New Postal Scheme 2026 ಪೋಸ್ಟ್ ಆಫೀಸ್‌ನಲ್ಲಿ ಹೂಡಿಕೆ ಮಾಡುವುದರಿಂದ ಹಣಕ್ಕೆ 100% ಆರ್ಥಿಕ ಭದ್ರತೆ ಮತ್ತು ಅದೇ ಸಮಯದಲ್ಲಿ ಸ್ಥಿರ ಆದಾಯ ದೊರೆಯುತ್ತದೆ. ಹಾಗಾದರೆ 1 ರೂಪಾಯಿಯನ್ನೂ ಕಳೆದುಕೊಳ್ಳದೆ, ಬಡ್ಡಿಯ ರೂಪದಲ್ಲೇ ರೂ.7 ಲಕ್ಷ ಗಳಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ವಿವರ.
ಮ್ಯೂಚುವಲ್ ಫಂಡ್, ಷೇರು ಮಾರುಕಟ್ಟೆಯಲ್ಲಿ ಹಣವನ್ನು ಹೂಡಿಕೆ ಮಾಡುವ ಮೂಲಕ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಬಯಸದವರಿಗೆ ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳು ಬಹಳ ಜನಪ್ರಿಯ ಆಯ್ಕೆಯಾಗಿದೆ. ಪೋಸ್ಟ್ ಆಫೀಸ್‌ನಲ್ಲಿ ಹೂಡಿಕೆ ಮಾಡುವುದರಿಂದ ಹಣಕ್ಕೆ 100% ಆರ್ಥಿಕ ಭದ್ರತೆ ಮತ್ತು ಅದೇ ಸಮಯದಲ್ಲಿ ಸ್ಥಿರ ಆದಾಯ ದೊರೆಯುತ್ತದೆ. ಹಾಗಾದರೆ 1 ರೂಪಾಯಿಯನ್ನೂ ಕಳೆದುಕೊಳ್ಳದೆ, ಬಡ್ಡಿಯ ರೂಪದಲ್ಲೇ ರೂ.7 ಲಕ್ಷ ಗಳಿಸುವುದು ಹೇಗೆ? ಪೋಸ್ಟ್ ಆಫೀಸ್‌ನ ಆ ಸುವರ್ಣ ಯೋಜನೆ ಯಾವುದು? ಇಲ್ಲಿದೆ ಸಂಪೂರ್ಣ ವಿವರ.
29
ಎನ್‌ಎಸ್‌ಸಿ ಯೋಜನೆ ಜಾಕಪಾಟ್!
ಪ್ರಸ್ತುತ, ಅಂಚೆ ಕಚೇರಿಯ ಅತ್ಯಂತ ಜನಪ್ರಿಯ ಯೋಜನೆಗಳಲ್ಲಿ ಒಂದಾದ 'ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ' (NSC) ಖಾತೆಯು ಗ್ರಾಹಕರಿಗೆ ಶೇಕಡಾ 7.7 ರಷ್ಟು ಬಡ್ಡಿದರವನ್ನು ನೀಡುತ್ತದೆ. ಕನಿಷ್ಠ ರೂ. 1,000 ಹೂಡಿಕೆಯೊಂದಿಗೆ, ಯಾವುದೇ ಅಪಾಯವಿಲ್ಲದೆ ಕೇವಲ ₹ 7 ಲಕ್ಷಕ್ಕಿಂತ ಹೆಚ್ಚಿನ ಬಡ್ಡಿಯನ್ನು ಹೇಗೆ ಗಳಿಸಬಹುದು ಎಂಬುದನ್ನು ಈಗ ನೋಡೋಣ.
39
ಏನಿದು ಎನ್‌ಎಸ್‌ಸಿ ಯೋಜನೆ?
ಕೇಂದ್ರ ಸರ್ಕಾರವು ಪ್ರಸ್ತುತ ಜುಲೈ 2026 ರವರೆಗಿನ ಅವಧಿಗೆ NSC ಯೋಜನೆ ಮೇಲೆ ಶೇಕಡಾ 7.7 ರಷ್ಟು ಸ್ಥಿರ ಬಡ್ಡಿದರವನ್ನು ನೀಡುತ್ತಿದೆ. ನೀವು ಯೋಜನೆಯಲ್ಲಿ ಹೂಡಿಕೆ ಮಾಡುವ ಮೊತ್ತದ ಮೇಲೆ ಬಡ್ಡಿಯನ್ನು ಲೆಕ್ಕಹಾಕಲಾಗುತ್ತದೆ. ಯೋಜನೆಯ ಮುಕ್ತಾಯ ಅವಧಿಯ ನಂತರ, ಸಂಪೂರ್ಣ ಬಡ್ಡಿ ಮೊತ್ತವನ್ನು ನೇರವಾಗಿ ಹೂಡಿಕೆದಾರರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.
ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ (NSC) ಯೋಜನೆಯಲ್ಲಿ ನೀವು ಒಟ್ಟು ₹15,60,000 ಹೂಡಿಕೆ ಮಾಡಿದರೆ, ಅದಕ್ಕೆ ವಾರ್ಷಿಕ 7.7% ಸಂಯುಕ್ತ ಬಡ್ಡಿ ಸಿಗುತ್ತದೆ. 5 ವರ್ಷಗಳ ಈ ಯೋಜನೆಯಲ್ಲಿ, ನಿಮ್ಮ ಮೂಲ ಹಣದ ಜೊತೆಗೆ ಬಡ್ಡಿಯ ರೂಪದಲ್ಲಿ ಬರೋಬ್ಬರಿ ₹7,00,432 ನಿವ್ವಳ ಲಾಭ ಗಳಿಸಬಹುದು. ಅಂದರೆ, 5 ವರ್ಷಗಳ ನಂತರ ನಿಮಗೆ ಒಟ್ಟು ₹22,60,432 ಕೈಸೇರುತ್ತದೆ. ಇದು ಸುರಕ್ಷಿತ ಹಾಗೂ ಉತ್ತಮ ಲಾಭದಾಯಕ ಹೂಡಿಕೆಯಾಗಿದೆ.
59
ಕನಿಷ್ಠ ಹೂಡಿಕೆ ಮೊತ್ತ ಎಷ್ಟು ಗೊತ್ತಾ?
ಈ ರಾಷ್ಟ್ರೀಯ ಉಳಿತಾಯ ಬಾಂಡ್ ಯೋಜನೆಯಲ್ಲಿ ಕನಿಷ್ಠ ಹೂಡಿಕೆ ಮೊತ್ತ ಕೇವಲ ₹1,000. ಆದರೆ ಅತ್ಯಂತ ಮುಖ್ಯವಾದ ವಿಷಯವೆಂದರೆ ಗರಿಷ್ಠ ಹೂಡಿಕೆ ಮಿತಿಯಿಲ್ಲ. ಈ ಯೋಜನೆಯಲ್ಲಿ ನೀವು ಎಷ್ಟು ಹಣ ಬೇಕಾದರೂ ಹೂಡಿಕೆ ಮಾಡಬಹುದು ಮತ್ತು ನಿಮ್ಮ ಆರ್ಥಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಸುರಕ್ಷಿತ ರೀತಿಯಲ್ಲಿ ಲಾಭ ಗಳಿಸಬಹುದು.
69
ಅರ್ಹತೆ ಏನು?
ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸುವ ಯಾವುದೇ ಭಾರತೀಯ ನಾಗರಿಕರು ಖಾತೆಯನ್ನು ತೆರೆಯಬಹುದು. ಈ NSC ಖಾತೆ (ಮಕ್ಕಳ ಖಾತೆ) ಅನ್ನು ನಿಮ್ಮ ಅಪ್ರಾಪ್ತ ಮಕ್ಕಳ ಹೆಸರಿನಲ್ಲಿ ಸುಲಭವಾಗಿ ತೆರೆಯಬಹುದು. ಮಗುವಿಗೆ 10 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, ಪೋಷಕರು ಖಾತೆಯನ್ನು ನಿರ್ವಹಿಸಬಹುದು. ಆದರೆ, 10 ವರ್ಷ ಪೂರ್ಣಗೊಂಡ ನಂತರ, ಮಕ್ಕಳು ನೇರವಾಗಿ ಖಾತೆಯನ್ನು ನಿರ್ವಹಿಸಬಹುದು.
79
ಪ್ರಯೋಜನೆಗಳು ಏನು?
ಈ ಯೋಜನೆಯು ಪ್ರಯೋಜನಗಳನ್ನು ಒದಗಿಸುವುದಲ್ಲದೆ, ನಿಮ್ಮ ಕಷ್ಟಪಟ್ಟು ಸಂಪಾದಿಸಿದ ಹಣದ ಮೇಲೆ ತೆರಿಗೆ ವಿನಾಯಿತಿಯನ್ನು ಸಹ ನೀಡುತ್ತದೆ. NSC ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ, ನೀವು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಅಡಿಯಲ್ಲಿ ಒಂದು ಹಣಕಾಸು ವರ್ಷದಲ್ಲಿ ಗರಿಷ್ಠ 1.5 ಲಕ್ಷ ರೂ.ಗಳವರೆಗೆ ಗಣನೀಯ ತೆರಿಗೆ ಉಳಿತಾಯವನ್ನು ಪಡೆಯಬಹುದು.
89
ಗಮನಿಸಬೇಕಾದ ಅಂಶ!
ಹೂಡಿಕೆದಾರರ ಅನುಕೂಲಕ್ಕಾಗಿ, ಈ ಯೋಜನೆಯು ಖಾತೆಯನ್ನು ಮುಕ್ತಾಯಕ್ಕೆ ಮುಂಚಿತವಾಗಿ ಕ್ಲೋಸ್ ಮಾಡುವ ಸೌಲಭ್ಯವನ್ನು ನೀಡುತ್ತದೆ. ಅದರಂತೆ ಖಾತೆಯನ್ನು ತೆರೆದ ಒಂದು ವರ್ಷದೊಳಗೆ ನೀವು ಅದನ್ನು ಕ್ಲೋಸ್ ಮಾಡಿಕೊಂಡರೆ, ನಿಮಗೆ ಯಾವುದೇ ಬಡ್ಡಿ ಸಿಗುವುದಿಲ್ಲ. ನೀವು ಹೂಡಿಕೆ ಮಾಡಿದ ಮೂಲ ಮೊತ್ತವನ್ನು ಮಾತ್ರ ಹಿಂತಿರುಗಿಸಲಾಗುತ್ತದೆ ಎಂಬುದನ್ನು ಗಮನಿಸಬೇಕು.
99
ಮಧ್ಯಮವರ್ಗದವರಿಗೆ ಅನೂಕುಲಕರ!
ಕೊನೆಯದಾಗಿ, ಯೋಜನೆಯ ಸಂಪೂರ್ಣ ಬಡ್ಡಿ ಪ್ರಯೋಜನಗಳನ್ನು ಮತ್ತು ₹7 ಲಕ್ಷದವರೆಗಿನ ಅತ್ಯುತ್ತಮ ಆದಾಯವನ್ನು ಪಡೆಯಲು, ಹೂಡಿಕೆದಾರರು ತಮ್ಮ ಖಾತೆಯನ್ನು ಪೂರ್ಣ 5 ವರ್ಷಗಳವರೆಗೆ (5 ವರ್ಷಗಳ ಅವಧಿ) ಸಕ್ರಿಯವಾಗಿರಿಸಿಕೊಳ್ಳಬೇಕಾಗುತ್ತದೆ. ಕೇಂದ್ರ ಸರ್ಕಾರವು ಈ ಯೋಜನೆಗೆ ನೇರವಾಗಿ ಖಾತರಿ ನೀಡುವುದರಿಂದ, ಇಂದು ಮಧ್ಯಮ ವರ್ಗದವರು ಅಂಚೆ ಕಚೇರಿಯ ಎನ್‌ಎಸ್‌ಸಿ ಯೋಜನೆಯಲ್ಲಿ ಹೂಡಿಕೆ ಮಾಡುವುದು ಬಹಳ ಬುದ್ಧಿವಂತ ಮತ್ತು ಲಾಭದಾಯಕ ಆರ್ಥಿಕ ನಿರ್ಧಾರವಾಗಿರುತ್ತದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.