ನಿನ್ನೆ ಗರಿಷ್ಠದಾಖಲೆ ಬರೆದ ಚಿನ್ನದ ಬೆಲೆಯಲ್ಲಿ ಇಂದು ದಿಢೀರ್ ಕುಸಿತ,ಖರೀದಿಗೆ ಶುಭ ಶುಕ್ರವಾರ

Published : Jan 24, 2025, 10:59 AM IST

ಗುರುವಾರ ಚಿನ್ನದ ಬೆಲೆ ಭಾರಿ ಏರಿಕೆ ಕಂಡ ಅತ್ಯಂತ ಗರಿಷ್ಠ ಅನ್ನೋ ದಾಖಲೆ ಬರೆದಿತ್ತು. ಆದರೆ ಶುಕ್ರವಾರ ಬೆಲೆ ದಿಢೀರ್ ಕುಸಿತ ಕಂಡಿದೆ. ಶುಕ್ರವಾರ ಚಿನ್ನ-ಬೆಳ್ಳಿ ಖರೀದಿ ಶುಭವೇ?

PREV
15
ನಿನ್ನೆ ಗರಿಷ್ಠದಾಖಲೆ ಬರೆದ ಚಿನ್ನದ ಬೆಲೆಯಲ್ಲಿ ಇಂದು ದಿಢೀರ್ ಕುಸಿತ,ಖರೀದಿಗೆ ಶುಭ ಶುಕ್ರವಾರ

ಅಂತಾರಾಷ್ಟ್ರೀಯ ಮಾರುಕಟ್ಟೆ ಆಧರಿಸಿ ಚಿನ್ನ ಬೆಳ್ಳಿ ಬೆಲೆಯಲ್ಲ ಏರಿಳಿತಗಳಾಗುತ್ತದೆ. ಆದರೆ ಗುರುವಾರ(ಜ.23) ಚಿನ್ನ ಗರಿಷ್ಠ ದಾಖಲೆ ಬರೆದಿತ್ತು. 170 ರೂಪಾಯಿ ಏರಿಕೆ ಮೂಲಕ ಚಿನ್ನದ ಬೆಲೆ 10 ಗ್ರಾಂಗೆ 82,900 ರೂಪಾಯಿಗೆ ಏರಿಕೆಯಾಗಿತ್ತು. ಆದರೆ ಶುಕ್ರವಾರ(ಜ.24)ರ ವೇಳೆಗೆ ಚಿನ್ನದ ಬೆಲೆಯಲ್ಲಿ ದಿಢೀರ್ ಕುಸಿತ ಕಂಡಿದೆ. ಶುಕ್ರವಾರ ಚಿನ್ನ ಶುಭ ಸೂಚನೆ ನೀಡಿದೆ.

25

ಜನವರಿ 24ರಂದು ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ಇಂದು 24 ಕಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 8225.3 ರೂಪಾಯಿ. ಗುರುವಾರಕ್ಕೆ ಹೋಲಿಸಿದರೆ ಇಂದು 20 ರೂಪಾಯಿ ಇಳಿಕೆಯಾಗಿದೆ.  ಇನ್ನು 22 ಕಾರಟ್ ಪ್ರತಿ ಗ್ರಾಂ ಚಿನ್ನಕ್ಕೆ 7541.3 ರೂಪಾಯಿ ಆಗಿದೆ. ಇಲ್ಲೂ ಕೂಡ 20 ರೂಪಾಯಿ ಇಳಿಕೆಯಾಗಿದೆ.

35

ಬೆಂಗಳೂರಿನಲ್ಲಿ 24 ಕಾರಟ್ ಚಿನ್ನದ ಚಿನ್ನದ ಬೆಲೆ ₹82095 ರೂಪಾಯಿ(10 ಗ್ರಾಂ) ಇದೇ ಚಿನ್ನದ ಬೆಲೆ ಗುರುವಾರ 10 ಗ್ರಾಂಗೆ 81255 ರೂಪಾಯಿ ಆಗಿತ್ತು. ಗುರುವಾರ ಚಿನ್ನದ ಬೆಲೆ ಗರಿಷ್ಠ ಮಟ್ಟಕ್ಕೆ ತಲುಪಿತ್ತು. ಕಳೆದ ವಾರ ಬೆಂಗಳೂರಿನಲ್ಲಿ 24 ಕಾರೆಟ್ 10 ಗ್ರಾಂ ಚಿನ್ನಕ್ಕೆ 81295 ರೂಪಾಯಿ ಆಗಿತ್ತು. 

45

 ಕಳೆದ ಒಂದು ವಾರದಲ್ಲಿ ಚಿನ್ನದ ಬೆಲೆಯಲ್ಲಿ ಶೇಕಡಾ 0.05 ರಷ್ಟು ವ್ಯತ್ಯಾಸವಾಗಿದೆ. ಇನ್ನು ಬೆಳ್ಳಿ ಪ್ರತಿ ಕೆಜಿಗೆ 99500 ರೂಪಾಯಿ ಆಗಿದೆ. ಈ ಮೂಲಕ ಬಹುತೇಕ ಸ್ಥಿರತೆ ಕಾಪಾಡಿಕೊಂಡಿದೆ. ಡೋನಾಲ್ಡ್ ಟ್ರಂಪ್ ಅಮೇರಿಕ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಬಳಿಕ ತಂದ ಮಹತ್ತರ ಬದಲಾವಣೆಗಳಿಂದ ಮಾರುಕಟ್ಟೆಯಲ್ಲಿ ಭಾರಿ ವ್ಯತ್ಯಾಸ ನಿರೀಕ್ಷಿಸಲಾಗಿತ್ತು.

55
Gold price chennai

ಚೆನ್ನೈನಲ್ಲಿ ಇಂದು 24 ಕಾರಟ್ 10 ಗ್ರಾಂ ಚಿನ್ನಕ್ಕೆ 82101 ರೂಪಾಯಿ ಆಗಿದ್ದರೆ, ಹೈದರಾಬಾದ್‌ನಲ್ಲಿ 82109 ರೂಪಾಯಿ, ವಿಶಾಖಪಟ್ಟಣದಲ್ಲಿ 82117 ರೂಪಾಯಿ, ವಿಜಯವಾಡಾದಲ್ಲಿ 82115 ರೂಪಾಯಿ ಆಗಿದೆ. ಮುಂಬೈನಲ್ಲಿ 82107 ರೂಪಾಯಿ, ಕೋಲ್ಕತಾದಲ್ಲಿ 82105 ರೂಪಾಯಿ ಹಾಗೂ ದೆಹಲಿಯಲ್ಲಿ 82253 ರೂಪಾಯಿ ಆಗಿದೆ.

Read more Photos on
click me!

Recommended Stories