ಚಿನ್ನದ ನಾಗಾಲೋಟಕ್ಕೆ ಇಂದು ಚಿಕ್ಕದಾದ ಬ್ರೇಕ್ ಬಿದ್ದಿದೆ. ಇಂದಿನ ಚಿನ್ನಾಭರಣದ ಬೆಲೆ ನೀಡಿ ಹೂಡಿಕೆದಾರರು ಮತ್ತು ಖರೀದಿದಾರರು ಕೊಂಚ ನಿರಾಳರಾಗಿದ್ದಾರೆ. ಇಂದು ಭಾರತದಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದೆ. ಬೆಲೆ ಕುಸಿತದಿಂದ ಚಿನ್ನ ಖರೀದಿದಾರರಲ್ಲಿ ಹುಮ್ಮಸ್ಸು ಮರುಕಳಿಸಿದೆ.
26
ಇಂದು ಸಿಹಿ ಸುದ್ದಿ
ಬೆಲೆ ಏರಿಕೆಯಿಂದಾಗಿ ಚಿನ್ನ ಖರೀದಿಸೋದು ಮಧ್ಯಮ ವರ್ಗಕ್ಕೆ ಸವಾಲು ಆಗಿದೆ. ಜಾಗತೀಕ ಮಾರುಕಟ್ಟೆಯಲ್ಲಾಗುತ್ತಿರೋ ಅನಿರೀಕ್ಷಿತ ಘಟನೆಯಿಂದಾಗಿ ಚಿನ್ನದ ಹೂಡಿಕೆ ಪ್ರಮಾಣ ಏರಿಕೆಯಾಗುತ್ತಿದೆ. ಬೆಲೆ ಇಳಿಮುಖವಾಗುತ್ತಿರೋದನ್ನು ಕಾಯುತ್ತಿದ್ದ ಜನರಿಗೆ ಇಂದು ಸಿಹಿ ಸುದ್ದಿ ಸಿಕ್ಕಿದೆ.
ಇಂದು 22 ಕ್ಯಾರಟ್, 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ ಕ್ರಮವಾಗಿ 100 ರೂಪಾಯಿ ಮತ್ತು 110 ರೂಪಾಯಿ ಕಡಿಮೆಯಾಗಿದೆ.
66
ಬೆಳ್ಳಿ ಬೆಲೆ
ಬೆಳ್ಳಿಯೂ ಸಹ ಭಾರತದಲ್ಲಿ ಸಾರ್ವಕಾಲಿಕ ದಾಖಲೆಯನ್ನು ಬರೆಯುತ್ತಲೇ ಇದೆ. ಇಂದು ಚಿನ್ನದ ದರ ಇಳಿಕೆಯಾದ್ರೆ ಬೆಳ್ಳಿ ಬೆಲೆ ಏರಿಕೆಯಾಗಿರೋದನ್ನು ಗಮನಿಸಬಹುದು. 10 ಕೆಜಿ ಬೆಳ್ಳಿ ದರದಲ್ಲಿ 1,000 ರೂ.ಗಳಷ್ಟು ಏರಿಕೆಯಾಗಿದೆ.
10 ಗ್ರಾಂ: 1,330 ರೂಪಾಯಿ
100 ಗ್ರಾಂ: 13,300 ರೂಪಾಯಿ
1000 ಗ್ರಾಂ: 1,33,000 ರೂಪಾಯಿ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.