ಯಾವ ಸ್ಟಾರ್ಟ್‌ಅಪ್‌ಗಳಿಗೆ ಹಣ ಸಿಗುತ್ತೆ?
ಸಾಮಾಜಿಕ ಪರಿಣಾಮ, ತ್ಯಾಜ್ಯ ನಿರ್ವಹಣೆ, ನೀರು ನಿರ್ವಹಣೆ, ಶಿಕ್ಷಣ, ಕೃಷಿ, ಆಹಾರ ಸಂಸ್ಕರಣೆ, ಬಯೋಟೆಕ್ನಾಲಜಿ, ಆರೋಗ್ಯ, ಇಂಧನ, ಭದ್ರತೆ, ಬಾಹ್ಯಾಕಾಶ, ರೈಲ್ವೆ, ತೈಲ ಮತ್ತು ಅನಿಲ ಕ್ಷೇತ್ರಗಳಲ್ಲಿ ಹೊಸ ಐಡಿಯಾಗಳನ್ನ ತರೋ ಸ್ಟಾರ್ಟ್‌ಅಪ್‌ಗಳಿಗೆ ಹೆಚ್ಚಿನ ಆದ್ಯತೆ. ಈ ಸ್ಟಾರ್ಟ್‌ಅಪ್ ಕಂಪನಿಗೆ ಸರ್ಕಾರದ ಬೇರೆ ಯಾವುದೇ ಯೋಜನೆಯಿಂದ 10 ಲಕ್ಷಕ್ಕಿಂತ ಹೆಚ್ಚು ಹಣ ಸಿಕ್ಕಿರಬಾರದು. .
ಕಂಪನಿಗಳ ಕಾಯ್ದೆ-2013, SEBI (ICDR) ನಿಯಮಗಳ ಪ್ರಕಾರ, ಸ್ಟಾರ್ಟ್‌ಅಪ್‌ನಲ್ಲಿ ಭಾರತೀಯ ಪ್ರವರ್ತಕರ ಪಾಲು ಕನಿಷ್ಠ 51% ಇರಬೇಕು. ಈ ಅರ್ಹತೆಗಳಿದ್ರೆ, ವರ್ಷಕ್ಕೆ 5% ಬಡ್ಡಿದರದಲ್ಲಿ 30 ಲಕ್ಷದವರೆಗೆ ಸಾಲ ಸಿಗುತ್ತೆ.