ಮುಂಬೈ To ಬೆಂಗಳೂರು; ಇಲ್ಲಿದೆ ಭಾರತದ 10 ಶ್ರೀಮಂತ ನಗರದ ಲಿಸ್ಟ್!

First Published | Oct 24, 2021, 3:36 PM IST

ಭಾರತದ ಆರ್ಥಿಕತೆ ಅತೀ ವೇಗವಾಗಿ ಬೆಳೆಯುತ್ತಿರುವ ಎಕಾನಮಿ ಅನ್ನೋದು ಇಂಟರ್‌ನ್ಯಾಶನಲ್ ಮೊನೆಟರಿ ಫಂಡ್ ವರದಿ. ಮುಂದಿನ ವರ್ಷದಲ್ಲಿ ಭಾರತದ ಆರ್ಥಿಕತೆ ಬೆಳವಣಿಗೆ ಶೇಕಡಾ 8.5 ಎಂದು ವರದಿಗಳು ಹೇಳುತ್ತಿದೆ. ಭಾರತದ ಆರ್ಥಿಕತೆಯಲ್ಲಿ ದೇಶದ ಪ್ರಮುಖ ನಗರಗಳ ಕೊಡುಗೆ ಅಪಾರವಾಗಿದೆ. 2021ರ ಜಿಡಿಪಿ ಆಧಾರದಲ್ಲಿ ಭಾರತದ ಶ್ರೀಮಂತ ಟಾಪ್ 10 ನಗರದ ಪಟ್ಟಿ ಇಲ್ಲಿದೆ.

ಭಾರತದ ಶ್ರೀಮಂತ ನಗರಗಳ ಪೈಕಿ ಮೊದಲ ಸ್ಥಾನ ಮುಂಬೈ ಆಕ್ರಮಿಸಿದೆ. ದೇಶದ ವಾಣಿಜ್ಯ ನಗರಿ ಎಂದೇ ಗುರುತಿಸಿಕೊಂಡಿರುವ ಮುಂಬೈ ಎಸ್ಟಿಮೇಟೆಡ್ ಜಿಡಿಪಿ 310 ಬಿಲಿಯನ್ ಅಮೆರಿಕನ್ ಡಾಲರ್. ಭಾರತೀಯ ರೂಪಾಯಿಗಳಲ್ಲಿ 2,32,47,98,50,00,000 ಕೋಟಿ ರೂಪಾಯಿ. ಮುಂಬೈ ಭಾರತದ ಶ್ರೀಮಂತ ನಗರ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

ಭಾರತದ ಎರಡನೇ ಶ್ರೀಮಂತ ನಗರ ನವ ದೆಹಲಿ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಿರೀಕ್ಷೆಯಂತೆ ಆರ್ಥಿಕ ಚಟುವಟಿಕೆಗಳ ಹೆಚ್ಚು. ಆದಾಯದ ಮೂಲ ಕೂಡ ಅಧಿಕವಾಗಿದೆ. ದೆಹಲಿ ಜಿಡಿಪಿ 293.6 ಬಿಲಿಯನ್ ಅಮೆರಿಕನ್ ಡಾಲರ್. ಭಾರತೀಯ ರೂಪಾಯಿಗಳಲ್ಲಿ 2,20,18,09,16,00,000 ಕೋಟಿ ರೂಪಾಯಿ.

Tap to resize

3ನೇ ಸ್ಥಾನ ಕೋಲ್ಕತಾ ಆಕ್ರಮಿಸಿಕೊಂಡಿದೆ. ಆರ್ಥಿಕ, ವಾಣಿಜ್ಯ ಹಾಗೂ ಕೈಗಾರಿಕಾ ಹಬ್ ಆಗಿರುವ ಕೋಲ್ಕತಾದ ಜಿಡಿಪಿ 150.1 ಬಿಲಿಯನ್ ಡಾಲರ್. ಭಾರತೀಯ ರೂಪಾಯಿಗಳಲ್ಲಿ 1,12,56,52,43,50,000 ಕೋಟಿ ರೂಪಾಯಿ. ಪುರಾತನ ನಗರ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವ ಕೋಲ್ಕತಾ ಭಾರತದ ಜಿಡಿಪಿಯಲ್ಲಿ ಮಹತ್ವದ ಕೊಡುಗೆ ನೀಡುತ್ತಿದೆ.

ಭಾರತದ ಶ್ರೀಮಂತ ನಗರಗಳ ಬೈಕಿ ನಮ್ಮ ಬೆಂಗಳೂರಿಗೆ ನಾಲ್ಕನೇ ಸ್ಥಾನ. ಸಿಲಿಕಾನ್ ಸಿಟಿ, ಐಟಿ ಬಿಟಿ ನಗರ ಎಂದೇ ಗುರುತಿಸಿಕೊಂಡಿರುವ ಬೆಂಗಳೂರಿನಲ್ಲಿ ಹಲವು ಕಂಪನಿಗಳು ನೆಲೆ ಕಂಡುಕೊಂಡಿವೆ. ಬೆಂಗಳೂರಿನ ಎಸ್ಟಿಮೇಟೆಡ್ ಜಿಡಿಪಿ 110 ಬಿಲಿಯನ್ ಡಾಲರ್. ಭಾರತೀಯ ರೂಪಾಯಿಗಳಲ್ಲಿ 82,49,28,50,00,000 ಕೋಟಿ ರೂಪಾಯಿ.

ಚೆನ್ನೈ ನಗರ ಭಾರತದ ಶ್ರೀಮಂತ ನಗರಗಳ ಪೈಕಿ 5ನೇ ಸ್ಥಾನ ಪಡೆದುಕೊಂಡಿದೆ. ಚೆನ್ನೈನಲ್ಲಿರುವ ಆಟೋಮೊಬೈಲ್ ಇಂಡಸ್ಟ್ರಿಯಿಂದ ಭಾರತದ ಆರ್ಥಿಕತೆಯಲ್ಲಿ ಅಪರಾ ಕೊಡುಗೆ ನೀಡುತ್ತಿದೆ. ಚೆನ್ನೈ ಜಿಡಿಪಿ 78.6 ಬಿಲಿಯನ್ ಅಮೆರಿಕನ್ ಡಾಲರ್. ಭಾರತೀಯ ರೂಪಾಯಿಗಳಲ್ಲಿ 58,94,48,91,00,000 ಕೋಟಿ ರೂಪಾಯಿ.

ಬಿರಿಯಾನಿ ಸೇರಿದಂತೆ ಖಾದ್ಯಗಳಿಗೆ ಹೆಸರುವಾಸಿಯಾಗಿರುವ ಹೈದರಾಬಾದ್‌ಗೆ ಶ್ರೀಮಂತ ನಗರ ಪಟ್ಟಿಯಲ್ಲಿ 7ನೇ ಸ್ಥಾನ. ಹೈದರಾಬಾದ್ ಎಸ್ಟಿಮೇಟೆಡ್ ಜಿಡಿಪಿ 75.2 ಬಿಲಿಯನ್ ಯುಎಸ್ ಡಾಲರ್. ಭಾರತೀಯ ರೂಪಾಯಿಗಳಲ್ಲಿ  58,64,49,17,00,000 ಕೋಟಿ ರೂಪಾಯಿ.

ಪುಣೆ ನಗರಕ್ಕೆ 7ನೇ ಸ್ಥಾನ ಲಭ್ಯವಾಗಿದೆ. ಈ ಮೂಲಕ ಶ್ರೀಮಂತ ಪಟ್ಟಿಯಲ್ಲಿ ಕಾಣಿಸಿಕೊಂಡ ಮಹಾರಾಷ್ಟ್ರದ 2ನೇ ನಗರವಾಗಿದೆ. ಪುಣೆ ಜಿಡಿಪಿ 69 ಬಿಲಿಯನ್ ಯುಎಸ್ ಡಾಲರ್. ಭಾರತೀಯ ರೂಪಾಯಿಗಳಲ್ಲಿ 51,74,55,15,00,000 ಕೋಟಿ ರೂಪಾಯಿ.

ಭಾರತ ಶ್ರೀಮಂತ ನಗರಗಳ ಲಿಸ್ಟ್‌ನಲ್ಲಿ ಅಹಮ್ಮದಾಬಾದ್‌ಗೆ 8ನೇ ಸ್ಥಾನ. ಅಹಮ್ಮದಾಬಾದ್ ಜಿಡಿಪಿ 68 ಬಿಲಿಯನ್ ಅಮೆರಿಕನ್ ಡಾಲರ್. ಭಾರತೀಯ ರೂಪಾಯಿಗಳಲ್ಲಿ 50,99,55,80,00,000 ಕೋಟಿ ರೂಪಾಯಿ. 59.8 ಬಿಲಿಯನ್ ಯುಎಸ್ ಡಾಲರ್ ಜಿಡಿಪಿಯೊಂದಿಗೆ ಸೂರತ್ 9ನೇ ಸ್ಥಾನ ಪಡೆದಿದ್ದರೆ, 43.5 ಬಿಲಿಯನ್ ಯುಸ್ ಡಾಲರ್ ಜಿಡಿಪಿಯೊಂದಿಗೆ ವಿಶಾಖಪ್ಟಟ್ಟಣಂ 10ನೇ ಸ್ಥಾನ ಪಡೆದುಕೊಂಡಿದೆ.

Latest Videos

click me!