ಭಾರತದಿಂದ ಮಾಹಿತಿ ಕದಿಯುತ್ತಿವೆ 'ಆ' ಸರ್ವರ್!

First Published Sep 16, 2020, 2:54 PM IST

ಭಾರತದ ಗಣ್ಯವ್ಯಕ್ತಿಗಳ ಮಾಹಿತಿಯನ್ನು ಚೀನಾ ಕಲೆ ಹಾಕುತ್ತಿದೆ ಎಂಬ ಸಂಗತಿ ಬೆಳಕಿಗೆ ಬಂದ ಬೆನ್ನಲ್ಲೇ, ಇದೀಗ ಚೀನಾ ಮೂಲದ ಮತ್ತೊಂದು ಸರ್ವರ್ ಭಾರತೀಯರ ಮಾಹಿತಿಗೆ ಖನ್ನ ಹಾಕುತ್ತಿರುವ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಅಷ್ಟಕ್ಕೂ ಆ ಸರ್ವರ್ ಯಾವುದು? ಇಲ್ಲಿದೆ ಮಾಹಿತಿ

ಭಾರತದ ಗಣ್ಯವ್ಯಕ್ತಿಗಳ ಮಾಹಿತಿಯನ್ನು ಚೀನಾ ಕಲೆ ಹಾಕುತ್ತಿದೆ ಎಂಬ ಸಂಗತಿ ಬೆಳಕಿಗೆ ಬಂದ ಬೆನಲ್ಲೇ, ಇದೀಗ ಚೀನಾದ ತಂತ್ರಜ್ಞಾನ ದೈತ್ಯ ಅಲಿಬಾಬಾ ಕಂಪನಿಯ ಕ್ಲೌಡ್‌ ಡೇಟಾ ಸರ್ವರ್‌ಗಳು ಭಾರತದಲ್ಲಿನ ಬಳಕೆದಾರರ ಮಾಹಿತಿಯನ್ನು ಕದಿಯುತ್ತಿವೆ ಎಂಬ ಆಘಾತಕಾರಿ ಸಂಗತಿಯೊಂದು ಹೊರಬಿದ್ದಿದೆ.
undefined
ಅಲಿಬಾಬಾ ಕಂಪನಿಯ 72ಕ್ಕೂ ಹೆಚ್ಚು ಸರ್ವರ್‌ಗಳು ಭಾರತೀಯ ಬಳಕೆದಾರರ ಮಾಹಿತಿಯನ್ನು ರಹಸ್ಯವಾಗಿ ಚೀನಾಕ್ಕೆ ರವಾನಿಸುತ್ತಿವೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
undefined
ಐರೋಪ್ಯ ಸರ್ವರ್‌ಗಳಿಗಿಂತ ಕಡಿಮೆ ಬೆಲೆಗೆ ಸೇವೆ ಸಿಗುವುದರಿಂದ ದೇಶದ ಉದ್ಯಮ ವಲಯದಲ್ಲಿ ಅಲಿಬಾಬಾ ಕ್ಲೌಡ್‌ ಸರ್ವರ್‌ಗಳು ಭಾರಿ ಜನಪ್ರಿಯವಾಗಿವೆ.
undefined
ಈ ಕಂಪನಿಯು ಗ್ರಾಹಕರನ್ನು ಸೆಳೆಯಲು ಉಚಿತ ಬಳಕೆ ಅವಕಾಶವನ್ನು ಒದಗಿಸುತ್ತದೆ. ಅದನ್ನು ಉಪಯೋಗಿಸಿಕೊಂಡಾಗ ಎಲ್ಲ ಮಾಹಿತಿಯನ್ನೂ ಚೀನಾದಲ್ಲಿನ ಸರ್ವರ್‌ಗಳಿಗೆ ರವಾನಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.
undefined
ಚೀನಾದ ಶೆಂಜೆನ್‌ನಲ್ಲಿರುವ ಮಾಹಿತಿ ತಂತ್ರಜ್ಞಾನ ಕಂಪನಿಯೊಂದು ಭಾರತದ ಸಾವಿರಾರು ಪ್ರಭಾವಿ ವ್ಯಕ್ತಿಗಳ ಕುರಿತ ಮಾಹಿತಿ ಸಂಗ್ರಹಿಸುತ್ತಿದೆ ಎಂಬ ವಿಷಯ ಹೊರಬಿದ್ದ ಬೆನ್ನಲ್ಲೇ, ಚೀನಾದ ಇನ್ನೊಂದು ಮುಖವಾಡ ಕಳಚಿಬಿದ್ದಿದೆ.
undefined
click me!