ಚಿನ್ನದ ಬೆಲೆ ಇಳಿಕೆ ನಿರೀಕ್ಷೆಯಲ್ಲಿದ್ದ ಗ್ರಾಹಕರಿಗೆ ನಿರಾಸೆ; 4 ದಿನದಿಂದ ಬಂಗಾರದ ದರ ಏರಿಕೆ!

First Published | Oct 26, 2021, 6:42 PM IST
  • ದೇಶದ ಹಲವು ನಗರಗಳಲ್ಲಿ ಚಿನ್ನದ ದರ ಏರಿಕೆ
  • ಕಳೆದ ನಾಲ್ಕು ದಿನಗಳಿಂದ ಏರಿಕೆ ಕಂಡ ಬಂಗಾರದ ಬೆಲೆ 
  • ಚಿನ್ನ ಪ್ರಿಯರಿಗೆ ಶಾಕ್, ಬಂಗಾರವೂ ಈಗ ಬಲು ದುಬಾರಿ
.

ಭಾರತೀಯರಿಗೆ ಚಿನ್ನ ಅತ್ಯಂತ ಮುಖ್ಯ. ಆಭರಣ ಖರೀದಿಮಾತ್ರವಲ್ಲ, ಇದೀಗ ಚಿನ್ನದ ಮೇಲೆ ಹೂಡಿಕೆ ಮಾಡುವರ ಸಂಖ್ಯೆ ಹೆಚ್ಚಾಗಿದೆ. ಕಳೆದವಾರ ಚಿನ್ನದ ದರ ಏರಿಕೆಯಾಗಿತ್ತು. ಹೀಗಾಗಿ ಈ ವಾರ ಇಳಿಕೆ ನಿರೀಕ್ಷಿಸಲಾಗಿತ್ತು. ಆದರೆ ಬಂಗಾರ ಪ್ರಿಯರಿಗೆ ಮತ್ತೆ ನಿರಾಸೆಯಾಗಿದೆ. ಇದೀಗ ಮತ್ತೆ ಚಿನ್ನದ ದರ ಏರಿಕೆಯಾಗಿದೆ. 

ಕೊರೋನಾ ಕೊಂಚ ದೂರವಾಗಿದೆ, ಇತ್ತ ಸಾಲು ಸಾಲು ಹಬ್ಬಗಳು ಆಗಮಿಸುತ್ತಿದೆ. ಶುಭಸಂದರ್ಭದಲ್ಲಿ ಚಿನ್ನಾಭರಣ ಖರೀದಿ ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡಲು ಬಯಸಿದ ಮಂದಿಗೆ ಬಂಗಾರ ಶಾಕ್ ನೀಡಿದೆ. ಏರಿಕೆ ಬಳಿಕ 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 47,770 ರೂಪಾಯಿಗೆ ಆಗಿದೆ.

Tap to resize

ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 48,940 ರೂಪಾಯಿಗೆ ಏರಿಕೆಯಾಗಿದೆ. ಇನ್ನು 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಇದೀಗ 44,860 ರೂಪಾಯಿ ಆಗಿದೆ. 10 ಗ್ರಾಂ ಚಿನ್ನಕ್ಕೆ 90 ರೂಪಾಯಿ ಹೆಚ್ಚಳವಾಗುವ ಮೂಲಕ ಕನ್ನಡಿಗರಿಗೆ ಬಂಗಾರ ದುಬಾರಿಯಾಗುತ್ತಿದೆ.

ಅಕ್ಟೋಬರ್ 22 ರಂದು ಬೆಂಗಳೂರಿನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 44,550 ರೂಪಾಯಿ ಆಗಿತ್ತು. ಇನ್ನು 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 48,600 ರೂಪಾಯಿ ಆಗಿತ್ತು. ಇದೀಗ ಈ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಕಳೆದ ನಾಲ್ಕು ದಿನಗಳಲ್ಲಿ ಸತತ ಏರಿಕೆ ಕಂಡಿದೆ.

ಅಕ್ಟೋಬರ್ 26ರಂದು ಚಿನ್ನದ ದರ ಏರಿಕೆಯಿಂದ ಗ್ರಾಹಕರಿಗೆ ನಿರಾಸೆಯಾಗಿದೆ. ದೀಪಾವಳಿ ಸೇರಿದಂತೆ ಸಾಲು ಸಾಲು ಹಬ್ಬಕ್ಕೆ ಸಜ್ಜಾಗುತ್ತಿರುವ ಗ್ರಾಹಕರು ಆಭರಣ ಖರೀದಿಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಆದರೆ ಚಿನ್ನ ಬಲು ದುಬಾರಿಯಾಗುತ್ತಿರುವ ಕಾರಣ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ.

ಮುಂಬೈನಲ್ಲೂ ಚಿನ್ನದ ದರ ಏರಿಕೆಯಾಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರ 47,770 ರೂಪಾಯಿ ಆಗಿದೆ. ಇನ್ನು 22 ಕ್ಯಾರಟ್ 10 ಗ್ರಾಂ ಚಿನ್ನದ ದರ 47,010 ರೂಪಾಯಿಯಾಗಿದೆ. ದೆಹಲಿ ಮತ್ತಷ್ಟು ದುಬಾರಿಯಾಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರ 51,260 ರೂಪಾಯಿ ಆಗಿದೆ. ಇನ್ನು 22 ಕ್ಯಾರಟ್ 10 ಗ್ರಾಂ ಚಿನ್ನದ ದರ 47,010 ರೂಪಾಯಿ ಆಗಿದೆ. ದೇಶದ ಬಹುತೇಕ ಎಲ್ಲಾ ನಗರಗಳಲ್ಲಿ ಚಿನ್ನದ ದರ ಏರಿಕೆಯಾಗಿದೆ. 

Latest Videos

click me!