ಈ ಜಾಲತಾಣಗಳು ಮೊದಲು ಕೇವಲ ಸಮಯ ಹಾಳು ಮಾಡುತ್ತಿದ್ದವೆಂಬ ದೂರು ಹೊತ್ತಿದ್ದವು. ಈಗ ಇದರಲ್ಲಿ ಬೆಂಬಲಿಗರನ್ನು ಗಳಿಸಿ ರೀಲ್ಸ್ ಮಾಡಿ, ಜಾಹಿರಾತು ನೀಡಿ, ಇನ್ಫ್ಲುಯೆನ್ಸರ್ ಆಗಿ, ಸ್ವಂತ ಪೇಜ್ ಮಾಡಿಕೊಂಡು ಮುಂತಾದ ರೀತಿಯಲ್ಲಿ ಹಲವರಿಗೆ ಆದಾಯ ತರುತ್ತಿವೆ.
ಈ ಆ್ಯಪ್‌ಗಳನ್ನು ಬಳಸಿ ಆದಾಯ ಗಳಿಸುವುದೇ ಬೇರೆ, ಈ ಆ್ಯಪ್‌ಗಳಲ್ಲೇ ಉದ್ಯೋಗಿಗಳಾಗಿ ಸಂಬಳ ಪಡೆಯುವುದು ಬೇರೆ. ಈ Facebook, Instagram ಮತ್ತು WhatsApp ಉದ್ಯೋಗಿಗಳ ಸರಾಸರಿ ವೇತನ ಎಷ್ಟು ಗೊತ್ತಾ?
2023ರಲ್ಲಿ, ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ $ 24.4 ಮಿಲಿಯನ್ ಮೊತ್ತವನ್ನು ಪರಿಹಾರವಾಗಿ ಪಡೆದರು. ಮೆಟಾ ವಿಶ್ವಾದ್ಯಂತ ಸುಮಾರು 67000 ಜನರನ್ನು ನೇಮಿಸಿಕೊಂಡಿದೆ ಎಂದು ವರದಿಯು ಬಹಿರಂಗಪಡಿಸುತ್ತದೆ.
ಮಾಧ್ಯಮ ವರದಿಯ ಪ್ರಕಾರ, ಮೆಟಾದಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಸರಾಸರಿ ವೇತನವು ಸುಮಾರು $379,000 ಆಗಿದೆ. ಅಂದರೆ ಅಂದಾಜು ರೂ. 3,16,09,718.05.
ಸರಾಸರಿ ಆದಾಯದ ಆಧಾರದ ಮೇಲೆ, 50% Meta ಉದ್ಯೋಗಿಗಳು 2018ರಲ್ಲಿ $379,000 ಕ್ಕಿಂತ ಹೆಚ್ಚು ಗಳಿಸಿದ್ದಾರೆ. ಆದರೆ ಇತರ ಶೇ.50ರಷ್ಟು ಜನರ ಅದಾಯ ಇದಕ್ಕಿಂತ ಕಡಿಮೆ ಇದೆ.
ಇಲ್ಲಿ ಅತಿ ಕಡಿಮೆ ವಾರ್ಷಿಕ ಸಂಬಳ ಪಡೆಯುವುದು ರಿಸೆಪ್ಶನಿಸ್ಟ್. ಅವರ ವಾರ್ಷಿಕ ಆದಾಯ $40,000. ಅಂದರೆ ಸುಮಾರು 33,35,944 ರುಪಾಯಿಗಳು.
office work
office workಇಲಾಖೆಯ ಸರಾಸರಿ ಮೆಟಾ ವೇತನಗಳು ಇಂತಿವೆ: ಬಿಸ್ನೆಸ್ ಡೆವಲಪ್ಮೆಂಟ್ ವಿಭಾಗದ ಉದ್ಯೋಗಿಗಳ ಸಂಬಳ $112,477(94 ಲಕ್ಷ ರೂ.) , ಪ್ರಾಡಕ್ಟ್‌ನಲ್ಲಿ ಕೆಲಸ ಮಾಡುವವರ ಸಂಬಳ $212,017(ಒಂದುಮುಕ್ಕಾಲು ಕೋಟಿ), ಕಾನೂನು $204,180, ಮತ್ತು ಗ್ರಾಹಕ ಬೆಂಬಲ ಉದ್ಯೋಗಿಗಳ ವೇತನ $108,745 .