ಚಿನ್ನದ ಓಟಕ್ಕೆ ಮತ್ತೆ ವಿರಾಮ, ಬಂಗಾರ ಕೊಳ್ಳಲು ಇದು ಸಕಾಲ!

First Published | Feb 22, 2021, 4:53 PM IST

ಏರಿಳಿತವಾಡುತ್ತಿದ್ದ ಚಿನ್ನದ ದರಕ್ಕೆ ಬ್ರೇಕ್| ಚಿನ್ನ ಖರೀದಿಗೆ ಒಳ್ಳೆಯ ಸಮಯ| ಹೀಗಿದೆ ನೋಡಿ ಫೆಬ್ರವರಿ 22 ಗೋಲ್ಡ್ ರೇಟ್
 

ಕೊರೋನಾ ಕಾಟ ಕಡಿಮೆಯಾಗುತ್ತಿದ್ದಂತೆಯೇ ಇತ್ತ ಚಿನ್ನದ ದರವೂ ಕೊಂಚ ಇಳಿಕೆ ಹಾದಿ ಕಂಡಿದೆ
undefined
ಕಳೆದ ಎಂಟು ತಿಂಗಳಲ್ಲಿ ಚಿನ್ನದ ದರ ಅತ್ಯಂತ ಕನಿಷ್ಟ ಬೆಲೆಗೆ ಕುಸಿದಿದೆ
undefined
Tap to resize

ಈ ವಿಚಾರ ಚಿನ್ನದ ದರ ಏರಿಕೆ ಬಿಸಿಯುಂಡಿದ್ದ ಗ್ರಾಹಕರಿಗೆ ಕೊಂಚ ನೆಮ್ಮದಿ ನೀಡಿದೆ
undefined
ಹೌದು ಕೊರೋನಾ ಕಾಲದಲ್ಲಿ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ್ದ ಚಿನ್ನದ ರೇಟ್ ಬಳಿಕ ಹಾವೇಣಿ ಆಟವಾಡಿ ಗ್ರಾಹಕರ ನಿದ್ದೆಗೆಡಿಸಿತ್ತು
undefined
ಉದ್ಯಮಗಳು ನೆಲ ಕಚ್ಚಿದ ಪರಿಣಾಮ ಅನೇಕ ಮಂದಿ ಚಿನ್ನದಲ್ಲಿ ಹೂಡಿಕೆ ಮಾಡಿದ್ದೇ ಇದಕ್ಕೆ ಕಾರಣವಾಗಿತ್ತು
undefined
ಇದಾದ ಬಳಿಕ ಇಳಿಕೆಯಾದ ಸೋಂಕಿನ ಪ್ರಮಾಣ ಹಾಗೂ ಬಜೆಟ್ ಟಾನಿಕ್‌ನಿಂದ ಚಿನ್ನ ಇಳಿಕೆ ಹಾದಿ ಹಿಡಿದಿದೆ.
undefined
ಇಂದು ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ದರ 43,260 ರೂಪಾಯಿ ಆಗಿದೆ.
undefined
ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 47,190 ರೂಪಾಯಿ ಆಗಿದೆ.
undefined
ಇನ್ನು ಇತ್ತ ಬೆಳ್ಳಿ ದರ ಮಾತ್ರ ಒಂದು ಕೆ. ಜಿ. ಬೆಳ್ಳಿ ದರ 70,000ರೂ ಆಗಿದೆ.
undefined
ಹೀಗಿದ್ದರೂ ತಜ್ಞರು ಮಾತ್ರ ಕೊರೋನಾ ಆತಂಕ ಇನ್ನೂ ನಿವಾರಣೆಯಾಗಿಲ್ಲ, ಹೀಗಾಗಿ ಚಿನ್ನದ ದರ ಏರಿಕೆ ಆಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಿದ್ದಾರೆ.
undefined
ಕಳೆದ ಕೆಲ ದಿನಗಳಿಂದ ನೆರೆ ರಾಜ್ಯಗಳಾದ ಕೇರಳ ಹಾಗೂ ಮಹಾರಾಷ್ಟ್ರದಲ್ಲು ಕೊರೋನಾ ಸೊಂಕಿನ ಪ್ರಮಾಣ ಏರಲಾರಂಭಿಸಿದೆ.
undefined
ಹೀಗಾಗಿ ಮತ್ತೆ ಕೊರೋನಾ ಹಾವಳಿ ಹೆಚ್ಚಾಗಿ ಚಿನ್ನ ದರ ಏರುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.
undefined

Latest Videos

click me!