ಪ್ರತಿಷ್ಠಿತ ಉದ್ಯಮಿಯ ಮಗಳು ಈ ಪ್ರಸಿದ್ಧ ಗಾಯಕಿ, 17ರ ವಯಸ್ಸಿಗೆ ತನ್ನದೇ ಕಂಪನಿ ಆರಂಭಿಸಿದ್ದಳು!

First Published Sep 3, 2020, 5:21 PM IST

ದೇಶದ ಶ್ರೀಮಂತ ವ್ಯಕ್ತಿಗಳಲ್ಲಿ ಗುರುತಿಸಿಕೊಳ್ಳುವ ಆದಿತ್ಯ ಬಿರ್ಲಾ ಗ್ರೂಪ್‌ನ ಚೇರ್ಮನ್ ಕುಮಾರ್ ಮಂಗಲಂ ಬಿರ್ಲಾರ ಮಗಳು ಅನನ್ಯಾ ಬಿರ್ಲಾ ಆಯಕಿ ಹಾಗೂ ಮ್ಯೂಜಿಶಿಯನ್ ಆಗಿದ್ದಾರೆ. ಅನನ್ಯಾ ಓರ್ವ ಫೇಮಸ್ ಗಾಯಕಿಯಾಗಿದ್ದು, ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಜೊತೆಗೆ ಅವರು ಅತ್ಯಂತ ಬಿಂದಾಸ್ ಆಗಿ ಜೀವನ ಸಾಗಿಸುತ್ತಾರೆ. ಗ್ಲಾಮರಸ್ ಕೂಡಾ ಆಗಿರುವ ಅನನ್ಯಾ ಸೆಲೆಬ್ರಿಟಿಗಳಿಗಿಂತ ಕಡಿಮೆ ಇಲ್ಲ. ಕೆಲ ಸಮಯದ ಹಿಂದಷ್ಟೇ ಅವರು ತನ್ನ ತಂದೆ  ಕುಮಾರ್ ಮಂಗಲಂ ಬಿರ್ಲಗೆ ಇನ್ಸ್ಟಾಗ್ರಾಂ ಪೋಸ್ಟ್‌ ಒಂದರಲ್ಲಿ ನನ್ನ ಮೇಲೆ ನಿಗಾ ಇಡಲು ನೀವು ಮಾಡಿರುವ ಸೀಕ್ರೆಟ್ ಅಕೌಂಟ್‌ನಿಂದ ನೀವಿದನ್ನು ನೋಡಬಹುದೆಂದು ಬರೆದಿದ್ದರು. ಅನನ್ಯಾರ ಜೀವನಶೈಲಿ ಯಾವುದೇ ಸೆಲೆಬ್ರಿಟಿಗಿಂತ ಕಡಿಮೆ ಇಲ್ಲ.
 

ಇನ್ಸ್ಟಾಗ್ರಾಂನಲ್ಲಿ ಭಾರೀ ಆಕ್ಟಿವ್:ಗಾಯಕಿ ಅನನ್ಯಾ ಇನ್ಸ್ಟಾಗ್ರಾಂನಲ್ಲಿ ಭಾರೀ ಆಕ್ಟಿವ್ ಆಗಿದ್ದಾರೆ. ಅವರು ತಮ್ಮ ಖಾತೆಯಲ್ಲಿ ಯಾವತ್ತೂ ತಮ್ಮ ಗ್ಲಾಮರಸ್ ಪೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ತನ್ನ ತಂದೆ ಜೊತೆಗಿರುವ ಫೋಟೋಗಳನ್ನೂ ಹಾಕುತ್ತಾರೆ.
undefined
ಲವ್ ಯೂ ಸೋ ಮಚ್ ಪಾಪಾ: ಇತ್ತೀಚೆಗಷ್ಟೇ ಅನನ್ಯಾ ಇನ್ಸ್ಟಾಗ್ರಾಂನಲ್ಲಿ ತಮ್ಮ ಫೋಟೋ ಒಂದನ್ನು ಶೇರ್ ಮಾಡುತ್ತಾ ನೀವು ನನ್ನನ್ನು ಎಲ್ಲರಿಗಿಂತ ಹೆಚ್ಚು ಅರ್ಥೈಸಿಕೊಂಡಿದ್ದೀರಿ, ಲವ್ ಯೂ ಸೋ ಮಚ್ ಪಾಪಾ ಎಂದು ಬರೆದಿದ್ದರು.
undefined
ಸಂಗೀತ ಕ್ಷೇತ್ರದಲ್ಲಿ ವೃತ್ತಿ: ಅನನ್ಯಾ ಸಂಗೀತ ಕ್ಷೇತ್ರದಲ್ಲಿ ತಮ್ಮ ವೃತ್ತಿ ಬದುಕು ಕಟ್ಟಿಕೊಂಡಿದ್ದಾರೆ. ಬಾಲ್ಯದಿಂದಲೂ ಹಾಡುವ ಆಸಕ್ತಿ ಇದ್ದ ಅನನ್ಯಾರ ಮೊದಲ ಹಾಡು 'ಲಿವಿನ್ ದ ಲೈಫ್‌' 2016ರಲ್ಲಿ ಬಿಡುಗಡೆಗೊಂಡಿತ್ತು.
undefined
ಯೂನಿವರ್ಸಲ್ ಮ್ಯೂಜಿಕ್ ಇಂಡಿಯಾ ಜೊತೆ ಒಪ್ಪಂದ: ಅನನ್ಯಾರ ಮೊದಲ ಹಾಡು ಅದೆಷ್ಟು ಫೇಮಸ್ ಆಯ್ತೆಂದರೆ ಯೂನಿವರ್ಸಲ್ ಮ್ಯೂಜಿಕ್ ಇಂಡಿಯಾ ಅವರನ್ನು ಸೈನ್ ಮಾಡಿಕೊಂಡಿತು. ಇದಾದ ಬಳಿಕ ಅವರ ಜನಪ್ರಿಯತೆ ಹೆಚ್ಚುತ್ತಲೇ ಹೋಯ್ತು.
undefined
ಲ್ಯಾಕ್ಮೇ ಫ್ಯಾಷನ್ ವೀಕ್‌ನಲ್ಲಿ ಭಾಗಿ: ಅನನ್ಯಾ ಲ್ಯಾಕ್ಮೇ ಫ್ಯಾಷನ್ ವೀಕ್‌, 2017ರಲ್ಲಿ ಭಾಗಿಯಾಗಿ ಕಾರ್ಯಕ್ರಮ ನೀಡಿದರು. ಇದು ಕೂಡಾ ಭಾರೀ ಮೆಚ್ಚುಗೆ ಪಡೆಯಿತು.
undefined
ಉದ್ಯಮದಲ್ಲೂ ಸಕ್ರಿಯ: ಅನನ್ಯಾ ಉದ್ಯಮ ಕ್ಷೇತ್ರದಲ್ಲೂ ಭಾರೀ ಆಕ್ಟಿವ್ ಆಗಿದ್ದಾರೆ. ಇವರು ಲಕ್ಸುರಿ ಇ- ಕಾಮರ್ಸ್ ಕಂಪನಿಯ ಸ್ಥಾಪಕಿ ಹಾಗೂ ಸಿಇಓ ಆಗಿದ್ದಾರೆ.
undefined
ಗ್ರಾಮೀಣ ಮಹಿಳೆಯರ ಸಹಾಯಕ್ಕಾಗಿ ಫರ್ಮ್: ಸಮಾಜ ಸೇವಕಿಯಾಗಿಯೂ ಅನನ್ಯಾ ಗುರುತಿಸಿಕೊಂಡಿದ್ದಾರೆ. ಮೈಕ್ರೋ ಫೈನಾನ್ಸ್‌ ಹೆಸರಿನ ಫರ್ಮ್ ಒಂದನ್ನು ಅವರು ರಚಿಸಿದ್ದು, ಇದು ಗ್ರಾಮೀಣ ಮಹಿಳೆಯರ ಸಹಾಯಕ್ಕಾಗಿ ಸ್ಥಾಪಿಸಲಾಗಿದೆ.
undefined
ಹದಿನೇಳನೇ ವಯಸ್ಸಿಗೆ ಆರಂಭಿಸಿದ್ದರು ಕಂಪನಿ: ಅನನ್ಯಾ ಬಿರ್ಲಾ ಹದಿನೇಳನೆ ವಯಸ್ಸಿಗೆ ಮೈಕ್ರೋ ಫೈನಾನ್ಸ್‌ ಕಂಪನಿ ಆರಂಭಿಸಿದ್ದರು. ದೇಶದ ನಾಲ್ಕು ರಾಜ್ಯಗಳಲ್ಲಿ ಇದರ ಸುಮಾರು 70 ಶಾಖೆಗಳಿವೆ.
undefined
ಗೋಲ್ಡ್‌ ಅವಾರ್ಡ್: ಅನನ್ಯಾ ಪಾಂಡೆಯ ಮೈಕ್ರೋ ಫೈನಾನ್ಸ್‌ ಕಂಪನಿಗೆ ಬೆಸ್ಟ್ ಸ್ಟಾರ್ಟ್‌ಅಪ್‌ ಎಂಬ ಗೋಲ್ಡನ್‌ ಅವಾರ್ಡ್ ಕೂಡಾ ಸಿಕ್ಕಿದೆ.
undefined
ಇಷ್ಟೇ ಅಲ್ಲದೇ ಚೆಸ್ ಹಾಗೂ ಟೇಬಲ್ ಟೆನ್ನಿಸ್‌ನಲ್ಲೂ ಇವರಿಗೆ ಭಾರೀ ಆಸಕ್ತಿ ಇದೆ. ಜೊತೆಗೆ ಐಷಾರಾಮಿ ಕಾರುಗಳ ಕ್ರೇಜ್ ಕೂಡಾ ಇದೆ.
undefined
click me!