ಅತಿ ಕಡಿಮೆ ದುಡ್ಡಿನಲ್ಲಿ ಮನೆಯಲ್ಲಿ ಕೂತು ಸೀರೆ ಇತ್ಯಾದಿಗಳನ್ನು Online ಮಾರಾಟ ಮಾಡೋದು ಹೇಗೆ?

Published : Feb 02, 2026, 05:07 PM IST

Online Business: ಅನೇಕರು ಇಂದು ಮನೆಯಲ್ಲಿ ಕೂತು ಆನ್‌ಲೈನ್ ಬ್ಯುಸಿನೆಸ್ ಮಾಡುತ್ತಿದ್ದಾರೆ. ಇಂದಿನ ಕಾಲದಲ್ಲಿ ಇದು ಅತ್ಯಂತ ಲಾಭ ತಂದುಕೊಡುವ ಹಾಗೂ ಸ್ಮಾರ್ಟ್ ನಿರ್ಧಾರವಾಗಿದೆ. ಕಡಿಮೆ ಬಂಡವಾಳದಲ್ಲಿ ದೊಡ್ಡ ಮಟ್ಟದ ಯಶಸ್ಸು ಪಡೆಯಬಹುದು. 

PREV
16
ಸರಿಯಾದ ಬ್ಯುಸಿನೆಸ್ ಐಡಿಯಾ ಆಯ್ಕೆ ಮಾಡಿ

ಮೊದಲು ನೀವು ಏನು ಮಾರಾಟ ಮಾಡಲು ಬಯಸುತ್ತೀರಿ ಎಂಬುದನ್ನು ನಿರ್ಧರಿಸಿ. ಬಟ್ಟೆ, ಆಭರಣಗಳು, ಮನೆಯ ಅಲಂಕಾರಿಕ ವಸ್ತುಗಳು ಇತ್ಯಾದಿ ಮಾರಾಟ ಮಾಡಬಹುದು.

ಗ್ರಾಫಿಕ್ ಡಿಸೈನಿಂಗ್, ಕಂಟೆಂಟ್ ರೈಟಿಂಗ್, ಆನ್‌ಲೈನ್ ಟ್ಯೂಷನ್, ಡಿಜಿಟಲ್ ಮಾರ್ಕೆಟಿಂಗ್ ಕೂಡ ಮಾಡಬಹುದು. ನೀವು ಮಾರಾಟ ಮಾಡುವ ವಸ್ತುಗಳನ್ನು ಸ್ಟಾಕ್ ಇಟ್ಟುಕೊಳ್ಳದೆ ಬೇರೆಯವರ ಉತ್ಪನ್ನಗಳನ್ನು ಕೂಡ ನಿಮ್ಮ ವೆಬ್‌ಸೈಟ್ ಮೂಲಕ ಮಾರಬಹುದು.

26
ಮಾರುಕಟ್ಟೆಯ ಸಂಶೋಧನೆ

ನೀವು ಆಯ್ಕೆ ಮಾಡಿದ ಪ್ರೊಡಕ್ಟ್‌ಗೆ ಮಾರುಕಟ್ಟೆಯಲ್ಲಿ ನಿಜಕ್ಕೂ ಬೇಡಿಕೆ ಇದೆಯೇ? ನಿಮ್ಮ ಪ್ರತಿ ಸ್ಪರ್ಧಿಗಳು ಯಾರು? ಎಂದು ತಿಳಿದುಕೊಳ್ಳಿ. ಜನರು ಏನು ಹುಡುಕುತ್ತಿದ್ದಾರೆ ಎಂದು Google Trends ಬಳಸಿ.

36
ನಿಮ್ಮ ಬ್ರ್ಯಾಂಡ್ ಹೆಸರಿಸುವುದು. ನೋಂದಣಿ

ನಿಮ್ಮ ಬ್ರ್ಯಾಂಡ್‌ಗೆ ಆಕರ್ಷಕವಾದ, ಸುಲಭವಾದ, ಜನರಿಗೆ ನೆನಪು ಇಡುವಂಥ ಹೆಸರು ಇಡಿ. ವಾರ್ಷಿಕವಾಗಿ ಜಾಸ್ತಿ ವ್ಯವಹಾರ ಇದ್ದರೆ, ಅಂತರರಾಜ್ಯ ವ್ಯವಹಾರ ಇದ್ದರೆ ಭಾರತದಲ್ಲಿ ಬ್ಯುಸಿನೆಸ್ ಮಾಡಲು GST ಅವಶ್ಯಕತೆ ಇರುತ್ತದೆ.

46
ಎಲ್ಲಿ ಮಾರಾಟ ಮಾಡುವುದು?

ಪ್ಲಾಟ್‌ಫಾರ್ಮ್ ಆಯ್ಕೆ ಮಾಡಿ 

ಇ-ಕಾಮರ್ಸ್ ವೆಬ್‌ಸೈಟ್‌ಗಳಾದ Amazon, Flipkart ಅಥವಾ Meesho ಮೂಲಕ ನೋಂದಾಯಿಸಿಕೊಂಡು ಮಾರಾಟ ಮಾಡಬಹುದು. Shopify ಅಥವಾ WooCommerce ಬಳಸಿ ನಿಮ್ಮದೇ ವೆಬ್‌ಸೈಟ್ ಮಾಡಿಕೊಳ್ಳಿ. Instagram, Facebook ಮೂಲಕ ನೇರವಾಗಿ ಗ್ರಾಹಕರಿಗೆ ವಸ್ತುಗಳನ್ನು ಕೊಡಬಹುದು

ಗ್ರಾಹಕರಿಂದ ಹಣ ಪಡೆಯಲು Razorpay ಅಥವಾ Instamojo ನಂತಹ ಗೇಟ್‌ವೇಗಳನ್ನು ಬಳಸಬಹುದು, ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸಲು Shiprocket / ದೆಹಲಿವರಿ (Delhivery) ನಂತಹ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಳ್ಳಬಹುದು

56
ಡಿಜಿಟಲ್ ಮಾರ್ಕೆಟಿಂಗ್ (Marketing)

ನಿಮ್ಮ ಬ್ಯುಸಿನೆಸ್ ಬಗ್ಗೆ ಜನರಿಗೆ ತಿಳಿಯದಿದ್ದರೆ ಖರೀದಿ ಹೇಗೆ ಮಾಡುತ್ತಾರೆ? Instagram Reels ಮತ್ತು Facebook Ads ಬಳಸಿ. ಜನರು ಗೂಗಲ್‌ನಲ್ಲಿ ಹುಡುಕಿದಾಗ ನಿಮ್ಮ ಸೈಟ್ ಕಾಣಿಸುವ ಹಾಗೆ ಮಾಡಿ.

66
ಮುಖ್ಯವಾದ ಟಿಪ್ಸ್

ಆರಂಭದಲ್ಲೇ ಹೆಚ್ಚು ಹಣ ಹಾಕಬೇಡಿ, ಮೊದಲು ಬೇಡಿಕೆ ಎಷ್ಟಿದೆ ಎಂದು ಪರೀಕ್ಷಿಸಿ. ಗ್ರಾಹಕರು ನೀಡುವ ಫೀಡ್‌ಬ್ಯಾಕ್ ಗಮನಿಸಿ, ಅದಕ್ಕೆ ತಕ್ಕಂತೆ ಸೇವೆ ನೀಡಿ. ಒಮ್ಮೆ ಗುಣಮಟ್ಟ ಕೆಟ್ಟರೆ ಆನ್‌ಲೈನ್‌ನಲ್ಲಿ ನಂಬಿಕೆ ಕಳೆದುಕೊಳ್ಳಲಾಗುತ್ತದೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories