Made In India ಸ್ಮಾರ್ಟ್‌ ಪೋನ್‌ ಖರೀದಿ ಮಾಡಿರುವ ವಿಶ್ವದ ಟಾಪ್‌-10 ದೇಶಗಳು!

First Published | Dec 29, 2023, 7:12 PM IST

ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ ಪ್ರಕಾರ, 2022-23ರಲ್ಲಿ ವಿಶ್ವದಲ್ಲಿಯೇ ಗರಿಷ್ಠ ಪ್ರಮಾಣದ ಮೇಡ್‌ ಇನ್‌ ಇಂಡಿಯಾ ಸ್ಮಾರ್ಟ್‌ಫೋನ್‌ ಖರೀದಿಸಿದ ದೇಶಗಳ ಪಟ್ಟಿಯಲ್ಲಿ ಯುಎಇ ಅಗ್ರಸ್ಥಾನದಲ್ಲಿದೆ.

ಭಾರತದಲ್ಲಿ ತಯಾರಾದ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುವ ನಿಟ್ಟಿನಲ್ಲಿ ಅಗ್ರಸ್ಥಾನದಲ್ಲಿರುವ ದೇಶ ಯುನೈಟೆಡ್‌ ಅರಬ್‌ ಎಮಿರೇಟ್ಸ್.  ಶೇ. 23.40ರಷ್ಟು ಮೇಡ್‌ ಇಂಡಿಯಾ ಫೋನ್‌ಗಳನ್ನು ಯುಎಇ ಆಮದು ಮಾಡಿಕೊಳ್ಳುತ್ತಿದೆ.

ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ರಾಷ್ಟ್ರ ಅಮೆರಿಕ. ಟೆಕ್ನಾಲಜಿಯಲ್ಲಿ ದೈತ್ಯರಾಗಿರುವ ಅಮೆರಿಕ ಭಾರತದಿಂದ ಶೇ. 19.70ರಷ್ಟು ಸ್ಮಾರ್ಟ್‌ಫೋನ್‌ಗಳನ್ನು ಆಮದು ಮಾಡಿಕೊಳ್ಳುತ್ತದೆ.

Tap to resize

ಮೂರನೇ ಸ್ಥಾನದಲ್ಲಿರುವ ದೇಶ ನೆದರ್ಲೆಂಡ್‌. ಯುರೋಪ್‌ ರಾಷ್ಟ್ರವಾಗಿರುವ ನೆದರ್ಲೆಂಡ್‌ ಭಾರತದಿಂದ ಶೇ. 9.73ರಷ್ಟು ಸ್ಮಾರ್ಟ್‌ಫೋನ್‌ಗಳನ್ನು ಆಮದು ಮಾಡಿಕೊಳ್ಳುತ್ತದೆ.

ನಾಲ್ಕನೇ ಸ್ಥಾನದಲ್ಲಿರುವ ದೇಶ ಇಂಗ್ಲೆಂಡ್‌. ಭಾರತದಲ್ಲಿ ತಯಾರಾಗುವ ಸ್ಮಾರ್ಟ್‌ಫೋನ್‌ಗಳ ಪೈಕಿ ಶೇ. 7.77ರಷ್ಟು ಇಂಗ್ಲೆಂಡ್‌ ಆಮದು ಮಾಡಿಕೊಳ್ಳುತ್ತಿದೆ.

ಯುರೋಪ್‌ನ ಮತ್ತೊಂದು ರಾಷ್ಟ್ರವಾಗಿರುವ ಇಟಲಿ ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಭಾರತದಿಂದ ಶೇ. 6.54ರಷ್ಟು ಮೇಡ್‌ ಇನ್‌ ಇಂಡಿಯಾ ಸ್ಮಾರ್ಟ್‌ಫೋನ್‌ಗಳನ್ನು ಇಟಲಿ ಆಮದು ಮಾಡಿಕೊಳ್ಳುತ್ತಿದೆ.

ಆಸ್ಟ್ರೀಯಾ ದೇಶ ಕೂಡ ಈ ಸಾಲಿನಲ್ಲಿದೆ. ಭಾರತವು 2022-23ರಲ್ಲಿ ಆಸ್ಟ್ರಿಯಾ ದೇಶಕ್ಕೆ ಶೇ. 6.43ರಷ್ಟು ಸ್ನಾರ್ಟ್‌ಫೋನ್‌ಗಳನ್ನು ರಫ್ತು ಮಾಡಿದೆ.

ಪ್ರವಾಸೋದ್ಯಮ ಹೊರತಾಗಿ ಹೆಚ್ಚಿನ ಆದಾಯ ಗಳಿಸುವ ದೇಶಗಳಲ್ಲದ ಜೆಕ್‌ ಗಣರಾಜ್ಯ ಭಾರತದಿಂದ ಶೇ.5.97ರಷ್ಟು ಸ್ಮಾರ್ಟ್‌ಫೋನ್‌ಗಳನ್ನು ಆಮದು ಮಾಡಿಕೊಳ್ಳುತ್ತಿದೆ.

ಯುರೋಪ್‌ನ ಬಲಿಷ್ಠ ದೇಶ ಹಾಗೂ ಟೆಕ್ನಾಲಜಿಯ ಬೃಹತ್‌ ರಾಷ್ಟ್ರವಾಗಿರುವ ಜರ್ಮನಿ ಕೂಡ ಭಾರತದಿಂದ ಸ್ಮಾರ್ಟ್‌ಫೋನ್‌ ಆಮದು ಮಾಡಿಕೊಳ್ಳುತ್ತದೆ. ಇದರ ಪ್ರಮಾಣ ಶೇ. 4.18ರಷ್ಟಿದೆ.

ಮುಸ್ಲಿಂರ ಪವಿತ್ರ ಕ್ಷೇತ್ರಗಳಿರುವ ದೇಶವಾದ ಸೌದಿ ಅರೇಬಿಯಾವು ಭಾರತದಿಂದ ಶೇ.2.73ರಷ್ಟು ಸ್ಮಾರ್ಟ್‌ಫೋನ್‌ಗಳನ್ನು ಆಮದು ಮಾಡಿಕೊಳ್ಳುತ್ತಿದೆ ಎಂದು ಡಿಜಿಎಫ್‌ಟಿ ತಿಳಿಸಿದೆ.

ಇತ್ತೀಚಿನ ವರ್ಷಗಳಲ್ಲಿ ಭಾರತ ಹಾಗೂ ಫ್ರಾನ್ಸ್‌ ನಡುವೆ ಆತ್ಮೀಯ ಸಂಬಂಧ ಬೆಸೆದಿದೆ. ಫ್ರಾನ್ಸ್‌ ದೇಶ ಶೇ.2.26ರಷ್ಟು ಮೇಡ್‌ ಇನ್‌ ಇಂಡಿಯಾ ಸ್ಮಾರ್ಟ್‌ಫೋನ್‌ಗಳನ್ನು ಆಮದು ಮಾಡಿಕೊಳ್ಳುತ್ತಿದೆ.

ಇನ್ನು ವಿಶ್ವದ ಇತರ ಎಲ್ಲಾ ರಾಷ್ಟ್ರಗಳನ್ನು ಒಟ್ಟಾಗಿ ಹೋಲಿಸಿದರೆ, ಈ ದೇಶಗಳಿಗೆ ಭಾರತ ಶೇ 14.99ರಷ್ಟು ಮೇಡ್‌ ಇನ್‌ ಇಂಡಿಯಾ ಸ್ಮಾರ್ಟ್‌ಫೋನ್‌ಗಳನ್ನು ರಫ್ತು ಮಾಡುತ್ತಿದೆ. ಇದು ಡಿಜಿಎಫ್‌ಟಿ ನೀಡಿರುವ ಮಾಹಿತಿಯಾಗಿದೆ.

Latest Videos

click me!