ತಾತ ಮೊಮ್ಮಗನಂತಿದ್ದ ಅಪರೂಪದ ಸ್ನೇಹವಿದು: ಟಾಟಾಗೆ ನಂಬಿಕಸ್ಥ ಸಹಾಯಕನ ಭಾವುಕ ವಿದಾಯ

First Published | Oct 10, 2024, 10:41 AM IST

ರತನ್ ಟಾಟಾ ಅವರ ನಂಬಿಕಸ್ತ ಸಹಾಯಕ ಶಂತನು ನಾಯ್ಡು ಅವರು ತನ್ನ ಪಾಲಿನ ದೊರೆ, ದೇಶ ಕಂಡ ಅತ್ಯುತ್ತಮ ಉದ್ಯಮಿ ರತನ್ ಟಾಟಾ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. 

Shantanu Naidu

ನಿನ್ನೆ ತಡರಾತ್ರಿ ರತನ್ ಟಾಟಾ ಅವರು ಅನಾರೋಗ್ಯದಿಂದ ನಿಧನರಾಗಿದ್ದರು. ಅವರಿಗೆ 86 ವರ್ಷ ವಯಸ್ಸಾಗಿತ್ತು. ಅವರ ನಿಧನಕ್ಕೆ ಆನಂದ್ ಮಹಿಂದ್ರಾ, ಹರ್ಷಾ ಗೋಯೆಂಕಾ, ಮುಕೇಶ್ ಅಂಬಾನಿ ಸೇರಿದಂತೆ ದೇಶದ ಉದ್ಯಮ ಲೋಕದ ಎಲ್ಲಾ ದಿಗ್ಗಜರು ಸಂತಾಪ ವ್ಯಕ್ತಪಡಿಸಿದ್ದಾರೆ. ಅನೇಕ ಉದ್ಯಮಿಗಳು ಟಾಟಾ ಅವರ ಸಾವನ್ನು ದೇಶಕ್ಕಾದ ದೊಡ್ಡ ನಷ್ಟ ಹಾಗೂ ತಮಗೆ ವೈಯಕ್ತಿಕವಾಗಿಯೂ ದೊಡ್ಡ ನಷ್ಟವಾಗಿದೆ ಎಂದು ಭಾವುಕರಾಗಿದ್ದಾರೆ. 

ಅದೇ ರೀತಿ ರತನ್ ಟಾಟಾ ಅವರ ಜೊತೆಗೆ ಇದ್ದ ಅವರ ಆಪ್ತ ಸಹಾಯಕ ಅವರ ಒಡನಾಡಿ ಶಂತನು ನಾಯ್ಡು ಕೂಡ ಟಾಟಾ ಅವರ ನಿಧನಕ್ಕೆ ತೀವ್ರ ಭಾವುಕರಾಗಿದ್ದು, ಟಾಟಾ ಅಗಲಿಕೆಗೆ ಭಾವುಕರಾಗಿ ಪೋಸ್ಟ್ ಮಾಡಿದ್ದಾರೆ. ಈ ಗೆಳೆತ ಈಗ ನನ್ನೊಂದಿಗೆ ಬಿಟ್ಟ ರಂಧ್ರವನ್ನು ತುಂಬಲು ನನ್ನ ಉಳಿದ ಜೀವನವನ್ನು ಕಳೆಯುತ್ತೇನೆ. ಪ್ರೀತಿಗೆ ತೆರಬೇಕಾದ ಬೆಲೆ ದುಃಖ. ವಿದಾಯ, ನನ್ನ ಪ್ರೀತಿಯ ಲೈಟ್‌ಹೌಸ್ 'ಎಂದು 30 ವರ್ಷ ವಯಸ್ಸಿನ ಶಂತನು ನಾಯ್ಡು ಅವರು ರತನ್ ಟಾಟಾ ಅವರ ನಿಧನಕ್ಕೆ ಭಾವುಕರಾಗಿ ಲಿಂಕ್ಡಿನ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ ತಾವಿಬ್ಬರು ಜೊತೆಗಿರುವ ಪೋಟೋವೊಂದನ್ನು ಪೋಸ್ಟ್ ಮಾಡಿದ್ದಾರೆ ಶಂತನು. 

Latest Videos


Shantanu Naidu

ಪ್ರಾಣಿಗಳ ಮೇಲೆ ಇಬ್ಬರಿಗೂ ಇದ್ದ ಪ್ರೀತಿಯಿಂದಾಗಿ ಶಂತನು ನಾಯ್ಡು ಹಾಗೂ ರತನ್ ಟಾಟಾ ನಡುವೆ ಈ ವಯಸ್ಸಿಗೂ ಮೀರಿದ ಅಪರೂಪದ ಸ್ನೇಹ ಆರಂಭವಾಯ್ತು.  2014ರಲ್ಲಿ ಶಂತನು  ನಾಯ್ಡು ಅವರು ರಾತ್ರಿಯ ವೇಳೆ ಬೀದಿ ನಾಯಿಗಳಿಗೆ ವಾಹನಗಳು ಡಿಕ್ಕಿ ಹೊಡೆಯುವುದನ್ನು ತಪ್ಪಿಸುವುದಕ್ಕಾಗಿ  ಪ್ರತಿಫಲಿಸುವ ಬಣ್ಣದ ಕಾಲರ್‌ನ್ನು ಅಭಿವೃದ್ಧಿಪಡಿಸಿದ ವಿಚಾರ ತಿಳಿದು ಮೊದಲ ಬಾರಿ ರತನ್ ಟಾಟಾ ಅವರು ಶಂತನು ಅವರನ್ನು ಭೇಟಿಯಾದರು. ಶಂತನು ಅವರನ್ನು ತಮ್ಮ ಬಳಿ ಕರೆಸಿಕೊಂಡ ಶಂತನು ತಮಗಾಗಿ ಕೆಲಸ ಮಾಡಲು ಅವರನ್ನು ಆಹ್ವಾನಿಸಿದರು. 

Shantanu Naidu

ವಿವಾಹವೇ ಆಗದ ಮಕ್ಕಳು ಇಲ್ಲದ ರತನ್ ಟಾಟಾ ಅವರಿಗೆ  ಕಳೆದ 10 ವರ್ಷಗಳಿಂದಲೂ ಶಂತನು ನಾಯ್ಡು ಅವರು ನಂಬಿಕಸ್ತ ಆತ್ಮೀಯ ಗೆಳೆಯರಾಗಿದ್ದಾರೆ.  ತಮ್ಮ ಕೊನೆ ಕೊನೆಯ ಕೆಲ ವರ್ಷಗಳ ಸಾರ್ವಜನಿಕ ಕಾರ್ಯಕ್ರಮದಲ್ಲಿ ರತನ್ ಟಾಟಾ ಅವರ ಜೊತೆ ಶಂತನು ನಾಯ್ಡು ಸದಾ ಇರುತ್ತಿದ್ದರು.  ರತನ್ ಟಾಟಾ ಅವರು ನಿನ್ನೆ ತಡರಾತ್ರಿ ಮುಂಬೈನ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಯಲ್ಲಿ ವಯೋಸಹಜ ಅಸೌಖ್ಯದಿಂದ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು. ಈ ಬಗ್ಗೆ ಪ್ರಕಟಣೆ ನೀಡಿರುವ, ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರು ಉದ್ಯಮಿ ರತನ್ ಟಾಟಾ ಅವರು ಕೇವಲ ಟಾಟಾ ಸಮೂಹವನ್ನು ಮಾತ್ರವಲ್ಲದೆ ರಾಷ್ಟ್ರದ ರಚನೆಯನ್ನು ರೂಪಿಸಿದ್ದಾರೆ ಎಂದು ಸಂತಾಪ ಸೂಚಿಸಿದ್ದಾರೆ. 

ಇನ್ನು ಶಂತನು ನಾಯ್ಡು ಅವರ ಬಗ್ಗೆ ಹೇಳುವುದಾದರೆ ಅವರು ಕೇರಳದಲ್ಲಿ ಹುಟ್ಟಿ ಹೈದರಾಬಾದ್‌ನಲ್ಲಿ ಬೆಳೆದರು. 2014 ರಲ್ಲಿ ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾನಿಲಯದಿಂದ ತಮ್ಮ ಎಂಜಿನಿಯರಿಂಗ್ ಪದವಿಯನ್ನು ಪಡೆದರು. ಪದವಿಯ ನಂತರ, ನಾಯ್ಡು ಅವರು 2016 ರಲ್ಲಿ ಕಾರ್ನೆಲ್ ಜಾನ್ಸನ್ ಗ್ರಾಜುಯೇಟ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನಿಂದ ಬಿಸಿನೆಸ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಪ್ರಸ್ತುತ ಬಿಲಿಯನೇರ್ ಆಗಿರುವ ನಾಯ್ಡು ಅವರು ಗುಡ್‌ಫೆಲೋಸ್‌ನಲ್ಲಿ ಹೂಡಿಕೆ ಮಾಡಿದ್ದು, ಅದು ಹಿರಿಯ ನಾಗರಿಕರಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿದೆ. ಈ ಸ್ಟಾರ್ಟಪ್ ಸುಮಾರು 5 ಕೋಟಿ ರೂ ಮೌಲ್ಯವನ್ನು ಹೊಂದಿದೆ.

click me!