ರತನ್ ಟಾಟಾ 10,000 ಕೋಟಿ ರೂ ಆಸ್ತಿಯಲ್ಲಿ ಮುದ್ದಿನ ನಾಯಿಗೂ ಇದೆ ಅತೀ ದೊಡ್ಡ ಪಾಲು!

First Published | Oct 25, 2024, 1:45 PM IST

ರತನ್ ಟಾಟಾ ನಿಧನದ ಬಳಿಕ ಅವರ ಆಸ್ತಿ ಯಾರಿಗೆ ಅನ್ನೋ ಕುರಿತು ಗೊಂದಲವಿಲ್ಲ. ಕಾರಣ ರತನ್ ಟಾಟಾ ಬರೆದಿರುವ ವಿಲ್ ಪತ್ರದಲ್ಲಿ ಕೆಲ ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ವಿಶೇಷ ಅಂದರೆ ರತನ್ ಟಾಟಾ 10,000 ಕೋಟಿ ರೂಪಾಯಿ ಆಸ್ತಿಯಲ್ಲಿ ಅವರ ನೆಚ್ಚಿನ ನಾಯಿಗೆ ಅತೀ ದೊಡ್ಡ ಪಾಲು ಮೀಸಲಿಟ್ಟಿದ್ದಾರೆ.  

ರತನ್ ಟಾಟಾ ನಿಧನ ಬಳಿಕ ಇದೀಗ ಟಾಟಾ ಟ್ರಸ್ಟ್‌ಗೆ ನೋಯಲ್ ಟಾಟ ಚೇರ್ಮೆನ್ ಆಗಿ ಆಯ್ಕೆಯಾಗಿದ್ದಾರೆ. ಇತ್ತ ರತನ್ ಟಾಟಾ ಆಸ್ತಿ, ಆದಾಯಗಳಿಗೆ ಯಾರು ವಾರಸುದಾರ ಅನ್ನೋ ಕುರಿತು ಯಾವುದೇ ಗೊಂದಲವಿಲ್ಲ. ಇದೆಲ್ಲವನ್ನು ರತನ್ ಟಾಟಾ ಮೊದಲೇ ಲೆಕ್ಕಾಚಾರ ಹಾಕಿದ್ದಾರೆ. ಪ್ರಮುಖವಾಗಿ ವಿಲ್ ಬರೆದಿರುವ ರತನ್ ಟಾಟಾದಲ್ಲಿ 10,000 ಕೋಟಿ ರೂಪಾಯಿ ಆಸ್ತಿಯಲ್ಲಿ ಯಾರೆಗೆಲ್ಲಾ ಪಾಲು ನೀಡಬೇಕು ಅನ್ನೋದನ್ನು ಸೂಚಿಸಿದ್ದಾರೆ. ಪ್ರಮುಖವಾಗಿ ಅವರ ಮುದ್ದಿನ ನಾಯಿಗೂ ಬಹು ದೊಡ್ಡ ಪಾಲನ್ನೇ ಮೀಸಲಿಟ್ಟಿದ್ದಾರೆ. 

ಟಾಟಾ ಮುದ್ದಿನ ನಾಯಿ

ರತನ್ ಟಾಟಾ 10,0000 ಕೋಟಿ ರೂಪಾಯಿ ಆಸ್ತಿಯಲ್ಲಿ ಮುದ್ದಿನ ಮೂರು ನಾಯಿ, ಆಡುಗೆ ಕೆಲಸದವರಿಗೂ ಪಾಲು ನೀಡಿದ್ದಾರೆ.  ರತನ್ ಟಾಟಾ ತಮ್ಮ ಜರ್ಮನ್ ಶೆಫರ್ಡ್ ಟಿಟೋಗೆ ಅಪರಿಮಿತ ಆರೈಕೆಯನ್ನು ನೀಡಲು ವಿಲ್ ಪತ್ರದಲ್ಲಿ ಸೂಚಿಸಿದ್ದಾರೆ. ಇದಕ್ಕಾಗಿ ಬಹುದೊಡ್ಡ ಪಾಲನ್ನೇ ಮೀಸಲಿಟ್ಟಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.  

Tap to resize

10,000 ಕೋಟಿ ರೂ.ಗೂ ಹೆಚ್ಚು ಆಸ್ತಿ ಹೊಂದಿರುವ ರತನ್ ಟಾಟಾ ತಮ್ಮ ಸಂಪತ್ತನ್ನು ತಮ್ಮ ಫೌಂಡೇಶನ್, ಸಹೋದರ, ಮಲಸಹೋದರಿಯರು, ಮನೆ ಸಿಬ್ಬಂದಿ ಮತ್ತು ಇತರರಿಗೆ ಹಂಚಿದ್ದಾರೆ. ರತನ್ ಟಾಟಾ ಅವರ ಆಸ್ತಿಗಳ ಪೈಕಿ ಮುಂಬೈನ ಆಲಿಬಾಗ್‌ನಲ್ಲಿರುವ 2000 ಚದರ ಅಡಿಯ ಬೀಚ್ ಬಂಗಲೆ, ಜುಹು ತಾರಾ ರಸ್ತೆಯಲ್ಲಿರುವ 2 ಮಹಡಿಗಳ ಕಟ್ಟಡ. 350 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಫಿಕ್ಸೆಡ್ ಡೆಪಾಸಿಟ್ ಸೇರಿದಂತೆ ಇತರ ಹಲವು ಆಸ್ತಿಗಳನ್ನು ಹೊಂದಿದ್ದಾರೆ.

ರತನ್ ಟಾಟಾ

ರತನ್ ಟಾಟಾ ಟಾಟಾ ಸನ್ಸ್‌ನಲ್ಲಿ 0.83% ಪಾಲನ್ನು ಹೊಂದಿದ್ದಾರೆ ಮತ್ತು 7,900 ಕೋಟಿ ರೂ.ಗಳ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಇನ್ನು 20 ರಿಂದ 30 ದುಬಾರಿ ಹಾಗೂ ಐಷಾರಾಮಿ ಕಾರುಗಳು ರತನ್ ಟಾಟಾ ಬಳಿ ಇವೆ. ರತನ್ ಟಾಟಾ ತಮ್ಮ ಕೊನೆಯ ದಿನಗಳನ್ನು ಕಳೆದ ಕೊಲಾಬದಲ್ಲಿರುವ ಹ್ಯಾಲೆಕೈ ನಿವಾಸ ಕೂಡ ಹಂಚಿದ್ದಾರೆ.

165 ಬಿಲಿಯನ್ ಡಾಲರ್‌ಗಳ ಟಾಟಾ ಗ್ರೂಪ್‌ನ ಹೋಲ್ಡಿಂಗ್ ಕಂಪನಿಯಾದ ಟಾಟಾ ಸನ್ಸ್‌ನಲ್ಲಿ 0.83% ಪಾಲನ್ನು ಹೊಂದಿರುವ ರತನ್ ಟಾಟಾ ಅವರ ಆಸ್ತಿಗಳನ್ನು ರತನ್ ಟಾಟಾ ಎಂಡೋಮೆಂಟ್ ಫೌಂಡೇಶನ್ (RTEF) ಗೆ ವರ್ಗಾಯಿಸಲಾಗುತ್ತದೆ.  ಎಲ್ಲಾ ಸ್ಪಷ್ಟ ನಿರ್ದೇಶನಗಳನ್ನು ರತನ್ ಟಾಟಾ ವಿಲ್ ಮೂಲಕ ನೀಡಿದ್ದಾರೆ. 

ಡಿಸೆಂಬರ್ 28, 1937 ರಂದು ಜನಿಸಿದ ರತನ್ ಟಾಟಾ ಅವರು 2024 ಅಕ್ಟೋಬರ್ 9 ರಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾದರು. ರತನ್ ಟಾಟಾ ಕೊಡುಗೈ ದಾನಿ ಎಂದು ಜನಪ್ರಿಯರಾಗಿದ್ದಾರೆ. ದೇಶ ಅಥವಾ ಯಾರೇ ಸಂಕಷ್ಟದಲ್ಲಿದ್ದರೂ ನೆರವಿನ ಹಸ್ತ ಚಾಚುತ್ತಾರೆ. ಕೋವಿಡ್ ಸಂದರ್ಭದಲ್ಲಿ ರತನ್ ಟಾಟಾ ಗ್ರೂಪ್ ಹಾಗೂ ಟಾಟಾ ಸನ್ಸ್ ಒಟ್ಟು 1,500 ಕೋಟಿ ರೂಪಾಯಿ ಹಣವನ್ನು ಕೇಂದ್ರ ಸರ್ಕಾರಕ್ಕೆ ದೇಣಿಗೆ ನೀಡಿತ್ತು.

Latest Videos

click me!