ಬಜೆಟ್ ಬಳಿಕ ಭಾರೀ ಇಳಿಕೆ ಕಂಡಿದ ಚಿನ್ನದ ದರ ಕಳೆದ ನಾಲ್ಕೈದು ದಿನಗಳಿಂದ ಏರಿಕೆಯ ಹಾದಿ ತುಳಿದಿತ್ತು.
ಆದರೀಗ ಮತ್ತೆ ಚಿನ್ನದ ನಾಗಾಲೋಟಕ್ಕೆ ಬ್ರೇಕ್ ಬಿದ್ದಿದೆ.
ಚಿನ್ನದ ದರ ಏರಿಕೆ ಇಲ್ಲದಿರುವುದು ಗ್ರಾಹಕರನ್ನು ಕೊಂಚ ನಿರಾಳರನ್ನಾಗಿಸಿದೆ.
ಹೌದು ಇಂದು ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ದರ 42,010 ರೂಪಾಯಿ ಇದೆ.
ಇನ್ನು, 24 ಕ್ಯಾರೆಟ್ನ 10 ಗ್ರಾಂ ಚಿನ್ನದವೂ 45,830 ರೂಪಾಯಿ ಇದೆ.
ಇನ್ನು ಇತ್ತ ಬೆಳ್ಳಿ ದರ ಮಾತ್ರ 600ರೂ ಏರಿಕೆಯಾಗಿ, ಒಂದು ಕೆ. ಜಿ. ಬೆಳ್ಳಿ ದರ 67,600 ರೂ ಆಗಿದೆ.
ಕೊರೋನಾ ಅಬ್ಬರದ ವೇಳೆ ಉದ್ಯಮಗಳು ನೆಲ ಕಚ್ಚಿದ ಪರಿಣಾಮ ಅನೇಕ ಮಂದಿ ಚಿನ್ನದಲ್ಲಿ ಹಣ ಹೂಡಿಕೆ ಮಾಡಿದ್ದರು.
ಇದರಿಂದಾಗಿ ಚಿನ್ನದ ದರ ಸಾರ್ವಕಾಲಿಕ ದಾಖಲೆ ಸೃಷ್ಟಿಸಿತ್ತು.
ಆದರೆ ಕೊರೋನಾ ಪಗ್ರಕರಣಗಳು ಕಡಿಮೆಯಾಗುತ್ತಿದ್ದಂತೆಯೇ ಚಿನ್ನದ ದರವೂ ಕೊಂಚ ಕೊಂಚವಾಗಿ ಇಳಿದಿತ್ತು.
ಆದರೀಗ ಮತ್ತೆ ಕೊರೋನಾ ಪ್ರಕರಣಗಳು ಏರಿಕೆಯಾಗತೊಡಗಿದ್ದು, ಜನರನ್ನು ಕಂಗಾಲುಗೊಳಿಸಿದೆ.
ಹೀಗಿರುವಾಗ ಚಿನ್ನದ ದರವೂ ಏರಿಕೆಯಾಗುವ ಸಾಧ್ಯತೆಗಳಿವೆ ಎಂಬುವುದು ತಜ್ಞರ ಮಾತಾಗಿದೆ.