ಸತತ 5 ದಿನ ಏರಿದ್ದ ಚಿನ್ನದ ದರ ಇಂದು ಕೊಂಚ ಇಳಿಕೆ, ಗ್ರಾಹಕರಿಗೆ ಖುಷಿ!
First Published Oct 13, 2020, 5:07 PM ISTಕೊರೋನಾತಂಕ ಜನರ ನೆಮ್ಮದಿ, ಜೀವನ ಶೈಲಿ ಹೀಗೆ ಎಲ್ಲವನ್ನೂ ಕಸಿದುಕೊಂಡಿದೆ. ಒಂದೆಡೆ ಜನರು ಹೊರಗೆ ನೆಮ್ಮದಿಯಿಂದ ಓಡಾಡಲಾಗದೆ ಕಷ್ಟ ಪಡುತ್ತಿದ್ದರೆ, ಮತ್ತೊಂದೆಡೆ ಉದ್ಯಮಗಳು ನೆಲಕಚ್ಚಿವೆ. ಹೀಗಿರುವಾಗ ಚಿನ್ನದ ದರವೂ ಸಾರ್ವಕಾಲಿಕ ದಾಖಲೆ ಸೃಷ್ಟಿಸಿತ್ತು. ಆದರೀಗ ಪರಿಸ್ಥಿತಿ ಕೊಂಚ ಬದಲಾವಣೆಯಾಗುತ್ತಿದೆ. ಉದ್ಯಮ ಕ್ಷೇತ್ರ ಚೇತರಿಸುತ್ತಿದೆ. ಹೀಗಿರುವಾಗ ಹಳದಿ ಲೋಹದ ಬೆಲೆಯೂ ಹಾವೇಣಿ ಆಟ ಆಡುತ್ತಿದೆ. ಇಲ್ಲಿದೆ ಅಕ್ಟೋಬರ್ 13ರ ಬಂಗಾರ ದರ.