ನಮ್ಮ ಹೆಮ್ಮೆಯ ಕರ್ನಾಟಕ ಯಾವುದರಲ್ಲೆಲ್ಲಾ ನಂ.1 ಗೊತ್ತಾ?

Published : Aug 18, 2023, 03:27 PM ISTUpdated : Aug 18, 2023, 03:49 PM IST

ಬೆಂಗಳೂರು: ದಕ್ಷಿಣ ಭಾರತದ ಪ್ರಮುಖ ರಾಜ್ಯವೆಂದರೆ ಅದು ನಮ್ಮ ಹೆಮ್ಮೆಯ ಕರ್ನಾಟಕ. ಕರುನಾಡು ಅಂದರೆ ಕಪ್ಪು ಮಣ್ಣಿನ ಫಲವತ್ತಾದ ನಾಡಾಗಿರುವ ನಮ್ಮ ರಾಜ್ಯ, ದೇಶದ ಪ್ರಗತಿಗೆ ತನ್ನದೇ ಆದ ವಿಶಿಷ್ಠ ಕೊಡುಗೆ ನೀಡುತ್ತಲೇ ಬಂದಿದೆ. ದೇಶದ ಆರನೇ ಅತಿದೊಡ್ಡ ರಾಜ್ಯವಾಗಿರುವ ನಮ್ಮ ಕರ್ನಾಟಕ ಯಾವುದರಲೆಲ್ಲಾ ನಂ.1 ಎನ್ನುವ ನಿಮ್ಮ ಕುತೂಹಲವನ್ನು ತಣಿಸುವ ಪ್ರಯತ್ನ ಇಲ್ಲಿದೆ ನೋಡಿ.  

PREV
111
ನಮ್ಮ ಹೆಮ್ಮೆಯ ಕರ್ನಾಟಕ ಯಾವುದರಲ್ಲೆಲ್ಲಾ ನಂ.1 ಗೊತ್ತಾ?
1. ಕಾಫಿ:

ಕರ್ನಾಟಕ ಉತ್ಪಾದನೆಯಲ್ಲಿ ನಂ.1 ರಾಜ್ಯ ಎನಿಸಿಕೊಂಡಿದೆ. ದೇಶದ ಕಾಫಿ ಉತ್ಪಾದನೆಯಲ್ಲಿ ಕರ್ನಾಟಕದ ಪಾಲು 71%. ಈ ಪೈಕಿ ಕೊಡಗಿನಲ್ಲೇ 33% ಕಾಫಿ ಉತ್ಪಾದನೆಯಾಗುತ್ತದೆ. ಕಾಫಿನಾಡಿದ ತವರು ನಮ್ಮ ಹೆಮ್ಮೆಯ ಕರುನಾಡು.

211
2. ರೇಷ್ಮೆ:

'ರೇಷ್ಮೆ ಉದ್ಮಮ' ದೇಶದ ಅತಿ ಪುರಾತನ 'ವಸ್ತ್ರೌದ್ಯೋಗ' ಒಂದು ಭಾಗ ಎನಿಸಿದೆ. ರೇಷ್ಮೆ ಉತ್ಪಾದನೆಯಲ್ಲೂ ಕರ್ನಾಟಕವೇ ನಂ.1. ಪ್ರತಿ ವರ್ಷ 8,200 ಮೆಟ್ರಿಕ್ ಟನ್ ರೇಷ್ಮೆಯನ್ನು ಕರ್ನಾಟಕದಲ್ಲಿ ಉತ್ಪಾದನೆ ಮಾಡಲಾಗುತ್ತದೆ. ಕರ್ನಾಟಕದ ಬಳಿಕ ಆಂಧ್ರಪ್ರದೇಶ ಹಾಗೂ ಅಸ್ಸಾಂ ಕ್ರಮವಾಗಿ ಎರಡು&ಮೂರನೇ ಸ್ಥಾನ ಪಡೆದಿವೆ.

311
3. ರಾಗಿ

ರಾಗಿ ಮುದ್ದೆಯ ಗತ್ತು ಇಡೀ ದೇಶಕ್ಕೇ ಗೊತ್ತು ಎನ್ನುವ ಮಾತಿದೆ. ಕರ್ನಾಟಕದ ಬಹುಸಂಖ್ಯಾತರ ಆಹಾರ ಪದ್ದತಿಯ ಅವಿಭಾಜ್ಯ ಅಂಗವಾಗಿರುವ ರಾಗಿ, ಆರೋಗ್ಯಕರವೂ ಹೌದು. ರಾಗಿ ಉತ್ಪಾದನೆಯಲ್ಲೂ ಕರ್ನಾಟಕ ನಂ.1 ಸ್ಥಾನದಲ್ಲಿದ್ದು, ದೇಶದ ರಾಗಿ ಉತ್ಪಾದನೆಯ ಪೈಕಿ 64.8% ಕರ್ನಾಟಕದಲ್ಲೇ ಬೆಳೆಯಲಾಗುತ್ತದೆ.  ಆ ನಂತರ ತಮಿಳುನಾಡು, ಆಂಧ್ರಪ್ರದೇಶಗಳು ಸ್ಥಾನ ಪಡೆದಿವೆ.
 

411
4. ಸೂರ್ಯಕಾಂತಿ:

 ಸೂರ್ಯಕಾಂತಿ ಹೂವಿನ ವೈಜ್ಞಾನಿಕ ಹೆಸರು ಹೆಲಿಯಾಂಥಸ್ ಆನುಸ್. ಬಹುಉಪಯೋಗಿಯಾಗಿರುವ ಸೂರ್ಯಕಾಂತಿ ಉತ್ಪಾದಿಸುವ ನಂ.1 ರಾಜ್ಯವೆಂದರೆ ಅದು ನಮ್ಮ ಹೆಮ್ಮೆಯ ಕರ್ನಾಟಕ. ನಮ್ಮ ರಾಜ್ಯದಲ್ಲಿ ಪ್ರತಿ ವರ್ಷ 3.04 ಲಕ್ಷ ಟನ್ ಸೂರ್ಯಕಾಂತಿ ಉತ್ಪಾದಿಸಲಾಗುತ್ತದೆ. ಕರ್ನಾಟಕದ ಬಳಿಕ ಆಂಧ್ರಪ್ರದೇಶ, ಮಹಾರಾಷ್ಟ್ರ ಕ್ರಮವಾಗಿ ಎರಡು&ಮೂರನೇ ಸ್ಥಾನದಲ್ಲಿವೆ.
 

511
5. ಅಡಿಕೆ:

ದೇಶದ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಬಹುಪಯೋಗಿ ಅಡಿಕೆ ಉತ್ಪಾದನೆಯಲ್ಲೂ ಕರ್ನಾಟಕ ನಂ.1 ಸ್ಥಾನ ಪಡೆದಿದೆ. ದೇಶದ ಒಟ್ಟು ಅಡಿಕೆ ಉತ್ಪಾದನೆಯ ಪೈಕಿ ಶೇ 40% ಅಡಿಕೆ ಉತ್ಪಾದನೆ ಕರ್ನಾಟಕದಲ್ಲಾಗುತ್ತದೆ. ಆ ಬಳಿಕ ಕೇರಳ(25%), ಅಸ್ಸಾಂ(20%) ಸ್ಥಾನ ಪಡೆದಿವೆ.

611
6. ಚಿನ್ನ:

ದೇಶದ ಚಿನ್ನದ ನಾಡು ಎಂದರೆ ಅದು ನಮ್ಮ ಹೆಮ್ಮೆಯ ಕರುನಾಡು. ದೇಶದ ಚಿನ್ನ ಉತ್ಪಾದನೆಯಲ್ಲಿ ಕರ್ನಾಟಕ ಸಾರ್ವಭೌಮತೆ ಸಾಧಿಸಿದ್ದು, 80% ಉತ್ಪಾದನೆ ನಮ್ಮ ರಾಜ್ಯದಲ್ಲೇ ಆಗುತ್ತದೆ. ಕೋಲಾರದಲ್ಲಿರುವ KGF ದೇಶದ ಅತಿದೊಡ್ಡ ಚಿನ್ನದ ಗಣಿ ಎನಿಸಿಕೊಂಡಿದೆ.
 

711
7. ಶ್ರೀಗಂಧ:

ಚಿನ್ನದ ನಾಡು, ಗಂಧದ ಬೀಡು ಎಂದರೆ ಅದು ಕರುನಾಡು ಎಂದು ಪ್ರತ್ಯೇಕವಾಗಿ ವಿವರಿಸಬೇಕಿಲ್ಲ. ಪಶ್ಚಿಮ ಘಟ್ಟ ಭಾಗಗಳಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿ ಶ್ರೀಗಂಧವನ್ನು ಬೆಳೆಯಲಾಗುತ್ತದೆ.

811
8. ಕಾಳುಮೆಣಸು/ಕರಿಮೆಣಸು

ಪ್ರಮುಖ ಸಾಂಬಾರ್ ಹಾಗೂ ಆಯುವೇರ್ದಿಕ್‌ ಬೆಳೆಯಾಗಿರುವ ಕಾಳು ಮೆಣಸು ಉತ್ಪಾದನೆಯಲ್ಲೂ ಕರ್ನಾಟಕ ಸಂಪೂರ್ಣ ಪ್ರಾಬಲ್ಯ ಮೆರೆದಿದೆ. ದೇಶದ ಒಟ್ಟು ಕರಿಮೆಣಸಿನ ಉತ್ಪಾದನೆಯಲ್ಲಿ 60.46% ಪಾಲು ಪಡೆಯುವ ಮೂಲಕ ಕರ್ನಾಟಕ ನಂ.1 ಸ್ಥಾನ ಪಡೆದಿದೆ.
 

911
9. ಗುಲಾಬಿ

ಪ್ರಮುಖ ಅಲಂಕಾರಿಕ ಪುಷ್ಪ, ಹೂಗಳ ರಾಣಿ ಎನಿಸಿಕೊಂಡಿರುವ ಗುಲಾಬಿ ಉತ್ಪಾದನೆಯಲ್ಲೂ ಕರ್ನಾಟಕ ನಂ.1 ಸ್ಥಾನ ಕಾಯ್ದುಕೊಂಡಿದೆ. ನಮ್ಮ ರಾಜ್ಯದಲ್ಲಿ ಪ್ರತಿವರ್ಷ 1,71,880 ಟನ್ ಗುಲಾಬಿ ಬೆಳೆಯಲಾಗುತ್ತದೆ. ಆ ನಂತರದ ಸ್ಥಾನಗಳನ್ನು ಪಶ್ಚಿಮ ಬಂಗಾಳ ಪಡೆದುಕೊಂಡಿದೆ.

1011
10. ತೆಂಗು


ತೆಂಗು ಬೆಳೆಯುವ ನಾಡಿದು ಎನ್ನುವ ಕವಿ ವಾಣಿಯಂತೆ, ಕರ್ನಾಟಕ ತೆಂಗು ಉತ್ಪಾದನೆಯಲ್ಲಿ ನಂ.1 ಸ್ಥಾನ ಕಾಯ್ದುಕೊಂಡಿದೆ. ದೇಶದ ತೆಂಗು ಉತ್ಪಾದನೆಯ ಪೈಕಿ ಕರ್ನಾಟಕದ ಪಾಲು 23% ಇದೆ. ಆ ನಂತರದ ಸ್ಥಾನ ತಮಿಳುನಾಡು ಹಾಗೂ ಕೇರಳ ಪಡೆದುಕೊಂಡಿವೆ.
 

1111
10. ವೆನಿಲ್ಲಾ:

ಪ್ರಮುಖ ವಾಣಿಜ್ಯೋದ್ಯಮ ಬೆಳೆಯಾಗಿರುವ ವೆನಿಲ್ಲಾವನ್ನು ಚಾಕ್ಲೇಟ್, ಕೇಕ್‌, ಐಸ್‌ಕ್ರೀಂ ಹಾಗೂ ಸುಗಂದ ದ್ರವ್ಯಗಳಿಗೆ ಬಳಸಲಾಗುತ್ತದೆ. ವೆನಿಲ್ಲಾ ಉತ್ಪಾದನೆಯಲ್ಲೂ ಕರ್ನಾಟಕ ನಂ.1 ಸ್ಥಾನ ಕಾಯ್ದುಕೊಂಡಿದೆ. ಕರ್ನಾಟಕದ ನಂತರ ಕೇರಳ ಹಾಗೂ ತಮಿಳುನಾಡು ರಾಜ್ಯಗಳು ಸ್ಥಾನ ಪಡೆದಿವೆ.

Read more Photos on
click me!

Recommended Stories