ದೇಶದಲ್ಲಿ ಗರಿಷ್ಠ ಹಣ ಸಂಗ್ರಹಿಸೋ 10 ಟೋಲ್‌ ಪ್ಲಾಜಾಗಳಿವು, ಲಿಸ್ಟಲ್ಲಿ ಕರ್ನಾಟಕದ Toll Plaza ಇದ್ಯಾ?

First Published | Aug 8, 2024, 8:04 PM IST

ದೇಶದಲ್ಲಿ ಇಂದು ಟೋಲ್‌ ಕಲೆಕ್ಷನ್‌ನಿಂದಲೇ ಕೇಂದ್ರ ಸರ್ಕಾರ ದೊಡ್ಡ ಪ್ರಮಾಣದಲ್ಲಿ ಹಣ ಮಾಡುತ್ತಿದೆ. ಹಾಗಿದ್ದಲ್ಲಿ, ದೇಶದಲ್ಲಿ ಗರಿಷ್ಠ ಟೋಲ್‌ ಸಂಗ್ರಹ ಮಾಡುವ ಟೋಲ್‌ ಪ್ಲಾಜಾ ಯಾವುದು ಅನ್ನೋ ಕುತೂಹಲ ನಿಮ್ಮಲ್ಲಿದ್ದರೆ, ಇಲ್ಲಿದೆ ನೋಡಿ ಡಿಟೇಲ್ಸ್‌.


2024ರ ಜೂನ್‌ 30ರ ವೇಳೆಗೆ ದೇಶದ ರಾಷ್ಟ್ರೀಯ ಹೆದ್ದಾರಿಗಳಲ್ಲಿ 983 ಟೋಲ್‌ ಪ್ಲಾಜಾಗಳು ಕಾರ್ಯನಿರ್ವಹಣೆ ಮಾಡುತ್ತಿವೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆ ತಿಳಿಸಿದೆ.

Toll Plaza

ಆದರೆ, ದೇಶದಲ್ಲಿ ಗರಿಷ್ಠ ಟೋಲ್‌ ಕಲೆಕ್ಟ್‌ ಮಾಡುವ ಟಾಪ್‌ 10 ಟೋಲ್‌ ಪ್ಲಾಜಾ ಯಾವುದು ಅನ್ನೋ ಕುತೂಹಲ ನಿಮಗೆ ಇರಬೇಕಲ್ಲ. 2024ರ ಹಣಕಾಸು ವರ್ಷದಲ್ಲಿ ಈ 10 ರಾಷ್ಟ್ರೀಯ ಹೆದ್ದಾರಿಯ ಟೋಲ್‌ ಪ್ಲಾಜಾಗಳಿಂದ ಕಲೆಕ್ಟ್‌ ಆಗಿರುವ ಹಣ 3300 ಕೋಟಿ ರೂಪಾಯಿ!

Tap to resize

ಕಳೆದ ಐದು ವರ್ಷದಿಂದ ಈ ವರ್ಷದ ಮಾರ್ಚ್‌ 31ರ ವೇಳೆಗೆ  ಈ 10 ಟೋಲ್‌ ಪ್ಲಾಜಾಗಳಿಂದ ಕಲೆಕ್ಟ್‌ ಆಗಿರುವ ಮೊತ್ತ 14,045 ಕೋಟಿ ರೂಪಾಯಿ ಎಂದಿ ಇಲಾಖೆ ತಿಳಿಸಿದೆ.
 

ಸಾಸಾರಾಮ್‌ ಟೋಲ್‌ ಪ್ಲಾಜಾ: ಬಿಹಾರದ ಸಾಸಾರಾಮ್‌ ಟೋಲ್‌ ಪ್ಲಾಜಾ ಈ ಪಟ್ಟಿಯಲ್ಲಿ 10 ಸ್ಥಾನದಲ್ಲಿದೆ. ವಾರಣಾಸಿ-ಔರಂಗಾಬಾದ್‌ 900 ಕಿಲೋಮೀಟರ್‌ ಮಾರ್ಗಕ್ಕೆ ಇರುವ ಟೋಲ್‌ ಇದಾಗಿದೆ. ಕಳೆದ ಐದು ವರ್ಷದಲ್ಲಿ ಇಲ್ಲಿಂದ ಕಲೆಕ್ಟ್‌ ಆಗಿರುವ ಹಣ 2043.8 ಕೋಟಿ ರೂಪಾಯಿ.
 


ನವಾಬ್‌ಗಂಜ್‌ ಟೋಲ್‌ ಪ್ಲಾಜಾ: ಉತ್ತರ ಪ್ರದೇಶದ ನವಾಬ್‌ಗಂಜ್‌ ಟೋಲ್‌ ಪ್ಲಾಜಾ ಈ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಕಳೆದ ಐದು ವರ್ಷದಲ್ಲಿ ಇಲ್ಲಿನ ಟೋಲ್‌ ಪ್ಲಾಜಾದಿಂದ 1884.5 ಕೋಟಿ ಕಲೆಕ್ಷನ್‌ ಆಗಿದೆ.
 

Toll plaza

ಕೃಷ್ಣಗಿರಿ ಥೋಪುರ್‌ ಟೋಲ್‌ ಪ್ಲಾಜಾ: ತಮಿಳುನಾಡಿನ ಧರ್ಮಪುರಿಯಲ್ಲಿರುವ ಈ ಟೋಲ್‌ ಪ್ಲಾಜಾವನ್ನು ಪಲಯಂ ಟೋಲ್‌ ಪ್ಲಾಜಾ ಎಂದೂ ಹೇಳುತ್ತಾರೆ. ತಮಿಳುನಾಡಿದ ಕೃಷ್ಣಗಿರಿ-ತುಂಬೈಪಾಡಿ ನಡುವಿನ 154 ಕಿಲೋಮೀಟರ್‌ನ ಟೋಲ್‌ ಇದು. ಕಳೆದ ಐದು ವರ್ಷದಲ್ಲಿ ಇಲ್ಲಿ ಕಲೆಕ್ಷನ್‌ ಆಗಿರುವ ಟೋಲ್‌  1124.2 ಕೋಟಿ ರೂಪಾಯಿ.

Toll Plaza

ಥಿಕಾರಿಯಾ/ಜೈಪುರ ಟೋಲ್‌ ಪ್ಲಾಜಾ: ರಾಜಸ್ಥಾನದ ಥಿಕಾರಿಯಾ-ಜೈಪುರ ಟೋಲ್‌ ಪ್ಲಾಜಾ ಇದರಲ್ಲಿ 7ನೇ ಸ್ಥಾನದಲ್ಲಿದೆ. ಕಳೆದ ಐದು ವರ್ಷಗಳಲ್ಲಿ ಇಲ್ಲಿ ಕಲೆಕ್ಷನ್‌ ಆಗಿರುವ ಟೋಲ್‌ 1161.2 ಕೋಟಿ ರೂಪಾಯಿ.

ಚೋರ್ಯಾಸಿ ಟೋಲ್‌ ಪ್ಲಾಜಾ: ಗುಜರಾತ್‌ನ ಚೋರ್ಯಾಸಿ ಟೋಲ್‌ ಪ್ಲಾಜಾ 6ನೇ ಸ್ಥಾನದಲ್ಲಿದೆ. ಭರೂಚ್‌ ಹಾಗೂ ಸೂರತ್‌ ನಡುವಿನ 246 ಕಿಲೋಮೀಟರ್‌ ದೂರದ ಈ ಟೋಲ್‌ನಿಂದ 1272.6 ಕೋಟಿ ರೂಪಾಯಿ ಕಲೆಕ್ಷನ್‌ ಆಗಿದೆ.

ಘರೌಂದಾ ಟೋಲ್‌ ಪ್ಲಾಜಾ: ಹರ್ಯಾಣದಲ್ಲಿರುವ ಘರೌಂದಾ ಟೋಲ್‌ ಪ್ಲಾಜಾ 111.5 ಕಿಲೋಮೀಟರ್‌ ಪಾಣಿಪತ್‌-ಜಲಂಧರ್‌ ಹೈವೇಯಲ್ಲಿದೆ. ಐದು ವರ್ಷದಲ್ಲಿ 1314.4 ಕೋಟಿ ರೂಪಾಯಿ ಕಲೆಕ್ಷನ್‌ ಆಗಿದೆ.

ಬಾರಾಜೋರ್‌ ಟೋಲ್‌ ಪ್ಲಾಜಾ: ಉತ್ತರ ಪ್ರದೇಶದಲ್ಲಿರುವ ಟೋಲ್‌ ಪ್ಲಾಜಾ ಇದು. ಇಟವಾವನ್ನು ಚಕೇರಿಗೆ  ಕನೆಕ್ಟ್‌ ಮಾಡುತ್ತದೆ. ಕಳೆದ ಐದು ವರ್ಷದಿಂದ 1480.7 ಕೋಟಿ ರೂಪಾಯಿ ಕಲೆಕ್ಷನ್‌ ಆಗಿದೆ.

toll plaza

ಜಲಧುಲಗೋರಿ ಟೋಲ್‌ ಪ್ಲಾಜಾ: ಪಶ್ಚಿಮ ಬಂಗಾಳದ ಜಲಧುಲಗೋರಿ ಟೋಲ್‌ ಪ್ಲಾಜಾ ಎಷ್ಟು ಫೇಮಸ್‌ ಎಂದರೆ, ಬರೀ 35 ಕಿಲೋಮೀಟರ್‌ ದೂರದ ಟೋಲ್‌ ಇದಾಗಿದ್ದು, ಕಳೆದ ಐದು ವರ್ಷದಿಂದ 1538.9 ಕೋಟಿ ಕಲೆಕ್ಷನ್‌ ಆಗಿದೆ.

toll plaza

ಶಹಜಹಾನ್‌ಪುರ ಟೋಲ್‌ ಪ್ಲಾಜಾ: ಗುರ್ಗಾಂಗ್‌-ಕೋಟಪುಟ್ಲಿ-ಜೈಪುರ ನಡುವಿನ 115 ಕಿಲೋಮೀಟರ್‌ ದೂರದ ಶಹಜಹಾನ್‌ಪುರ ಟೋಲ್‌ ಪ್ಲಾಜಾ ರಾಜಸ್ಥಾನದಲ್ಲಿದೆ. ಕಳೆದ ಐದು ವರ್ಷದಲ್ಲಿ ಇಲ್ಲಿಂದ ಕಲೆಕ್ಷನ್‌ ಆದ ಟೋಲ್‌ ಮೊತ್ತ 1884.5 ಕೋಟಿ ರೂಪಾಯಿ.

ಬರ್ಥಾನಾ ಟೋಲ್‌ ಪ್ಲಾಜಾ: ಗುಜರಾತ್‌ನ ಈ ಟೋಲ್‌ ಪ್ಲಾಜಾ ನಂಬರ್‌ 1 ಸ್ಥಾನದಲ್ಲಿದೆ. ಹೆಚ್ಚಿನ ಶುಲ್ಕ ಇಲ್ಲಿಂದ ವಸೂಲಿ ಆಗುತ್ತಿದೆ. ಕಳೆದ ಐದು ವರ್ಷದಲ್ಲಿ ಇಲ್ಲಿಂದ ಕಲೆಕ್ಷನ್‌ ಆಗಿರುವ ಮೊತ್ತ 2043.8 ಕೋಟಿ ರೂಪಾಯಿ.
 

Latest Videos

click me!