ನಿದ್ರಿಸುವವರಿಗಾಗಿ ಹುಡುಕುತ್ತಿದೆ ಬೆಂಗಳೂರಿನ ಕಂಪನಿ, 1 ಲಕ್ಷ ಗಳಿಸುವ ಸುವರ್ಣಾವಕಾಶ!

First Published | Sep 1, 2020, 5:26 PM IST

ಭಾರತದಲ್ಲಿ ಕೊರೋನಾ ನಡುವೆ ಅನೇಕ ಮಂದಿ ತಮ್ಮ ನೌಕರಿ ಕಳೆದುಕೊಂಡಿದ್ದಾರೆ. ಹೀಗಿರುವಾಗ ಭಾರತೀಯ ಕಂಪನಿಯೊಂದು ನೂರು ದಿನದಲ್ಲಿ ಒಂದು ಲಕ್ಷ ಗಳಿಸುವ ಅವಕಾಶ ನೀಡುತ್ತಿದೆ. ಅದು ಕೂಡಾ ಆರಾಮಾಗಿ ಆಗುವ ಕೆಲಸದ ಮೂಲಕ, ಅಂದರೆ ನಿದ್ದೆ ಮಾಡುವುದು. ಹೌದು ಈ ಕಂಪನಿ ಸ್ಲೀಪ್ ಇಂಟರ್ನ್‌ಶಿಪ್‌ ಅವಕಾಶ ನೀಡಿದೆ. ಇದರಲ್ಲಿ ನಿಮಗೆ ಕೇವಲ ಒಂಭತ್ತು ಗಂಟೆ ಮಲಗಿದ್ರೆ ಒಂದು ಲಕ್ಷ ರೂಪಾಯಿ ನೀಡುತ್ತಾರೆ.ಈ ಇಂಟರ್ನ್‌ಶಿಪ್‌ ಭಾರೀ ಚರ್ಚೆ ಹುಟ್ಟು ಹಾಕಿದೆ. ಉತ್ತಮ ನಿದ್ದೆಗಾಗಿ ಕಂಪನಿಯಿಂದ ಅನೇಕ ಸೌಲಭ್ಯಗಳೂ ಸಿಗುತ್ತವೆ. ಇದರಲ್ಲಿ ತಜ್ಞರು ನಿಮಗೆ ಉತ್ತಮವಾಗಿ ನಿದ್ರಿಸಲು ಬೇಕಾದ ಸಲಹೆಗಳನ್ನೂ ನೀಡುತ್ತಾರೆ. ಇಲ್ಲಿದೆ ಈ ಇಂಟರ್ನ್‌ಶಿಪ್‌ನ ಸಂಪೂರ್ಣ ವಿವರ

ಕೊರೋನಾತಂಕ ನಡುವೆ ವಿಶ್ವಾದ್ಯಂತ ನಿರುದ್ಯೋಗ ಸಮಸ್ಯೆ ಕಂಡು ಬಂದಿದೆ. ಭಾರತ ಕೂಡಾ ಇದರಿಂದ ಹೊರತಾಗಿಲ್ಲ. ಕೊರೋನಾಗಿಂತ ಮೊದಲೇ ಕಾಡುತ್ತಿದ್ದ ನಿರುದ್ಯೋಗ ಸಮಸ್ಯೆ ಈಗ ಮತ್ತೊಂದು ಹಂತ ತಲುಪಿದೆ.
ಹೀಗಿರುವಾಗ ಬೆಂಗಳೂರಿನ ಕಂಪನಿಯೊಂದು ಇಂಟರ್ನ್‌ಗಳನ್ನು ಹುಡುಕುತ್ತಿದೆ. ಇವರನ್ನು 100 ದಿನಗಳಿಗೆ ಅಪಾಂಯ್ಟ್‌ ಮಾಡಲಾಗುತ್ತದೆ. ಹೀಗಿರುವಾಗ ಅವರು ಒಂಭತ್ತು ಗಂಟೆ ನಿದ್ರಿಸಬೇಕಾಗುತ್ತದೆ. ಇದಕ್ಕೆ ಪಪ್ರತಿಯಾಗಿ ಅವರಿಗೆ ಒಂದು ಲಕ್ಷ ರೂಪಾಯಿ ನೀಡಲಾಗುತ್ತದೆ.
Tap to resize

ಒಂಭತ್ತು ಗಂಟೆ ಚಿಂತೆ ಇಲ್ಲದೇ ನೀವು ನಿದ್ದೆ ಮಾಡಬೇಕಷ್ಟೇ. ಕೇವಲ ನಿದ್ರಿಸಲು ನಿಮಗೆ ಇಷ್ಟು ಮೊತ್ತ ನೀಡಲಾಗುತ್ತದೆ.
ಒಂಭತ್ತು ಗಂಟೆ ನಿದ್ರಿಸಲು ನಿಮಗೆ ಸ್ಲೀಪ್ ಎಕ್ಸ್‌ಪರ್ಟ್ಸ್‌ ಸಲಹೆಗಳನ್ನೂ ನೀಡುತ್ತಾರೆ. ಜೊತೆಗೆ ಪರ್ಫೆಕ್ಟ್‌ ಆಹಾರವನ್ನೂ ನೀಡಲಾಗುತ್ತದೆ.
ಈ ಇಂಟರ್ನ್‌ಶಿಪ್‌ನಲ್ಲಿ ಅನೇಕ ವಿಚಾರಗಳನ್ನು ನೋಡಲಾಗುತ್ತದೆ. ನಿಮಗೆ ಅನೇಕ ಬಗೆಯ ಪರಿಸ್ಥಿತಿಯನ್ನು ಎದುರಿಸುವ ಸವಾಲಿರುತ್ತದೆ. ಒಂದು ವೇಳೆ ಅದೆಷ್ಟೇ ಅಡೆ ತಡೆ ಇದ್ದರೂ ನೀವು ಆರಾಮಾಗಿ ನಿದ್ರಿಸಬಲ್ಲಿರಾದರೆ ನೀವು ಈ ಇಂಟರ್ನ್‌ಶಿಪ್‌ಗೆ ಪರ್ಫೆಕ್ಟ್‌ ಆಗಿದ್ದೀರೆಂದರ್ಥ.
ಕಂಪನಿಯ ಹೆಸರು wakefitಇದು ರಿಟೇಲರ್ ಸ್ಟಫ್ಸ್‌ ಮಾಡುತ್ತದೆ. ಹೀಗಾಗಿ ಈ ಇಂಟರ್ನ್‌ಶಿಪ್‌ನ್ನು ರೆಕಾರ್ಡ್‌ ಮಾಡಿ ಅನಲೈಜ್ ಮಾಡಲು ಕಳುಹಿಸುತ್ತಾರೆ. ಈ ಮೂಲಕ ಮನುಷ್ಯರಿಗೆ ಒಳ್ಳೆಯ ನಿದ್ರೆಗೆ ಯಾವುದು ಸಹಾಯ ಎಂದು ತಿಳಿಯುತ್ತದೆ.
ಈ ಕಂಪನಿ ಇಂತಹ ಆಫರ್ ಕೊಟ್ಟಿರುವುದು ಇದೇ ಮೊದಲಲ್ಲ. ಇದಕ್ಕಿಂತ ಮೊದಲೂ ಇಂತಹುದೇ ಒಂಉ ಇಂಟರ್ನ್‌ಶಿಪ್ ಇಟ್ಟಿತ್ತು. ಇದರಲಲ್ಲಿ 23 ಜನರ ಮೇಲೆ ನಿಗಾ ಇರಿಸಲಾಗಿತ್ತು.

Latest Videos

click me!