ಸತತ ಎರಡನೇ ದಿನವೂ ಮುಗ್ಗರಿಸಿದ ಚಿನ್ನ, ಬೆಳ್ಳಿ ದರ: ಇಲ್ಲಿದೆ ಅ. 14ರ ಗೋಲ್ಡ್ ರೇಟ್!

First Published Oct 14, 2020, 4:36 PM IST

ಅತ್ತ ಕೊರೋನಾ ಜನರನ್ನು ಕಂಗಾಲುಗೊಳಿಸಿದ್ದರೆ, ಮದುವೆ ಮುಂತಾದ ಕಾರ್ಯಕ್ರಮ ಹಮ್ಮಿಕೊಂಡವರನ್ನು ಚಿನ್ನದ ದರ ಆತಂಕಕ್ಕೀಡು ಮಾಡಿದೆ. ಕೊರೋನಾ ನಡುವೆ ಏರಿದ್ದ ಚಿನ್ನದ ದರ ಕಣ್ಣಾಮುಚ್ಚಾಲೆ ಆಟವಾಡುತ್ತಿದೆ. ಸದ್ಯ ಕಳೆದೆರಡು ದಿನಗಳಿಂದ ಚಿನ್ನದ ದರ ಇಳಿಕೆಯ ಹಾದಿ ಹಿಡಿದಿದೆ. ಇಲ್ಲಿದೆ ಇಂದಿನ ಗೋಲ್ಡ್ ರೇಟ್.
 

ಕೊರೋನಾತಂಕ ನಡುವೆ ಸಾರ್ವಕಾಲಿಕ ದಾಖಲೆ ಬರೆದಿದ್ದ ಚಿನ್ನ, ಬೆಳ್ಳಿ ದರ ತದ ನಂತರ ಹಾವೇಣಿ ಆಟ ಆರಂಭಿಸಿತ್ತು. ಏರಿಕೆ, ಇಳಿಕೆ ಎಂದು ಆಟವಾಡುತ್ತಿದ್ದ ಬಂಗಾರ ದರ ಗ್ರಾಹಕರನ್ನು ಗೊಂದಲಕ್ಕೆ ಸಿಲುಕಿಸಿತ್ತು.
undefined
ಕೊರೋನಾದಿಂದಾಗಿ ಉದ್ಯಮಗಳೆಲ್ಲವೂ ನೆಲ ಕಚ್ಚಿದ ಪರಿಣಾಮ ಅನೇಕ ಮಂದಿ ಚಿನ್ನದಲ್ಲಿ ಹಣ ಹೂಡಿಕೆ ಮಾಡಿದ್ದೇ ಚಿನ್ನದ ದರ ಏರಿಕೆಗೆ ಪ್ರಮುಖ ಕಾರಣವಾಗಿತ್ತು.
undefined
ಆದರೀಗ ಕೊರೋನಾ ಅಟ್ಟಹಾಸದ ನಡುವೆಯೂ ಉದ್ಯಮಗಳು ಮತ್ತೆ ಚೇತರಿಸಿಕೊಂಡಿವೆ. ಹೀಗಾಗಿ ದರ ಕೊಂಚ ಇಳಿಯಲಾರಂಭಿಸಿದೆ. ಹೀಗಿದ್ದರೂ ಮತ್ತೆ ಚಿನ್ನ ದುಬಾರಿಯಾಗಲಿದೆ ಎಂಬುವುದು ತಜ್ಞೆ ಅಭಿಪ್ರಾಯವಾಗಿದೆ.
undefined
ಸದ್ಯ ಕಳೆದೆರಡು ದಿನಗಳಿಂದ ಚಿನ್ನ ಹಾಗೂ ಬೆಳ್ಳಿ ದರ ಇಳಿಕೆ ಹಾದಿ ಹಿಡಿದಿದೆ. ಅಷ್ಟಕ್ಕೂ ಇಂದಿನ ದರವೇನು? ಅನ್ನೋರಿಗೆ ಇಲ್ಲಿದೆ ನೋಡಿ ಅ. 24ರ ಗೋಲ್ಡ್ ರೇಟ್.
undefined
ಇಂದು ಬುಧವಾರ ಬೆಂಗಳೂರಿನಲ್ಲಿ 10 ಗ್ರಾಂಗೆ 22 ಕ್ಯಾರೆಟ್ ಚಿನ್ನದ ದರದಲ್ಲಿ 420 ರೂಪಾಯಿ ಇಳಿಕೆಯಾಗಿದೆ. ಈ ಮೂಲಕ ಬೆಲೆ 47,580 ರೂಪಾಯಿ ಆಗಿದೆ.
undefined
ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 470 ರೂಪಾಯಿ ಇಳಿಕೆ ಕಂಡಿದ್ದು, 51,910 ರೂಪಾಯಿ ಆಗಿದೆ.
undefined
ಇನ್ನು ಇತ್ತ ಬೆಳ್ಳಿ ದರವೂ ಇಳಿಕೆಯಾಗಿದೆ. ಒಂದು ಕೆ. ಜಿ ಬೆಳ್ಳಿಯ ಬೆಲೆ 1,700 ರೂ ಇಳಿಕೆಯಾಗಿ 60,900ರೂ ಆಗಿದೆ.
undefined
ಇನ್ನೂ ಏರಿಕೆಯಾಗಲಿದೆ ಚಿನ್ನದ ಬೆಲೆ: ಶೀಘ್ರವೇ ಆಭರಣ ಚಿನ್ನದ ಬೆಲೆ 55 ಸಾವಿರ ರೂಪಾಯಿ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದ್ದಾರೆ. ಕೊರೋನಾ ಸೋಂಕು ಹರಡುವಿಕೆ ಹೆಚ್ಚುತ್ತಲೇ ಇದೆ. ಇದರಿಂದ ಆರ್ಥಿಕತೆ ಮೇಲೆ ಭಾರೀ ಹೊಡೆತ ಉಂಟಾಗಿದೆ. ಹೀಗಾಗಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಾಣಲಿದೆ ಎನ್ನುವುದು ತಜ್ಞರ ಅಭಿಪ್ರಾಯ.
undefined
ಹೀಗಾಗಿ, ಚಿನ್ನ ಖರೀದಿ ಮಾಡಬೇಕು ಎನ್ನುವ ಆಲೋಚನೆಯಲ್ಲಿದ್ದವರು ಚಿಂತಾಕ್ರಾಂತರಾಗಿದ್ದಾರೆ. ಚಿನ್ನ ಖರೀದೀ ಮಾಡಬೇಕೋ ಅಥವಾ ಬೇಡವೋ ಎನ್ನುವ ಗೊಂದಲದಲ್ಲಿದ್ದಾರೆ.
undefined
click me!