ರತನ್ ಟಾಟಾ ತಮ್ಮ ಸಾವಿನ ಕೊನೆಯ ದಿನದವರೆಗೂ ಮುಂಬೈನ ಕೊಲಬಾದಲ್ಲಿರುವ ಹಲೇಕೈ ಹೌಸ್‌ನಲ್ಲಿ ವಾಸವಿದ್ದರು. ಮುಂಬೈನ ಅತ್ಯಂತ ಪ್ರತಿಷ್ಠಿತ ಹಾಗೂ ಐಷಾರಾಮಿ ಮನೆಗಳಲ್ಲಿ ಇದು ಒಂದು. ದಕ್ಷಿಣ ಮುಂಬೈನಲ್ಲಿ ಇರುವ ಈ ಮನೆಯ ಒಂದು ಚದರ ಅಡಿಗೆ 1.12 ಲಕ್ಷ ರೂಪಾಯಿ. 13350 ಚದರ ಅಡಿಯ ನಿವಾಸದಲ್ಲಿ ರತನ್ ಟಾಟಾ ಉಳಿದುಕೊಂಡಿದ್ದರು. ಒಟ್ಟು 7 ಹಂತಗಳನ್ನು ಹೊಂದಿರುವ ಮನೆ ಇದಾಗಿತ್ತು.
ಈ ಮನೆಯಲ್ಲಿ ಜಿಮ್, ಮೀಡಿಯಾ ರೂಪ್, ಪ್ಲೇ ರೂಪ್ ಹಾಗೂ ಇನ್ಫಿನಿಟಿ ಸ್ವಿಮ್ಮಿಂಗ್ ಪೂಲ್‌ಗಳಿವೆ. ಕಟ್ಟಡವು 3 ಮಹಡಿಗಳನ್ನು ಹೊಂದಿದೆ, ಇದನ್ನು ಏಳು ಹಂತಗಳಾಗಿ ವಿಂಗಡಿಸಲಾಗಿದೆ. ಪ್ರತಿ ಮಹಡಿಯನ್ನು 2 ಹಂತಗಳಾಗಿ ವಿಂಗಡಿಸಲಾಗಿದೆ.
ಮೊದಲ ಮಹಡಿ, ಇಡೀ ಮಹಡಿಯಲ್ಲಿ ದೊಡ್ಡ ಸನ್ ಡೆಕ್ ಅನ್ನು ಹೊಂದಿದೆ, ಇದು ಉಳಿದುಕೊಳ್ಳುವ ಸ್ಥಳವಾಗಿತ್ತು. ಎರಡು ಮಲಗುವ ಕೋಣೆಗಳು ಮತ್ತು ರೀಡಿಂಗ್ ರೂಮ್ ಹೊಂದಿದೆ. ರತನ್ ಟಾಟಾ ಹೆಚ್ಚು ಪಾರ್ಟಿಗಳನ್ನು ಆಯೋಜನೆ ಮಾಡುತ್ತಿಲ್ಲವಾದರೂ, ಸನ್ ಡೆಕ್ ಸುಲಭವಾಗಿ ಬಾರ್ ಮತ್ತು 50-60 ಜನರಿಗೆ ಅವಕಾಶ ಕಲ್ಪಿಸುತ್ತದೆ.
ಅಕ್ಟೋಬರ್ 7 ರಂದು ಕೊಲಬಾದಲ್ಲಿರುವ ಹಲೇಕೈ ಹೌಸ್‌ನಿಂದ ಬ್ರಿಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗುವವರೆಗೂ ರತನ್ ಟಾಟಾ ಇಲ್ಲಿಯೇ ವಾಸವಿದ್ದರು. ಈ ಮನೆಯ ಮಾಲೀಕತ್ವ ಎವಾರ್ಟ್ ಇನ್ವೆಸ್ಟ್‌ಮೆಂಟ್ (Ewart Investments) ಹೆಸರಲ್ಲಿದೆ. ಇದು ಟಾಟಾ ಸನ್ಸ್‌ನ ಸಂಪೂರ್ಣ ಮಾಲೀಕತ್ವದ ಕಂಪನಿಯಾಗಿದೆ. ಮುಂದೆ ಈ ಮನೆಯ ಭವಿಷ್ಯವೇನು ಅನ್ನೋದು ಎವಾರ್ಟ್ ಸಂಸ್ಥಯೇ ನಿರ್ಧಾರ ಮಾಡಲಿದೆ.