ಹೆಸರಾಂತ ಸಲೂನ್‌ ಜತೆ ಇಶಾ ಅಂಬಾನಿಯ 8.4 ಲಕ್ಷ ಕೋಟಿ ಬ್ರಾಂಡ್ ಒಪ್ಪಂದ ರದ್ದು!

First Published | Nov 29, 2023, 6:34 PM IST

ಇಶಾ ಅಂಬಾನಿ ನೇತೃತ್ವದ ರಿಲಯನ್ಸ್ ರಿಟೇಲ್ ಮತ್ತು ನ್ಯಾಚುರಲ್ ಸಲೂನ್ ಮತ್ತು ಸ್ಪಾ ನಡುವಿನ ಸ್ವಾಧೀನ ಒಪ್ಪಂದವನ್ನು ಮೌಲ್ಯಮಾಪನ ವ್ಯತ್ಯಾಸಗಳಿಂದ ರದ್ದುಗೊಳಿಸಲಾಗಿದೆ ಎಂದು  ವರದಿಯಾಗಿದೆ.

ರಿಲಯನ್ಸ್‌ನ ರಿಟೇಲ್ ವಿಭಾಗ ಅರವಿಂದ್ ಫ್ಯಾಶನ್‌ನ ಸೌಂದರ್ಯ ವರ್ಧಕ ಚಿಲ್ಲರೆ ವ್ಯಾಪಾರವನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ ಘೋಷಿಸಿದ ಕೆಲವೇ ದಿನಗಳಲ್ಲಿ ಈ ಮಾಹಿತಿಯು ಬೆಳಕಿಗೆ ಬಂದಿದೆ. ಅರವಿಂದ್ ಫ್ಯಾಶನ್ ಭಾರತದಲ್ಲಿ ಲಾಲ್ಭಾಯ್ ಕುಟುಂಬ-ಪ್ರವರ್ತಿತ ಸಂಸ್ಥೆಯಿಂದ ನಿರ್ವಹಿಸಲ್ಪಡುವ ಸೆಫೊರಾ ವ್ಯಾಪಾರವನ್ನು ಸಹ ಒಳಗೊಂಡಿದೆ. 

ಈ ಒಪ್ಪಂದದ ಅಡಿಯಲ್ಲಿ, ರಿಲಯನ್ಸ್ ರೀಟೈಲ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ರಿಲಯನ್ಸ್ ಬ್ಯೂಟಿ ಮತ್ತು ಪರ್ಸನಲ್ ಕೇರ್, ಅರವಿಂದ್ ಫ್ಯಾಶನ್ಸ್ ಲಿಮಿಟೆಡ್‌ನಿಂದ ಫ್ರೆಂಚ್ ಬ್ಯೂಟಿ ರಿಟೇಲ್ ಬ್ರ್ಯಾಂಡ್‌ನ 26 ಮಳಿಗೆಗಳನ್ನು ಸ್ವಾಧೀನಪಡಿಸಿಕೊಳ್ಳಲಿದೆ ಎಂದು ವರದಿಗಳು ಹೇಳಿವೆ.

Tap to resize

Sephora ಸಹಭಾಗಿತ್ವದ ಭಾಗವಾಗಿ, ರಿಲಾಯನ್ಸ್ ಬ್ಯೂಟಿ  ಮತ್ತು  ಪರ್ಸನಲ್‌ ಕೇರ್ 13 ನಗರಗಳಲ್ಲಿರುವ Sephora ನ 26 ಸ್ಟೋರ್‌ಗಳ ಪ್ರಸ್ತುತ ಭಾರತದ ಕಾರ್ಯಾಚರಣೆಗಳನ್ನು ಅರವಿಂದ್ ಫ್ಯಾಶನ್ಸ್ ಲಿಮಿಟೆಡ್‌ನಿಂದ ವಹಿಸಿಕೊಂಡಿದೆ, ಇದು ದೇಶದಲ್ಲಿ Sephora ಉಪಸ್ಥಿತಿಯನ್ನು ವಿಸ್ತರಿಸುವ ಯೋಜನೆಗೆ ಚಾಲನೆ ನೀಡುತ್ತಿದೆ" ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.  

ಮಾರಾಟದ ಪರಿಗಣನೆಯಲ್ಲಿ, "ಇಡೀ ಇಕ್ವಿಟಿ ಪಾಲನ್ನು ಮಾರಾಟ ಮಾಡಲು ಮತ್ತು ಸಾಲಗಳ ಮರುಪಾವತಿಗೆ 216 ಕೋಟಿ ರೂಪಾಯಿಗಳ ಉದ್ಯಮ ಮೌಲ್ಯದಲ್ಲಿ ವಹಿವಾಟು ನಡೆಸಲಾಗಿದೆ. ಸಂಪೂರ್ಣ ಈಕ್ವಿಟಿ ಪಾಲನ್ನು ಮಾರಾಟ ಮಾಡಲು ಖರೀದಿಯ ಪರಿಗಣನೆಯು ರೂ. 99.02 ಕೋಟಿ." ಎಂದು  ಅರವಿಂದ್ ಫ್ಯಾಶನ್ ಕಂಪನಿ ಹೇಳಿದೆ. 

ಅರವಿಂದ್ ಬ್ಯೂಟಿ ಬ್ರಾಂಡ್ಸ್ ರಿಟೇಲ್ 2022-23 ರಲ್ಲಿ (ಎಫ್‌ವೈ 23) ರೂ 336.70 ಕೋಟಿ ವಹಿವಾಟು ನಡೆಸಿತ್ತು ಮತ್ತು ಅರವಿಂದ್ ಫ್ಯಾಶನ್ಸ್‌ನ ಏಕೀಕೃತ ಆದಾಯದ ಶೇಕಡಾ 7.60 ರಷ್ಟು ಕೊಡುಗೆ ನೀಡಿದೆ. ಇಶಾ ಅಂಬಾನಿ ಮುನ್ನಡೆಸುತ್ತಿರುವ ರಿಲಯನ್ಸ್ ರಿಟೇಲ್ ಮೌಲ್ಯ 8.4 ಲಕ್ಷ ಕೋಟಿ ರೂ. ಆಗಿದೆ.
 

ರಿಲಯನ್ಸ್ ರಿಟೇಲ್ ನ್ಯಾಚುರಲ್ಸ್ ಸಲೂನ್‌ನಲ್ಲಿ 49 ಶೇಕಡಾ ಪಾಲನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಸಲೂನ್ ವ್ಯವಹಾರಕ್ಕೆ ಮುನ್ನುಗ್ಗಲಿದೆ  ಎಂದು ವರದಿಯಾಗಿತ್ತು. ಇದು 2023 ರ ಆರಂಭದಲ್ಲಿ ಆಗಬೇಕಿತ್ತು ಆದರೆ ಒಪ್ಪಂದವು ವಿಳಂಬವಾಯಿತು. ಇದೀಗ ರದ್ದಾಗಿದೆ.

ಪ್ಯಾರಿಸ್‌ನಲ್ಲಿ ಪ್ರಧಾನ ಕಛೇರಿ ಹೊಂದಿರುವ ಸೆಫೊರಾ, 80 ಶತಕೋಟಿ ಯೂರೋ LVMH ಗುಂಪಿನ ಭಾಗವಾಗಿದೆ, ಇದು ಫ್ರೆಂಚ್ ಬಹುರಾಷ್ಟ್ರೀಯ ಹಿಡುವಳಿ ಮತ್ತು ಐಷಾರಾಮಿ ಸರಕುಗಳಲ್ಲಿ ಪರಿಣತಿ ಹೊಂದಿರುವ ಸಂಘಟಿತವಾಗಿದೆ. ಇದು 2012 ರಲ್ಲಿ ಭಾರತಕ್ಕೆ ಕಾಲಿಟ್ಟಿತ್ತು.

Latest Videos

click me!