ಪ್ರಯಾಣಿಕರನ್ನು 1 km ಕರೆದುಕೊಂಡು ಹೋಗಲು ರೈಲ್ವೆಗೆ ಎಷ್ಟು ಖರ್ಚಾಗುತ್ತೆ? ವಾರ್ಷಿಕ ಆದಾಯ ಎಷ್ಟು?

Published : Oct 11, 2026, 03:26 PM IST

ಭಾರತೀಯ ರೈಲ್ವೆಯು ಪ್ರತಿದಿನ ಕೋಟ್ಯಂತರ ರೂಪಾಯಿ ಆದಾಯ ಗಳಿಸಿದರೂ, ನಿರ್ವಹಣಾ ವೆಚ್ಚವೂ ಅಷ್ಟೇ ದೊಡ್ಡದಾಗಿದೆ. ರೈಲ್ವೆಗೆ ಪ್ರಯಾಣಿಕರ ಟಿಕೆಟ್‌ಗಿಂತ ಸರಕು ಸಾಗಣೆಯಿಂದಲೇ ಅತಿ ಹೆಚ್ಚು ಆದಾಯ ಬರುತ್ತದೆ. ಲಾಭದಾಯಕ ಸಂಸ್ಥೆಯಾಗಿರದೆ, ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಸೇವೆ ಒದಗಿಸುತ್ತೆ.

PREV
15
ಪ್ರತಿದಿನ ಕೋಟ್ಯಂತರ ರೂಪಾಯಿ ಆದಾಯ

ಭಾರತೀಯ ರೈಲ್ವೆ ನಮ್ಮ ದೇಶದ ಜೀವಾಳ. ಇಷ್ಟು ದೊಡ್ಡ ನೆಟ್‌ವರ್ಕ್ ನಡೆಸಲು ಪ್ರತಿದಿನ ಕೋಟ್ಯಂತರ ರೂಪಾಯಿ ಆದಾಯ ಬರುತ್ತದೆ. ಅದೇ ರೀತಿ ಖರ್ಚು ಕೂಡ ಇರುತ್ತದೆ. ಭಾರತೀಯ ರೈಲ್ವೆಯಲ್ಲಿ ಪ್ರತಿದಿನ ಸುಮಾರು 24 ರಿಂದ 25 ಸಾವಿರ ರೈಲುಗಳು ಓಡುತ್ತವೆ. ಇದರಲ್ಲಿ 13,500 ರಿಂದ 14,000 ಪ್ರಯಾಣಿಕರ ರೈಲುಗಳು. ಸಾಮಾನ್ಯ ರೈಲು, ಎಕ್ಸ್‌ಪ್ರೆಸ್, ವಂದೇ ಭಾರತ್, ಅಮೃತ್ ಭಾರತ್ ಎಲ್ಲವೂ ಇದರಲ್ಲಿ ಸೇರಿವೆ. ಪ್ರತಿದಿನ 2 ರಿಂದ 2.5 ಕೋಟಿ ಜನ ಇದರಲ್ಲಿ ಪ್ರಯಾಣಿಸುತ್ತಾರೆ. ಇದರ ಜೊತೆಗೆ 11 ಸಾವಿರಕ್ಕೂ ಹೆಚ್ಚು ಸರಕು ಸಾಗಣೆ ರೈಲುಗಳು ಕಲ್ಲಿದ್ದಲು, ಸಿಮೆಂಟ್, ರಸಗೊಬ್ಬರಗಳನ್ನು ದೇಶದ ಮೂಲೆ ಮೂಲೆಗೆ ತಲುಪಿಸುತ್ತವೆ.

25
ವಾರ್ಷಿಕ ಆದಾಯ ಸುಮಾರು 2.74 ಲಕ್ಷ ಕೋಟಿ ರೂಪಾಯಿ.

ಭಾರತೀಯ ರೈಲ್ವೆಯ ವಾರ್ಷಿಕ ಆದಾಯ ಸುಮಾರು 2.74 ಲಕ್ಷ ಕೋಟಿ ರೂಪಾಯಿ. ಅಂದರೆ ದಿನಕ್ಕೆ ನೂರಾರು ಕೋಟಿ ಆದಾಯ ಬರುತ್ತದೆ. ಆದರೆ ರೈಲ್ವೆಗೆ ಅತಿ ಹೆಚ್ಚು ಹಣ ಬರುವುದು ಪ್ರಯಾಣಿಕರ ಟಿಕೆಟ್‌ನಿಂದಲ್ಲ, ಬದಲಾಗಿ ಸರಕು ಸಾಗಣೆ ರೈಲುಗಳಿಂದ. ಒಟ್ಟು ಆದಾಯದಲ್ಲಿ ಶೇ.60 ರಿಂದ 62ರಷ್ಟು ಪಾಲು ಸರಕು ಸಾಗಣೆಯಿಂದಲೇ ಬರುತ್ತದೆ. ದಿನಕ್ಕೆ ಸುಮಾರು 465 ಕೋಟಿ ರೂಪಾಯಿ ಸರಕು ರೈಲುಗಳಿಂದಲೇ ಸಿಗುತ್ತದೆ. ಇದರಲ್ಲಿ ಕಲ್ಲಿದ್ದಲು ಸಾಗಣೆಯಿಂದಲೇ ಹೆಚ್ಚು ಲಾಭ. ಪ್ರಯಾಣಿಕರ ರೈಲುಗಳಿಂದ ದಿನಕ್ಕೆ 200 ರಿಂದ 232 ಕೋಟಿ ರೂ. (31%) ಆದಾಯ ಬರುತ್ತದೆ. ಉಳಿದ ಹಣ ಪಾರ್ಸೆಲ್, ಜಾಹೀರಾತು, ಗುಜರಿ ಮಾರಾಟದಿಂದ ಸಿಗುತ್ತದೆ.

35
ನಿರ್ವಹಣಾ ವೆಚ್ಚ ಸುಮಾರು 690 ರಿಂದ 720 ಕೋಟಿ ರೂಪಾಯಿ.

ಇಷ್ಟು ದೊಡ್ಡ ರೈಲ್ವೆ ನೆಟ್‌ವರ್ಕ್ ನಡೆಸಲು ಖರ್ಚು ಕೂಡ ಅಷ್ಟೇ ಇರುತ್ತದೆ. ರೈಲ್ವೆಯ ದೈನಂದಿನ ನಿರ್ವಹಣಾ ವೆಚ್ಚವೇ ಸುಮಾರು 690 ರಿಂದ 720 ಕೋಟಿ ರೂಪಾಯಿ. ರೈಲ್ವೆಯಲ್ಲಿ ಕೆಲಸ ಮಾಡುವ 12 ಲಕ್ಷಕ್ಕೂ ಹೆಚ್ಚು ಸಿಬ್ಬಂದಿಯ ಸಂಬಳ, ನಿವೃತ್ತ ನೌಕರರ ಪಿಂಚಣಿಗೆ ದೊಡ್ಡ ಮೊತ್ತ ಖರ್ಚಾಗುತ್ತದೆ. ಇದಲ್ಲದೆ ವಿದ್ಯುತ್, ಡೀಸೆಲ್, ಟ್ರ್ಯಾಕ್ ನಿರ್ವಹಣೆ, ಸಿಗ್ನಲ್ ಸಿಸ್ಟಮ್‌ಗೆ ಕೋಟ್ಯಂತರ ರೂಪಾಯಿ ಬೇಕು. ಬ್ರಾಡ್‌ಗೇಜ್ ನೆಟ್‌ವರ್ಕ್‌ನಲ್ಲಿ ವಿದ್ಯುದ್ದೀಕರಣ ಮುಗಿದಿರುವುದರಿಂದ ವಿದ್ಯುತ್ ಬಳಕೆ ಈಗ ಬಹಳ ಮುಖ್ಯ. ಖರ್ಚು ಕಡಿಮೆ ಮಾಡಲು ರೈಲ್ವೆ ಇಲಾಖೆ ಈಗ ಸೌರಶಕ್ತಿಯಂತಹ ಪರ್ಯಾಯ ಇಂಧನಗಳನ್ನು ಬಳಸಲು ಶುರು ಮಾಡಿದೆ.

45
ಭಾರತೀಯ ರೈಲ್ವೆಯ ಆರ್ಥಿಕ ಸ್ಥಿತಿ

ಭಾರತೀಯ ರೈಲ್ವೆಯ ಆರ್ಥಿಕ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು 'ಆಪರೇಟಿಂಗ್ ರೇಷಿಯೋ' ಬಹಳ ಮುಖ್ಯ. ಉದಾಹರಣೆಗೆ, ಆಪರೇಟಿಂಗ್ ರೇಷಿಯೋ ಶೇ.98.43 ಇದೆ ಅಂದರೆ, ರೈಲ್ವೆ 100 ರೂಪಾಯಿ ಸಂಪಾದಿಸಲು 98.43 ರೂಪಾಯಿ ಖರ್ಚು ಮಾಡುತ್ತಿದೆ ಎಂದರ್ಥ. ಅಂದರೆ ಆದಾಯ ಎಷ್ಟಿದೆಯೋ, ಖರ್ಚು ಕೂಡ ಬಹುತೇಕ ಅಷ್ಟೇ ಇದೆ. ಹಾಗಾಗಿ ರೈಲ್ವೆಯನ್ನು ಹೆಚ್ಚು ಆದಾಯ ತರುವ ಸಂಸ್ಥೆ ಎನ್ನಬಹುದೇ ಹೊರತು, ಹೆಚ್ಚು ಲಾಭ ಮಾಡುವ ಬ್ಯುಸಿನೆಸ್ ಎನ್ನಲಾಗದು. ಬರುವ ಹಣದಲ್ಲಿ ಬಹುಪಾಲು ನಿರ್ವಹಣೆಗೇ ಹೋಗುತ್ತದೆ.

55
ಸರಾಸರಿ 1.38 ರೂಪಾಯಿ

ಭಾರತೀಯ ರೈಲ್ವೆ ಕೇವಲ ಒಂದು ವ್ಯಾಪಾರ ಸಂಸ್ಥೆಯಾಗಿ ಮಾತ್ರ ಕೆಲಸ ಮಾಡುತ್ತಿಲ್ಲ. ದೇಶದ ಸಾಮಾನ್ಯ ಮತ್ತು ಮಧ್ಯಮ ವರ್ಗದ ಜನರಿಗೆ ಕಡಿಮೆ ದರದಲ್ಲಿ ಪ್ರಯಾಣದ ಸೌಲಭ್ಯ ಒದಗಿಸುವುದು ಕೂಡ ಅದರ ಜವಾಬ್ದಾರಿ. ಲೆಕ್ಕಾಚಾರದ ಪ್ರಕಾರ, ಒಬ್ಬ ಪ್ರಯಾಣಿಕನನ್ನು ಒಂದು ಕಿಲೋಮೀಟರ್ ಕರೆದೊಯ್ಯಲು ರೈಲ್ವೆಗೆ ಸರಾಸರಿ 1.38 ರೂಪಾಯಿ ಖರ್ಚಾಗುತ್ತದೆ. ಆದರೆ ಪ್ರಯಾಣಿಕರಿಂದ ರೈಲ್ವೆಗೆ ಸಿಗುವುದು ಕೇವಲ 73 ಪೈಸೆ ಮಾತ್ರ. ಅಂದರೆ ಟಿಕೆಟ್‌ನಿಂದ ಬರುವ ಆದಾಯಕ್ಕಿಂತ, ಪ್ರಯಾಣಿಕರಿಗೆ ಸೇವೆ ನೀಡಲು ರೈಲ್ವೆ ಮಾಡುವ ಖರ್ಚೇ ಹೆಚ್ಚಾಗಿದೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories