ಅಮೆರಿಕದ ಬಹುರಾಷ್ಟ್ರೀಯ ಕಂಪನಿ ಒರಾಕಲ್ ಕಂಪನಿಯೊಂದಿಗೆ ಪಾಲುದಾರಿಕೆ ಹಂಚಿಕೊಂಡಿದೆ.
undefined
ಈಮೂಲಕ ಅಮೆರಿಕದಲ್ಲಿ ಟಿಕ್‌ಟಾಕ್ ಉದ್ಯಮವನ್ನು ಮಾರಾಟ ಮಾಡುವ ಪ್ರಸ್ತಾಪಕ್ಕೆ ಚೀನಾದ ಬೈಟ್ ಡ್ಯಾನ್ಸ್ ಎಳ್ಳು ನೀರು ಬಿಟ್ಟಿದೆ.
undefined
ಈ ಮೂಲಕ ಅಮೆರಿಕದಲ್ಲಿ ಟಿಕ್‌ಟಾಕ್ ಕೊಂಡುಕೊಳ್ಳುವ ಸತ್ಯ ನಾದೆಳ್ಲಾ ನೇತೃತ್ವದ ಮೈಕ್ರೋಸಾಫ್ಟ್ ಕಂಪನಿಗೆ ಹಿನ್ನಡೆಯಾದಂತಾಗಿದೆ.
undefined
ಸೆ.20ರ ಒಳಗಾಗಿ ಟಿಕ್‌ಟಾಕ್ ವಿಡಿಯೋ ಆ್ಯಪ್ ಅನ್ನು ಅಮೆರಿಕ ಕಂಪನಿಗೆ ಮಾರಾಟ ಮಾಡಬೇಕು, ಇಲ್ಲವಾದಲ್ಲಿ ಅಮೆರಿದಲ್ಲಿ ಟಿಕ್‌ಟಾಕ್ ಅನ್ನು ನಿಷೇಧಿಸುವುದಾಗಿ ಅಧ್ಯಕ್ಷ ಟ್ರಂಪ್ ಬೆದರಿಕೆ ಹಾಕಿದ್ದರು.
undefined
ಇದರ ಬೆನ್ನಲ್ಲೇ ಒರಾಕಲ್ ಅಥವಾ ಮೈಕ್ರೋಸಾಫ್ಟ್ ಕಂಪನಿಗೆ ಅಮೆರಿಕದಲ್ಲಿ ಟಿಕ್‌ಟಾಕ್ ಉದ್ಯಮ ಮಾರಾಟ ಮಾಡಲು ಬೈಟೆಡ್ಯಾನ್ಸ್ ಮಾತುಕತೆ ನಡೆಸುತ್ತಿತ್ತು
undefined
ಸದ್ಯ ಈ ಮಾತುಕತೆ ಅಂತಿಮವಾಗಿದ್ದು, ಅಮೆರಿಕದಲ್ಲಿ ಟಿಕ್‌ಟಾಕ್ ಉದ್ಯಮ ಒರಾಕಲ್ ಪಾಲಾಗಿದೆ.
undefined
ಆಟಗಾರರನ್ನು ಚೀಟ್ ಮಾಡುತ್ತಾರೆ ಎಂದು ಆರೋಪಿಸಿ ಬ್ಯಾನ್ ಮಾಡಿದ್ದ ಪಬ್ ಜಿಯೇ ಬ್ಯಾನ್ ಆಗಿ ಹೋಗಿದೆ.
undefined
ಒರಾಕಲ್ ಕಂಪನಿ ಪಾಲುದಾರನಾದ ಬೆನ್ನಲ್ಲೇ ಭಾರತದಲ್ಲಿ ಟಿಕ್‌ಟಾಕ್ ಮೇಲಿನ ಬ್ಯಾನ್ ತೆರವಾಗುತ್ತದೆ ಎಂಬ ಮಾತುಗಳು ಜೋರಾಗಿದ್ದವು. ಆದರೀಗ ಇದು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
undefined
ಹೌದು ಬೈಟ್ ಡಾನ್ಸ್ ಒರಾಕಲ್ ಜೊತೆ ಪಾಲುದಾರಿಕೆ ಹಂಚಿಕೊಂಡಿದೆ, ಆದರೆ ಮಾರಾಟ ಮಾಡಿಲ್ಲ. ಮೂಲತಃ ಟಿಕ್‌ಟಾಕ್ ಒಡೆತನ ಚೀನಾ ಮೂದ ಕಂಪನಿ ಬಳಿಯೇ ಇದೆ. ಹೀಗಾಗಿ ಗ್ರಾಹಕರ ಡೇಟಾ ಸುರಕ್ಷಿತವಾಗಿರುತ್ತದೆ ಎನ್ನಲು ಸಾಧ್ಯವಿಲ್ಲ. ಹೀಗಾಗಿ ಬ್ಯಾನ್ ತೆರವುಗೊಳಿಸುವುದಿಲ್ಲ ಎಂದು ಹೇಳಲಾಗಿದೆ.
undefined