1971ರಲ್ಲಿ ಜನಿಸಿದ ಎಲಾನ್ ಮಸ್ಕ್ ತಂದೆ ಸಹ ಉದ್ಯಮಿಯಾಗಿದ್ದರು. ಎಲಾನ್ ಮಸ್ಕ್ 3 ವರ್ಷದವರಾಗಿದ್ದಲೇ ತಾಯಿ ಜೊತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಅಂತರ್ಮುಖಿಯಾಗಿದ್ದ ಎಲಾನ್ ಮಸ್ಕ್, ಸದಾ ಚಿಂತನೆಯಲ್ಲಿ ಮುಳುಗುತ್ತಿದ್ದರು. 9ನೇ ವಯಸ್ಸಿಗೆ ಎನ್‌ಸ್ಕಲೋಪಿಡಿಯಾ ಬ್ರಾಟನಿಕಾ ಓದಿ ಮುಗಿಸಿದ್ದರು. ವಿಜ್ಞಾನ, ಹಾಸ್ಯ ಸೇರಿದಂತೆ ವಿವಿಧ ಪುಸ್ತಕಗಳನ್ನು ಓದಿದ್ದರು.