ವಾರೆವ್ಹಾ....! ಚಿನ್ನದ ಬೆಲೆ ಭಾರೀ ಇಳಿಕೆ, ಖರೀದಿಸಿದ್ರೆ ಹಣ ಉಳಿಕೆ!

First Published Sep 17, 2020, 3:46 PM IST

ಚಿನ್ನದ ಬೇಡಿಕೆ ಕಡಿಮೆಯಾಗಿದ್ದರೂ, ಕೊರೋನಾತಂಕ ನಡುವೆ ದರ ಮಾತ್ರ ಭಾರೀ ಏರಿಕೆಯಾಗಿತ್ತು. ಆಧರೀಗ ಮತ್ತೆ ಚಿನ್ನದ ದರ ಇಳಿಕೆಯಾಗಿದೆ. ಇಲ್ಲಿದೆ ಸೆಪ್ಟೆಂಬರ್ 17ರ ಚಿನ್ನದ ದರ
 

ಹಾವೇಣಿ ಆಟವಾಡುತ್ತಿರುವ ಚಿನ್ನದ ದರದಲ್ಲಿ ಭಾರೀ ಕುಸಿತವಾಗಿದೆ. ಹೌದು ಕೊರೋನಾತಂಕ ನಡುವೆಯೂ ಏರಿಕೆಯಾಗಿದ್ದ ಚಿನ್ನದ ಬೆಲೆ ಈಗ ಮತ್ತೆ ಇಳಿಕೆಯಾಗಿದೆ.
undefined
ಹಳದಿ ತಾಮ್ರದಲ್ಲಿ ಬೆಲೆ ಇಳಿಕೆಯಾಗಿರುವುದರಿಂದ ಗ್ರಾಹಕರು ಕೊಂಚ ನಿರಾಳವಾಗಿದ್ದಾರೆ. ಹಾಗಾದ್ರೆ ಇಂದಿನ ದರವೇನು ಅಂತೀರಾ?
undefined
ಬೆಂಗಳೂರಿನಲ್ಲಿ 10 ಗ್ರಾಂಗೆ 22 ಕ್ಯಾರೆಟ್ ಚಿನ್ನದ ದರದಲ್ಲಿ 350 ರೂಪಾಯಿ ಇಳಿಕೆಯಾಗಿದೆ. ಈ ಮೂಲಕ ಬೆಲೆ 48,750 ರೂಪಾಯಿ ಆಗಿದೆ.
undefined
ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 380 ರೂಪಾಯಿ ಇಳಿಕೆಯಾಗಿದ್ದು, 53,180 ರೂಪಾಯಿ ಆಗಿದೆ.
undefined
ಬೆಳ್ಳಿ ದರದಲ್ಲೂ 1,200 ರೂಪಾಯಿ ಇಳಿಕೆಯಾಗಿದ್ದು, ಒಂದು ಕೆಜಿ ಬೆಳ್ಳಿ ಬೆಲೆ 67,800 ರೂ ಆಗಿದೆ.
undefined
ಕೊರೋನಾತಂಕ ನಡುವೆ ಉದ್ಯಮಗಳು ನೆಲಕಚ್ಚಿದ್ದು, ಹಣ ಹೂಡಿಕೆ ಮಾಡಲು ಅನೇಕ ಮಂದಿಗೆ ಸಿಕ್ಕ ಒಂದೇ ದಾರಿ ಚಿನ್ನವಾಗಿದೆ. ಹೀಗಾಗಿ ಚಿನ್ನದ ಬೇಡಿಕೆ ಕಡಿಮೆ ಇದ್ದರೂ ಹೂಡಿಕೆ ಹೆಚ್ಚಾಗಿ ಬೆಲೆಯೂ ಬಾರೀ ಏರಿಕೆ ಕಂಡಿದೆ.
undefined
ಇನ್ನೂ ಏರಿಕೆಯಾಗಲಿದೆ ಚಿನ್ನದ ಬೆಲೆ:ಶೀಘ್ರವೇ ಆಭರಣ ಚಿನ್ನದ ಬೆಲೆ 55 ಸಾವಿರ ರೂಪಾಯಿ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದ್ದಾರೆ. ಕೊರೋನಾ ಸೋಂಕು ಹರಡುವಿಕೆ ಹೆಚ್ಚುತ್ತಲೇ ಇದೆ. ಇದರಿಂದ ಆರ್ಥಿಕತೆ ಮೇಲೆ ಭಾರೀ ಹೊಡೆತ ಉಂಟಾಗಿದೆ.
undefined
ಹೀಗಾಗಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಾಣಲಿದೆ ಎನ್ನುವುದು ತಜ್ಞರ ಅಭಿಪ್ರಾಯ. ಹೀಗಾಗಿ, ಚಿನ್ನ ಖರೀದಿ ಮಾಡಬೇಕು ಎನ್ನುವ ಆಲೋಚನೆಯಲ್ಲಿದ್ದವರು ಚಿಂತಾಕ್ರಾಂತರಾಗಿದ್ದಾರೆ. ಚಿನ್ನ ಖರೀದೀ ಮಾಡಬೇಕೋ ಅಥವಾ ಬೇಡವೋ ಎನ್ನುವ ಗೊಂದಲದಲ್ಲಿದ್ದಾರೆ.
undefined
click me!