ಚಿನ್ನದ ದರದಲ್ಲಿ ಭಾರೀ ಕುಸಿತ: 2021ರಲ್ಲಿ ಅತ್ಯಂತ ಕಡಿಮೆ!

First Published Feb 17, 2021, 4:26 PM IST

ಏರಿಳಿತವಾಡುತ್ತಿದ್ದ ಚಿನ್ನದ ದರ ಮತ್ತೆ ಕುಸಿತ| ಚಿನ್ನ ಖರೀದಿಗೆ ಒಳ್ಳೆಯ ಸಮಯ| ಹೀಗಿದೆ ನೋಡಿ ಫೆಬ್ರವರಿ 17ಗೋಲ್ಡ್ ರೇಟ್

ಲಾಕ್‌ಡೌನ್ ಬಳಿಕ ಏಕಾಏಕಿ ಏರಿಕೆ ಕಂಡಿದ್ದ ಚಿನ್ನದ ದರ ಬಜೆಟ್‌ ಬಳಿಕ ಭಾರೀ ಕುಸಿತ ಕಂಡಿತ್ತು.
undefined
ಇದು ಗ್ರಾಹಕರನ್ನು ಸಂಸತಕ್ಕೀಡು ಮಾಡಿತ್ತು. ಹೀಗಾಗಿ ಚಿನ್ನ ಖರೀದಿದಾರರು ಚಿನ್ನದಂಗಡಿಗಳತ್ತ ಹೆಜ್ಜೆ ಹಾಕಿದ್ದರು.
undefined
ಇದಾದ ಬಳಿಕ ಮತ್ತೆ ಹಾವೇಣಿ ಆಟ ಆರಂಭಿಸಿದ್ದ ಚಿನ್ನ ಗ್ರಾಹಕರನ್ನು ಗೊಂದಲಕ್ಕೆ ದೂಡಿತ್ತು. ಆದರೀಗ ಮತ್ತೆ ಚಿನ್ನದ ದರ ಭಾರೀ ಕುಸಿತ ಕಂಡಿದೆ.
undefined
ಈ ವರ್ಷದಲ್ಲಿ ಮೊದಲ ಬಾರಿ ಚಿನ್ನದ ದರ ಅತ್ಯಂತ ಕಡಿಮೆಯಾಗಿದೆ. ಇಷ್ಟು ಮಾತ್ರವಲ್ಲ ಲಾಕ್‌ಡೌನ್ ಬಳಿಕ ಚಿನ್ನದ ದರ ಇಷ್ಟೊಂದು ಕಡಿಮೆಯಾಗಿದ್ದು ಇದೇ ಮೊದಲು.
undefined
ಕಳೆದ ನಾಲ್ಕು ದಿನಗಳಿಂದ ಯಾವುದೇ ಬದಲಾವಣೆಯಾಗದೇ ತಟಸ್ಥವಾಗಿದ್ದ ಚಿನ್ನದ ರೇಟ್ ಮತ್ತೆ ಕುಸಿದಿದೆ.
undefined
ಇಂದು ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ 500 ರೂ. ಇಳಿಕೆಯಾಗಿ ದರ 43,750 ರೂಪಾಯಿ ಆಗಿದೆ.
undefined
ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 560ರೂ. ಇಳಿಕೆಯಾಗಿ 47,730ರೂಪಾಯಿ ಆಗಿದೆ.
undefined
ಇನ್ನು ಇತ್ತ ಬೆಳ್ಳಿ ದರ ಮಾತ್ರ ಒಂದು ಕೆ. ಜಿ. ಬೆಳ್ಳಿ ದರ 71,200ರೂ ಆಗಿದೆ.
undefined
ಹೀಗಿದ್ದರೂ ತಜ್ಞರು ಮಾತ್ರ ಕೊರೋನಾ ಆತಂಕ ಇನ್ನೂ ನಿವಾರಣೆಯಾಗಿಲ್ಲ, ಹೀಗಾಗಿ ಚಿನ್ನದ ದರ ಏರಿಕೆ ಆಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಿದ್ದಾರೆ
undefined
click me!