಯ ಲಭ್ಯವಿರುವ ಯಾವುದೇ ಟೆಲಿಕಾಂಗೆ ಹೋಲಿಸಿದರೆ ಅತೀ ಕಡಿಮೆ ರಿಚಾರ್ಜ್ ಪ್ಲಾನ್,ಆದರೆ ಅನ್‌ಲಿಮಿಟೆಡ್ ಡೇಟಾ ಕೊಡುಗೆ ಸಿಗಲಿದೆ.

PREV
16
ಜಿಯೋದಿಂದ ಕೈಗೆಟುಕುವ ದರದ ಪ್ಲಾನ್

ಭಾರತದಲ್ಲಿ ಟೆಲಿಕಾಂ ಕ್ಷೇತ್ರದಲ್ಲಿ ಪ್ರತಿಸ್ಪರ್ಧೆಗಳು ತೀವ್ರಗೊಳ್ಳುತ್ತಿದೆ. ಜಯೋ ಹೊಸ ಹೊಸ ಪ್ಲಾನ್ ಮೂಲಕ ಗ್ರಾಹಕರ ಆಕರ್ಷಿಸುತ್ತಿದೆ. ಬಿಎಸ್ಎನ್ಎಲ್, ಏರ್‌ಟೆಲ್, ವಿ ಸೇರಿದಂತೆ ಪ್ರತಿಸ್ಪರ್ಧಿ ಟೆಲಿಕಾಂಗಳನ್ನು ಮೀರಿಸಿ ಜಿಯೋ ಅತೀ ಹೆಚ್ಚು ಗ್ರಾಹಕರನ್ನು ಹೊಂದಿದ ಸಾಧನೆ ಮಾಡಿದೆ. ಇದೇ ವೇಳೆ ಗ್ರಾಹಕರಿಗೆ ಅತೀ ಕಡಿಮೆ ಬೆಲೆಯಲ್ಲಿ ಹಲವು ಕೊಡುಗೆ ನೀಡುತ್ತಿದೆ.

26
ಕೇವಲ 11 ರೂಪಾಯಿ ರೀಚಾರ್ಜ್ ಪ್ಲಾನ್

ಜಿಯೋ ತನ್ನ ಗ್ರಾಹಕರಿಗೆ ಕೇವಲ 11 ರೂಪಾಯಿ ರೀಚಾರ್ಜ್ ಪ್ಲಾನ್ ಹೊರತಂದಿದೆ. ಈ ಪ್ಲಾನ್ ರಿಚಾರ್ಜ್ ಮಾಡಿಕೊಂಡ ಗ್ರಾಹಕರಿಗೆ ಅನ್‌ಲಿಮಿಟೆಡ್ ಡೇಟಾ ನೀಡುತ್ತಿದೆ. ಸದ್ಯ ಎಲ್ಲಾ ಟೆಲಿಕಾಂಗಳಲ್ಲಿ ಲಭ್ಯವಿರುವ ಪ್ಲಾನ್‌ಗಳಿಗೆ ಹೋಲಿಸಿದೆರೆ ಜಿಯೋ ನೀಡುತ್ತಿರುವ 11 ರೂಪಾಯಿಗೆ ಅನ್‌ಲಿಮಿಟೆಡ್ ಡೇಟಾ ಅತ್ಯಂತ ಕಡಿಮೆ ಬಜೆಟ್ ಪ್ಲಾನ್ ಆಗಿದೆ.

36
ಅನ್‌ಲಿಮಿಟೆಡ್ ಕಂಡೀಷನ್ ಏನು?

11 ರೂಪಾಯಿ ರೀಚಾರ್ಜ್ ಮಾಡಿದರೆ ಮೊದಲೇ ಇರುವ ವ್ಯಾಲಿಡಿಟಿಯಲ್ಲಿ ಕಾರ್ಯನಿರ್ವಹಿಸಲಿದೆ. ಇಲ್ಲಿನ ಪ್ರಮುಖ ಕಂಡೀಷನ್ ಅಂದರೆ ಅನ್‌ಲಿಮಿಟೆಡ್ ಡೇಟಾ ಕೇವಲ 1 ಗಂಟೆಗೆ ಮಾತ್ರ. ರೀಚಾರ್ಜ್ ಮಾಡಿದ ಕ್ಷಣದಿಂದ 1 ಗಂಟೆ ವರೆಗೆ ಅನ್‌ಲಿಮಿಟೆಡ್ ಡೇಟಾ ಸೌಲಭ್ಯ ಸಿಗಲಿದೆ. ಈ ಮೂಲಕ ಗ್ರಾಹಕರು ಅತೀ ಕಡಿಮೆ ಬೆಲೆಗೆ ಗರಿಷ್ಠ ಡೇಟಾ ಪ್ರಯೋಜನ ಪಡೆದುಕೊಳ್ಳಬಹುದು.

46
ಜಿಯೋ ಅತೀ ಕಡಿಮೆ ಬೆಜೆಟ್ ಡೇಟಾ ಪ್ಲಾನ್

ಜಿಯೋದಲ್ಲಿ ಹಲವು ಡೇಟಾ ಪ್ಲಾನ್‌ಗಳು ಲಭ್ಯವಿದೆ. ಇದರೊಂದಿಗೆ ಗ್ರಾಹಕರು ತಮ್ಮ ಅಗತ್ಯ, ಬಜೆಟ್‌ಗೆ ಅನುಗುಣವಾಗಿ ರೀಚಾರ್ಜ್ ಮಾಡಿಕೊಳ್ಳಬಹುದು. ಹೈಸ್ಪೀಡ್ ಡೇಟಾ ನಿಮ್ಮದಾಗಲಿದೆ.

  1. 19 ರೂಪಾಯಿ ಪ್ಲಾನ್, 1 ಜಿಬಿ ಡೇಟಾ 1 ದಿನ ವ್ಯಾಲಿಟಿಡಿ
  2. 29 ರೂಪಾಯಿ ಪ್ಲಾನ್, 2ಜಿಬಿ ಡೇಟಾ 2 ದಿನ ವ್ಯಾಲಿಟಿಡಿ
  3. 39 ರೂಪಾಯಿ ಪ್ಲಾನ್, 3 ಜಿಬಿ ಡೇಟಾ 3 ದಿನ ವ್ಯಾಲಿಟಿಡಿ
56
49 ರೂಪಾಯಿ ಪ್ಲಾನ್‌ಗೆ 1 ದಿನ ಅನ್‌ಲಿಮಿಟೆಡ್ ಡೇಟಾ

ಜಿಯೋದಲ್ಲಿ 49 ರೂಪಾಯಿ ಡೇಟಾ ಪ್ಲಾನ್ ಆ್ಯಕ್ಟಿವೇಟ್ ಮಾಡಿದರೆ ಗ್ರಾಹಕರಿಗೆ ಒಂದು ದಿನ ಇಡೀ ಅನ್‌ಲಿಮಿಟೆಡ್ ಡೇಟಾ ಸೌಲಭ್ಯ ಸಿಗಲಿದೆ. ಒಂದು ಸಂಪೂರ್ಣ ದಿನ ಹೆಚ್ಚಿನ ಡೇಟಾ ಅಗತ್ಯ ಇದ್ದವರು, ಮೂವಿ ಸೇರಿದಂತೆ ಹಲವು ಡೌನ್ಲೋಟ್ ಮಾಡಿಕೊಳ್ಳಲು ಬಯಸುವವರು ಈ ಪ್ಲಾನ್ ಆಯ್ಕೆ ಮಾಡಿಕೊಳ್ಳಹುದು.

66
ಡೇಟಾ ಜೊತೆಗೆ ಜಿಯೋಹಾಟ್‌ಸ್ಟಾರ್ ಸೇರಿ ಹಲವು ಸೌಲಭ್ಯ

ಜಿಯೋ ಡೇಟಾ ಪ್ಲಾನ್‌ಗಳಲ್ಲಿ ಫ್ಲೆಕ್ಸಿ ಪ್ಯಾಕ್ ಕೂಡ ಲಭ್ಯವಿದೆ. ಜಿಯೋ ಹಾಟ್‌‌ಸ್ಟಾರ್, ಸೋನಿ ಲೈವ್, ಜಿ5 ಸೇರಿದಂತೆ ಹಲವು ಸಬ್‌ಸ್ಕ್ರಿಪ್ಶನ್ ಕೂಡ ಪಡೆಯುತ್ತಾರೆ. 100 ರೂಪಾಯಿ, 103 ರೂಪಾಯಿ ಡೇಟಾ ಪ್ಲಾನ್‌ಗಳಲ್ಲಿ ಈ ರೀತಿಯ ಸಬ್‌ಸ್ಕ್ರಿಪ್ಶನ್ ಆಯ್ಕೆಗಳು ಲಭ್ಯವಿದೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories