ಡಿಸೆಂಬರ್‌ ತಿಂಗಳ ಜಿಎಸ್‌ಟಿ ಕಲೆಕ್ಷನ್‌.. ಯಾವ ರಾಜ್ಯ ಫರ್ಸ್ಟು, ಯಾವ ರಾಜ್ಯ ಲಾಸ್ಟು?

First Published Jan 1, 2024, 10:33 PM IST

ಡಿಸೆಂಬರ್‌ ತಿಂಗಳಲ್ಲಿ ಒಟ್ಟಾರೆಯಾಗಿ 1,64,882 ಕೋಟಿ ಸರಕು ಹಾಗೂ ಸೇವಾ ತೆರಿಗೆ ಕಲೆಕ್ಷನ್‌ ಆಗಿದೆ. ಈ ಬಾರಿ ಟಾಪ್‌-10ಅಲ್ಲಿರುವ ರಾಜ್ಯಗಳ ಪಟ್ಟಿ ಇಲ್ಲಿದೆ.

ದೇಶಕ್ಕೆ ಗರಿಷ್ಠ ಜಿಎಸ್‌ಟಿ ನೀಡುವ ರಾಜ್ಯದಲ್ಲಿ ಎಂದಿನಂತೆ ಮಹಾರಾಷ್ಟ್ರ ಅಗ್ರಸ್ಥಾನದಲ್ಲಿದೆ. ಡಿಸೆಂಬರ್‌ನಲ್ಲಿ ಮಹಾರಾಷ್ಟ್ರ 26,814 ಕೋಟಿ ರೂಪಾಯಿಯನ್ನು ಜಿಎಸ್‌ಟಿಯಾಗಿ ನೀಡಿದೆ. 2022ರ ಡಿಸೆಂಬರ್‌ಗೆ ಹೋಲಿಸಿದರೆ, 2023ರ ಡಿಸೆಂಬರ್‌ನಲ್ಲಿ ಶೇ.14ರಷ್ಟು ಹೆಚ್ಚಾಗಿದೆ.

ಕರ್ನಾಟಕ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಡಿಸೆಂಬರ್‌ನಲ್ಲಿ ಕರ್ನಾಟಕ 11,759 ಕೋಟಿ ರೂಪಾಯಿಯನ್ನು ಜಿಎಸ್‌ಟಿಯಾಗಿ ನೀಡಿದೆ.

ತಮಿಳುನಾಡು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. 9888 ಕೋಟಿ ರೂಪಾಯಿಗಳನ್ನು ತಮಿಳುನಾಡು ಜಿಎಸ್‌ಟಿಯಾಗಿ ನೀಡಿದೆ. 2022ರ ಡಿಸೆಂಬರ್‌ನಲ್ಲಿ 8,324 ಕೋಟಿ ರೂಪಾಯಿಗಳನ್ನು ತಮಿಳುನಾಡು ನೀಡಿತ್ತು.

ಗುಜರಾತ್‌ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಈ ಬಾರಿ ಗುಜರಾತ್‌ 9,874 ಕೋಟಿ ರೂಪಾಯಿಯನ್ನು ಜಿಎಸ್‌ಟಿಯಾಗಿ ನೀಡಿದ್ದು, ಕಳೆದ ವರ್ಷದ ಡಿಸೆಂಬರ್‌ನಲ್ಲಿ  9,238 ರೂಪಾಯಿಗಳನ್ನು ಗುಜರಾತ್‌ ನೀಡಿತ್ತು.

ಡಿಸೆಂಬರ್‌ನಲ್ಲಿ 8130 ಕೋಟಿ ರೂಪಾಯಿಗಳನ್ನು ಹರಿಯಾಣ ರಾಜ್ಯ ಜಿಎಸ್‌ಟಿಯಾಗಿ ತನ್ನ ಪಾಲನ್ನು ನೀಡಿದೆ. 2022ರ ಡಿಸೆಂಬರ್‌ನಲ್ಲಿ 6678 ಕೋಟಿ ರೂಪಾಯಿಗಳನ್ನು ಹರಿಯಾಣ ನೀಡಿತ್ತು.

ಉತ್ತರ ಪ್ರದೇಶ ರಾಜ್ಯ ಈ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. 8011 ಕೋಟಿ ರೂಪಾಯಿಗಳನ್ನು ಜಿಎಸ್‌ಟಿಯಾಗಿ ಯೋಗಿ ಆದಿತ್ಯನಾಥ್‌ ಅವರ ಸರ್ಕಾರ ಪಾವತಿ ಮಾಡಿದೆ. 2022ರ ಡಿಸೆಂಬರ್‌ನಲ್ಲಿ 7,178 ಕೋಟಿ ರೂಪಾಯಿಗಳನ್ನು ಈ ರಾಜ್ಯ ನೀಡಿತ್ತು.

ರಾಷ್ಟ್ರ ರಾಜಧಾನಿ ದೆಹಲಿ ಡಿಸೆಂಬರ್‌ನಲ್ಲಿ 5121 ಕೋಟಿ ರೂಪಾಯಿಗಳನ್ನು ಜಿಎಸ್‌ಟಿಯಾಗಿ ನೀಡಿದೆ ಎಂದು ಕೇಂದ್ರ ಹಣಕಾಸು ಇಲಾಖೆ ತಿಳಿಸಿದೆ. 2022ರ ಡಿಸೆಂಬರ್‌ನಲ್ಲಿ ಇದು 4401 ಕೋಟಿ ರೂಪಾಯಿ ಆಗಿತ್ತು.

ಪಶ್ಚಿಮ ಬಂಗಾಳ ಈ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. 2023ರ ಡಿಸೆಂಬರ್‌ನಲ್ಲಿ ಪಶ್ಚಿಮ ಬಂಗಾಳ 5019 ಕೋಟಿ ರೂಪಾಯಿಗಳನ್ನು ಜಿಎಸ್‌ಟಿಯಾಗಿ ಪಾವತಿಸಿದೆ. 2022ರ ಡಿಸೆಂಬರ್‌ನಲ್ಲಿ 4,583 ಕೋಟಿ ರೂಪಾಯಿ ಪಾವತಿ ಮಾಡಿತ್ತು.

ತೆಲಂಗಾಣ ಈ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. 4,753 ಕೋಟಿ ರೂಪಾಯಿಗಳನ್ನು ತೆಲಂಗಾಣ ಸರ್ಕಾರ 2023ರ ಡಿಸೆಂಬರ್‌ನಲ್ಲಿ ಪಾವತಿ ಮಾಡಿದೆ.

ಒಡಿಶಾ ಸರ್ಕಾರ ಈ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. 4,351 ಕೋಟಿ ರೂಪಾಯಿಗಳನ್ನು ಜಿಎಸ್‌ಟಿಯಾಗಿ ಪಾವತಿ ಮಾಡಿದೆ. ಮೇಘಾಲಯ, ರಾಜಸ್ಥಾನ ಹಾಗೂ ಛತ್ತೀಸ್‌ಗಢ ರಾಜ್ಯಗಳ ಸಾಧನೆ ಜಿಎಸ್‌ಟಿ ಪಾವತಿಯಲ್ಲಿ ಗಮನಾರ್ಹವಾಗಿಲ್ಲ.

click me!