ಅಬ್ಬಬ್ಬಾ..ಗಂಡನ ಜೊತೆ ಡಿನ್ನರ್‌ ಡೇಟ್‌ ಹೋಗೋಕೆ ಇಶಾ ಅಂಬಾನಿ ಹಾಕ್ಕೊಂಡು ಬಂದ ಡ್ರೆಸ್‌ ಬೆಲೆ ಇಷ್ಟೊಂದಾ?

First Published | Apr 3, 2024, 4:13 PM IST

ಬಿಲಿಯನೇರ್‌ ಮುಕೇಶ್ ಅಂಬಾನಿ ಮಗಳು ಇಶಾ ಅಂಬಾನಿ ತಮ್ಮ ಲಕ್ಸುರಿಯಸ್ ಲೈಫ್‌ಸ್ಟೈಲ್‌ಗೆ ಹೆಸರುವಾಸಿಯಾಗಿದ್ದಾರೆ. ಯಾವಾಗಲೂ ಕೋಟಿ ಕೋಟಿ ಬೆಲೆಯ ಸೀರೆ, ಡ್ರೆಸ್‌, ಒಡವೆಗಳನ್ನು ಧರಿಸಿ ಎಲ್ಲರೂ ಬೆರಗಾಗುವಂತೆ ಮಾಡುತ್ತಾರೆ. ಇತ್ತೀಚಿಗೆ ಇಶಾ, ಗಂಡನ ಜೊತೆ ಡಿನ್ನರ್ ಡೇಟ್‌ಗೆ ಹೋದಾಗ ಇಶಾ ಧರಿಸಿದ್ದ ಡ್ರೆಸ್ ಬೆಲೆ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

ಬಿಲಿಯನೇರ್‌ ಮುಕೇಶ್ ಅಂಬಾನಿಯ ಮಗಳು ಇಶಾ ಅಂಬಾನಿ ರಿಲಯನ್ಸ್‌ನ ಚಿಲ್ಲರೆ ಕ್ಷೇತ್ರದ ಯುವ ಮುಖ್ಯಸ್ಥರಲ್ಲಿ ಒಬ್ಬರು. ಅಜ್ಜ ಧೀರೂಭಾಯಿ ಅಂಬಾನಿ ಮತ್ತು ತಂದೆ ಮುಕೇಶ್ ಅಂಬಾನಿಯವರ ಬಿಸಿನೆಸ್‌ನ್ನು ನಿರ್ವಹಿಸುತ್ತಾ ಸಂಸ್ಥೆಗೆ ಕೋಟಿ ಕೋಟಿ ಲಾಭವನ್ನು ತಂದು ಕೊಡುತ್ತಿದ್ದಾರೆ. ಮಾತ್ರವಲ್ಲ ಇಶಾ ಅಂಬಾನಿ ತಮ್ಮ ಲಕ್ಸುರಿಯಸ್ ಲೈಫ್‌ಸ್ಟೈಲ್‌ಗೆ ಹೆಸರುವಾಸಿಯಾಗಿದ್ದಾರೆ. 

ಯಾವಾಗಲೂ ಕೋಟಿ ಕೋಟಿ ಬೆಲೆಯ ಸೀರೆ, ಡ್ರೆಸ್‌, ಒಡವೆಗಳನ್ನು ಧರಿಸಿ ಎಲ್ಲರೂ ಬೆರಗಾಗುವಂತೆ ಮಾಡುತ್ತಾರೆ. ಇತ್ತೀಚಿಗೆ ಇಶಾ ಮಗಳನ್ನು ಸ್ಕೂಲ್‌ನಿಂದ ಕರೆದೊಯ್ಯಲು ದುಬಾರಿ ಕುರ್ತಾ ಸೆಟ್ ಧರಿಸಿ ಬಂದಿದ್ದು ಸುದ್ದಿಯಾಗಿತ್ತು. ಈಗ ಗಂಡನ ಜೊತೆ ಡಿನ್ನರ್ ಡೇಟ್‌ಗೆ ಹೋದಾಗ ಇಶಾ ಧರಿಸಿದ್ದ ಡ್ರೆಸ್ ಬೆಲೆ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

Tap to resize

ಮಾರ್ಚ್ 31, 2024ರಂದು, ಇಶಾ ಅಂಬಾನಿ ತಮ್ಮ ಪತಿ ಆನಂದ್ ಪಿರಮಾಲ್ ಅವರೊಂದಿಗೆ ಮುಂಬೈನ ಬಾಸ್ಟಿಯನ್ ರೆಸ್ಟೋರೆಂಟ್‌ನಲ್ಲಿ ಡಿನ್ನರ್ ಡೇಟ್‌ಗೆ ಹೋದಾಗ ಕಾಣಿಸಿಕೊಂಡರು. ಆನಂದ್ ಬೂದು ಬಣ್ಣದ ಪ್ಯಾಂಟ್‌ನೊಂದಿಗೆ ಜೋಡಿಸಲಾದ ಆರಾಮದಾಯಕವಾದ ಬಿಳಿ ಶರ್ಟ್‌ನಲ್ಲಿ ಸುಂದರವಾಗಿ ಕಾಣುತ್ತಿದ್ದರು. 

ಮತ್ತೊಂದೆಡೆ, ಇಶಾ ಕಪ್ಪು-ಬಣ್ಣದ ಟ್ಯೂನಿಕ್‌ನಲ್ಲಿ ಅತ್ಯಾಕರ್ಷಕವಾಗಿ ಕಾಣುತ್ತಿದ್ದರು. ಡ್ರೆಸ್ ಪೂರ್ತಿ ಹರಡಿಕೊಂಡಿರೋ ಫ್ಲೋರಲ್ ಪ್ರಿಂಟ್ ಇಶಾ ಅಂಬಾನಿ ಲುಕ್‌ನ್ನು ಇನ್ನಷ್ಟು ಕ್ಲಾಸಿಕ್ ಆಗಿಸಿತ್ತು.
 

ಇಶಾ ಅಂಬಾನಿಯ ಈ ಡ್ರೆಸ್‌ ಆಸ್ಕರ್ ಡೆ ಲಾ ರೆಂಟಾ ಬ್ರಾಂಡ್‌ನದ್ದು ಎಂದು ತಿಳಿದುಬಂದಿದೆ. ಮಾತ್ರವಲ್ಲ ಈ ಡ್ರೆಸ್ ಬೆಲೆ ಬರೋಬ್ಬರಿ 99,148 ರೂ. ಎಂದು ಹೇಳಲಾಗುತ್ತಿದೆ.

ಇಶಾ 2018ರಲ್ಲಿ ಅದ್ದೂರಿ ವಿವಾಹ ಸಂಭ್ರಮದಲ್ಲಿ ಉದ್ಯಮಿ ಆನಂದ್ ಪಿರಾಮಲ್‌ರನ್ನು ವಿವಾಹವಾದರು. 2022ರಲ್ಲಿ, ಇಶಾ ಅಂಬಾನಿ ಅವಳಿ ಮಕ್ಕಳಾದ ಆದಿಯಾ ಮತ್ತು ಮಗ ಕೃಷ್ಣಗೆ ಜನ್ಮ ನೀಡಿದರು. 

ಇಶಾ ಅಂಬಾನಿ ಧರಿಸಿದ್ದ ಲೆಹಂಗಾವನ್ನು ಸಂಪೂರ್ಣವಾಗಿ ಕಸೂತಿ ಮಾಡಲಾಗಿತ್ತು. ಕೆಂಪು, ಹಸಿರು ಬಣ್ಣದ ಬೀಡ್ಸ್‌ಗಳಿಂದ ಅಲಂಕರಿಸಲಾಗಿತ್ತು. ಇಶಾ ಅಂಬಾನಿ, ಡಿಸೈನರ್ ಅಬು ಜಾನಿ ಸಂದೀಪ್ ಖೋಸ್ಲಾ ಸಿದ್ಧಪಡಿಸಿದ ಕೆಂಪು ಬಣ್ಣದ ಕಸೂತಿ ಲೆಹೆಂಗಾವನ್ನು ಧರಿಸಿದ್ದರು. 

ಗ್ರ್ಯಾಂಡ್ ಲೆಹಂಗಾದ ಬ್ಲೌಸ್ ಸಂಪೂರ್ಣ ಬೀಡ್ಸ್‌ ವರ್ಕ್‌ನಿಂದ ಕೂಡಿದ್ದು ಚಿನ್ನ, ವಜ್ರದ ಕೈ ಕುಸುರಿಯಿಂದ ಸಖತ್‌ ಗ್ರ್ಯಾಂಡ್ ಆಗಿ ಕಾಣುತ್ತಿತ್ತು.
 

ಲೆಹೆಂಗಾವು ಕಸೂತಿ ಹೂವಿನ ಮೋಟಿಫ್‌ಗಳನ್ನು ಒಳಗೊಂಡ ಪ್ಯಾನಲ್ ವರ್ಕ್‌ ಒಳಗೊಂಡಿತ್ತು. ಲೆಹೆಂಗಾವನ್ನು ಕಸೂತಿ ದುಪ್ಪಟ್ಟಾದೊಂದಿಗೆ ಸಂಯೋಜಿಸಲಾಗಿತ್ತು.

Latest Videos

click me!