ಜಿಯೋ ದೀಪಾವಳಿ ಧಮಾಕಾ, ಒಂದೇ ಒಂದು ರೀಚಾರ್ಜ್‌‌ಗೆ ಪಡೆಯಿರಿ 3,350 ರೂ ಗಿಫ್ಟ್!

First Published | Oct 26, 2024, 1:06 PM IST

ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗಾಗಿ ದೀಪಾವಳಿ ಧಮಾಕಾ ಆಫರ್ ಘೋಷಿಸಿದೆ. ಈ 5G ಪ್ಲಾನ್ ರೀಚಾರ್ಜ್ ಮಾಡಿದ್ರೆ ಭಾರೀ ಕೊಡುಗೆ ಪಡೆಯಲು ಸಾಧ್ಯವಿದೆ. ಒಂದು ರೀಚಾರ್ಜ್‌ನಲ್ಲಿ ಬರೋಬ್ಬರಿ 3,350 ರೂಪಾಯಿ ಗಿಫ್ಟ್ ವೋಚರ್ ಜಿಯೋ ನೀಡುತ್ತಿದೆ.

ರಿಲಯನ್ಸ್ ಜಿಯೋ ದೇಶದಾದ್ಯಂತ ಪ್ರಸಿದ್ಧ ಟೆಲಿಕಾಂ ಸೇವೆ. ದೇಶದಲ್ಲಿ ಅತಿ ಹೆಚ್ಚು ಜನ ಬಳಸುವ ನೆಟ್‌ವರ್ಕ್ ಜಿಯೋ. ನಂತರದ ಸ್ಥಾನಗಳಲ್ಲಿ ಏರ್‌ಟೆಲ್, ಬಿಎಸ್‌ಎನ್‌ಎಲ್, ವೊಡಾಫೋನ್-ಐಡಿಯಾ ಇತರೆ ನೆಟ್‌ವರ್ಕ್‌ಗಳಿವೆ. ದರ ಹೆಚ್ಚಳವಾದರೂ ಜಿಯೋ, ಏರ್‌ಟೆಲ್‌ಗೆ ಪೈಪೋಟಿಯಾಗಿ ಬಿಎಸ್‌ಎನ್‌ಎಲ್ ಮಾರುಕಟ್ಟೆಯಲ್ಲಿ ಮುನ್ನಡೆಯುತ್ತಿದೆ. ಬಿಎಸ್‌ಎನ್‌ಎಲ್‌ನ ಪೈಪೋಟಿ ಎದುರಿಸಲು ಇತರೆ ನೆಟ್‌ವರ್ಕ್‌ಗಳು ರೀಚಾರ್ಜ್ ಪ್ಲಾನ್‌ಗಳ ದರ ಕಡಿಮೆ ಮಾಡಿ ಗ್ರಾಹಕರನ್ನು ಆಕರ್ಷಿಸಲು ಪ್ರಯತ್ನಿಸುತ್ತಿವೆ. ಇದಲ್ಲದೆ, ಪ್ರತಿ ಸಂದರ್ಭದಲ್ಲೂ ಡಿಸ್ಕೌಂಟ್ ಆಫರ್‌ಗಳ ಮೂಲಕ ಗ್ರಾಹಕರು ಬೇರೆ ನೆಟ್‌ವರ್ಕ್‌ಗೆ ಹೋಗದಂತೆ ನೋಡಿಕೊಳ್ಳುತ್ತಿವೆ. ಈಗಾಗಲೇ ಗಣೇಶ ಹಬ್ಬ, ನವರಾತ್ರಿ ಹಬ್ಬಗಳಿಗೆ ಹಲವು ಆಫರ್‌ಗಳನ್ನು ಘೋಷಿಸಿರುವ ಟೆಲಿಕಾಂ ಕಂಪನಿಗಳು ಈ ದೀಪಾವಳಿಗೂ ವಿಶೇಷ ಆಫರ್‌ಗಳನ್ನು ಘೋಷಿಸುತ್ತಿವೆ. ಇಂತಹ ವಿಶೇಷ ಆಫರ್‌ಗಳನ್ನು ಘೋಷಿಸುವುದರಲ್ಲಿ ಜಿಯೋ ಮುಂದಿದೆ. 

Jio True 5G ಅಡಿ ತ್ರೈಮಾಸಿಕ, ವಾರ್ಷಿಕ ಪ್ರೀಪೇಯ್ಡ್ ಪ್ಲಾನ್‌ಗಳನ್ನು ಪರಿಚಯಿಸಿದೆ. ಇವುಗಳನ್ನು ರೀಚಾರ್ಜ್ ಮಾಡುವ ಗ್ರಾಹಕರು ಆಹಾರ, ಪ್ರಯಾಣ, ಶಾಪಿಂಗ್‌ಗೆ ವಿಶೇಷ ಡಿಸ್ಕೌಂಟ್ ಆಫರ್‌ಗಳನ್ನು ಪಡೆಯಬಹುದು. ಜೊತೆಗೆ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸುವವರಿಗೆ ಉಚಿತ ವೋಚರ್‌ಗಳನ್ನು ನೀಡುತ್ತಿದೆ. ಈ ಎಲ್ಲಾ ಪ್ರಯೋಜನಗಳ ಒಟ್ಟು ಮೌಲ್ಯ3,350 ರೂಪಾಯಿ.

Tap to resize

ದೀಪಾವಳಿ ಧಮಾಕಾ ಆಫರ್‌ನಲ್ಲಿ ₹899 ಅಥವಾ ₹3,599 ರೀಚಾರ್ಜ್ ಮಾಡಿದ್ರೆ ₹3,350 ಮೌಲ್ಯದ ವೋಚರ್‌ಗಳು ಸಿಗುತ್ತವೆ. ಇದರಲ್ಲಿ ಹೋಟೆಲ್‌, ವಿಮಾನ ಪ್ರಯಾಣಕ್ಕಾಗಿ Ease My Tripನಿಂದ ₹3,000 ವೋಚರ್, ₹999 ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಖರೀದಿಗಳಿಗೆ AJIOದಿಂದ ₹200 ಕೂಪನ್ ಸಿಗುತ್ತೆ. ಜೊತೆಗೆ ₹150 ಮೌಲ್ಯದ Swiggy ವೋಚರ್ ಕೂಡ ಸಿಗುತ್ತೆ. 

ರೀಚಾರ್ಜ್ ಮಾಡಿದ ನಂತರ ಈ ವೋಚರ್‌ಗಳು ನಿಮ್ಮ ಜಿಯೋ ಆ್ಯಪ್ ಖಾತೆಗೆ ಜಮಾ ಆಗುತ್ತವೆ. ಇವುಗಳನ್ನು ಪಡೆಯಲು ಮೊದಲು MyJio ಆ್ಯಪ್ ತೆರೆಯಿರಿ

ಪ್ರೀಪೇಯ್ಡ್ ಪ್ಲಾನ್‌ಗಳ ಪ್ರಯೋಜನಗಳ ವಿವರಗಳು

ದೀಪಾವಳಿ ಧಮಾಕಾ ಆಫರ್ ಅಡಿಯಲ್ಲಿ 899 ರೂಪಾಯಿ ತ್ರೈಮಾಸಿಕ ಪ್ರೀಪೇಯ್ಡ್ ಪ್ಲಾನ್ ಅಥವಾ 3,599 ರೂಪಾಯಿ ವಾರ್ಷಿಕ ಪ್ರೀಪೇಯ್ಡ್ ಪ್ಲಾನ್ ರೀಚಾರ್ಜ್ ಮಾಡಿದ್ರೆ ಈ ಗಿಫ್ಟ್ ಕೂಪನ್‌ಗಳು ಸಿಗುತ್ತವೆ. ₹899 ಪ್ಲಾನ್ ರೀಚಾರ್ಜ್ ಮಾಡಿದ್ರೆ ಅನಿಯಮಿತ ಕರೆ ಮಾಡಬಹುದು. ಜೊತೆಗೆ ದಿನಕ್ಕೆ 2GB ಡೇಟಾ ಸಿಗುತ್ತೆ. ದಿನಕ್ಕೆ 100 SMS ಕಳಿಸಬಹುದು. ಈ ರೀಚಾರ್ಜ್‌ನ ವ್ಯಾಲಿಡಿಟಿ 90 ದಿನಗಳು. ಇದರ ಜೊತೆಗೆ ಹೆಚ್ಚುವರಿಯಾಗಿ 20 GB ಡೇಟಾ ಕೂಡ ಸಿಗುತ್ತೆ. 

₹3,599 ಪ್ಲಾನ್ ರೀಚಾರ್ಜ್ ಮಾಡಿದ್ರೆ 365 ದಿನಗಳವರೆಗೆ ದಿನಕ್ಕೆ 2.5 GB ಡೇಟಾ ಸಿಗುತ್ತೆ. ದಿನಕ್ಕೆ 100 SMS ಕಳಿಸಬಹುದು. 

ಜಿಯೋ 3,350 ರೂಪಾಯಿ ಗಿಫ್ಟ್ ವೋಚರ್ ಪಡೆಯುವುದು ಹೇಗೆ? ಇದಕ್ಕಾಗಿ ಹೆಚ್ಚಿನ ಕಸರತ್ತು ಮಾಡಬೇಕಾದ ಅವಶ್ಯಕತೆ ಇಲ್ಲ. 

ಆಫರ್ ವಿಭಾಗಕ್ಕೆ ತೆರಳಬೇಕು
ನಂತರ My winnings ತೆರೆಯಿರಿ.
ನೀವು ಬಳಸಲು ಬಯಸುವ ಕೂಪನ್ ಆಯ್ಕೆ ಮಾಡಿ.
ನಂತರ ಕೂಪನ್ ಕೋಡ್ ಕಾಪಿ ಮಾಡಿ.
ನಂತರ ಪಾಲುದಾರ ವೆಬ್‌ಸೈಟ್‌ಗೆ ಹೋಗಿ ಚೆಕ್‌ಔಟ್ ಸಮಯದಲ್ಲಿ ಅನ್ವಯಿಸಿ.
ದೀಪಾವಳಿ ಧಮಾಕಾ ಆಫರ್ ಈಗಾಗಲೇ ಲೈವ್‌ನಲ್ಲಿದೆ. ಇದು ನವೆಂಬರ್ 5ರವರೆಗೆ ಇರುತ್ತದೆ.

Latest Videos

click me!