2021ರ ಹುರನ್ ಗ್ಲೋಬಲ್ ರಿಚ್ ಲಿಸ್ಟ್ ಪ್ರಕಟಗೊಂಡಿದೆ. ರಿಲಯನ್ಸ್ ಇಂಡಸ್ಟ್ರಿ ಚೇರ್ಮೆನ್ ಮುಕೇಶ್ ಅಂಬಾನಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 8ನೇ ಸ್ಥಾನ ಪಡೆದುಕೊಂಡಿದ್ದಾರೆ.
ಮುಕೇಶ್ ಅಂಬಾನಿ ಸಂಪತ್ತು 6.06 ಲಕ್ಷ ಕೋಟಿ ರೂಪಾಯಿ ಎಂದು ಹುರನ್ ಅಧ್ಯಯನ ವರದಿ ಹೇಳಿದೆ. ಅಂಬಾನಿ ಗಳಿಕೆ ಕಳೆದೊಂದು ವರ್ಷದಲ್ಲೇ ಶೇಕಡಾ 24 ರಷ್ಟು ಏರಿಕೆಯಾಗಿದೆ ಎಂದು ಹುರನ್ ಹೇಳಿದೆ.
ಹುರನ್ ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಟೆಸ್ಲಾ ಕಾರು ಕಂಪನಿ ಸಿಇಒ ಎಲನ್ ಮಸ್ಕ್ ಪಡೆದುಕೊಂಡಿದ್ದಾರೆ. ಎಲನ್ ಮಸ್ಕ್ ಸಂಪತ್ತು 197 ಬಿಲಿಯನ್ ಡಾಲರ್. ಒಂದು ವರ್ಷದಲ್ಲಿ ಮಸ್ಕ್ ಗಳಿಕ 151 ಬಿಲಿಯನ್ ಡಾಲರ್ ಏರಿಕೆ ಕಂಡಿದೆ. ಎರಡನೇ ಸ್ಥಾನವನ್ನು ಅಮೇಜಾನ್ ಮುಖ್ಯಸ್ಥ ಜೆಫ್ ಬೆಜೋಸ್ ಅಲಂಕರಿಸಿದ್ದಾರೆ.
ಹುರನ್ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಅಂಬಾನಿ ಮಾತ್ರವಲ್ಲ ಇತರ ಕೆಲ ಶ್ರೀಮಂತರ ಭಾರತೀಯರು ಸ್ಥಾನ ಪಡೆದುಕೊಂಡಿದ್ದಾರೆ. ಈ ಮೂಲಕ ಭಾರತ ಕೂಡ ಶ್ರೀಮಂತರ ದೇಶಗಳ ಪೈಕಿ ಮುಂಚೂಣಿಯತ್ತ ದಾಪುಗಾಲಿಡುತ್ತಿದೆ.
ಭಾರತದ ಮತ್ತೊರ್ವ ಉದ್ಯಮಿ ಗೌತಮ್ ಅದಾನಿ ಹಾಗೂ ಕುಟುಂಬ 2.34 ಲಕ್ಷ ಕೋಟಿ ರೂಪಾಯಿ ನಿವ್ವಳ ಆಸ್ತಿ ಹೊಂದಿದ್ದಾರೆ. ಈ ಮೂಲಕ ಹುರನ್ ಗ್ಲೋಬಲ್ ರಿಚ್ ಲಿಸ್ಟ್‌ನಲ್ಲಿ 48ನೇ ಸ್ಥಾನ ಪಡೆದಿದ್ದಾರೆ.
ಹೆಚ್‌ಸಿಎಲ್ ಟೆಕ್ನಾಲಜಿ ಸಂಸ್ಥಾಪಕ ಶಿವ ನಾಡರ್ ಹಾಗೂ ಕುಟುಂಬ ಹುರನ್ ಶ್ರೀಮಂತರ ಪಟ್ಟಿಯಲ್ಲಿ 58ನೇ ಸ್ಥಾನ ಪಡೆದುಕೊಂಡಿದ್ದಾರೆ . ಇವರ ಸಂಪತ್ತು 1.94 ಲಕ್ಷ ಕೋಟಿ ರೂಪಾಯಿ.
ವಿಶ್ವದ ಅತೀ ದೊಡ್ಡ ಸ್ಟೀಲ್ ಮಾರ್ಕೆಟಿಂಗ್ ಕಂಪನಿ ಹೊಂದಿರುವ ಲಕ್ಷ್ಮಿ ಎನ್ ಮಿತ್ತಲ್ ಸಂಪತ್ತು 1.40 ಲಕ್ಷ ಕೋಟಿ ರೂಪಾಯಿ. ಹುರನ್ ಪಟ್ಟಿಯಲ್ಲಿ ಮಿತ್ತಲ್ 104ನೇ ಸ್ಥಾನದಲ್ಲಿದ್ದಾರೆ.
ಲಸಿಕೆ ತಯಾರಿಕ ಕಂಪನಿ ಸೀರಮ್ ಸಂಸ್ಛೆ, ಕೆಲ ಲಸಿಕೆ ಸಂಶೋಧನಾ ಘಟಕಗಳನ್ನು ಹೊಂದಿರು ಸೈರಸ್ ಪೂನಾವಲ್ಲಾ 1.35 ಲಕ್ಷ ಕೋಟಿ ರೂಪಾಯಿ ಸಂಪತ್ತು ಹೊಂದಿದ್ದಾರೆ. ಈ ಮೂಲಕ 113ನೇ ಸ್ಥಾನದಲ್ಲಿದ್ದಾರೆ.