ಜಿಯೋ ತನ್ನ ಗ್ರಾಹಕರಿಗೆ ಹೊಸ ಪ್ಲಾನ್ ಲಾಂಚ್ ಮಾಡಿದೆ. ಡೇಟಾ ಇಲ್ಲದೆ ಕೇವಲ ವಾಯ್ಸ್ ಮತ್ತು SMS ಸೇವೆಗಳನ್ನು ಬಯಸುವ ಗ್ರಾಹಕರಿಗಾಗಿ ಜಿಯೋ ಹೊಸ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಪರಿಚಯಿಸಿದೆ.
ರಿಲಯನ್ಸ್ ಜಿಯೋ ಪ್ರತಿ ದಿನ ಹೊಸ ಹೊಸ ಪ್ಲಾನ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಕೈಗೆಟುಕುವ ದರದಲ್ಲಿ ಕರೆ, ಡೇಟಾ ಸೇರಿದಂತೆ ಹಲವು ಸೌಲಭ್ಯ ನೀಡುತ್ತಿದೆ. TRAI ನಿರ್ದೇಶನದಂತೆ, ಜಿಯೋ ವಾಯ್ಸ್ ಮತ್ತು SMS ಮಾತ್ರ ಇರುವ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಬಿಡುಗಡೆ ಮಾಡಿದೆ. ಹಿರಿಯ ನಾಗರಿಕರು ಮತ್ತು ಗ್ರಾಮೀಣ ಜನರಿಗೆ ಇದು ಉಪಯುಕ್ತ.
24
ಟ್ರಾಯ್ ಮಾರ್ಗದರ್ಶನದಂತೆ ರಿಲಯನ್ಸ್ ಜಿಯೋ ಹೊಸ ಪ್ಲಾನ್ ಲಾಂಚ್ ಮಾಡಿದೆ. ಪ್ರಮುಖವಾಗಿ ಹೊಸ ಪ್ಲಾನ್, ₹458ಕ್ಕೆ 84 ದಿನಗಳ ವಾಯ್ಸ್ ಮತ್ತು SMS ಪ್ಲಾನ್. ಅನ್‌ಲಿಮಿಟೆಡ್ ಕರೆಗಳು, 1000 SMS, ಜಿಯೋ ಆ್ಯಪ್‌ಗಳಿಗೆ ಉಚಿತ ಸಬ್‌ಸ್ಕ್ರಿಪ್ಶನ್ ಸಿಗಲಿದೆ.
34
₹1958ಕ್ಕೆ 365 ದಿನಗಳ ವಾಯ್ಸ್ ಮತ್ತು SMS ಪ್ಲಾನ್. ಅನ್‌ಲಿಮಿಟೆಡ್ ಕರೆಗಳು, 3600 SMS, ಜಿಯೋ ಆ್ಯಪ್‌ಗಳಿಗೆ ಉಚಿತ ಪ್ರವೇಶ ಪಡೆಯಲು ಸಾಧ್ಯವಾಗುತ್ತದೆ. ಈ ಪ್ಲಾನ್‌ಗಳು ಹೊಸ ಟ್ರಾಯ್ ನಿಯಮದಡಿ ಇರಲಿದೆ.
44
ಈ ಪ್ಲಾನ್ ಜೊತೆ ಹೆಚ್ಚುವರಿ ಡೇಟಾ ಅಥವಾ ಹೆಚ್ಚಿನ ಡೇಟಾ ಬೇಕಾದವರು ಜಿಯೋದ ಡೇಟಾ ಪ್ಯಾಕ್‌ಗಳನ್ನು ಖರೀದಿಸಬಹುದು. ಈ ಮೂಲಕ ಜಿಯೋ ಗ್ರಾಹಕರು ಡೇಟಾ ಸೌಲಭ್ಯ ಬಳಸಿಕೊಳ್ಳಬಹುದು.