ಇಂದು ಚಿನ್ನ-ಬೆಳ್ಳಿ ದರದಲ್ಲಿ ಭಾರೀ ಕುಸಿತ: ಬಜೆಟ್‌ನಲ್ಲಿ ಎಷ್ಟು ಸಿಗಲಿದೆ ಬಂಗಾರ?

Published : Nov 16, 2026, 10:19 AM IST

ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಬದಲಾವಣೆ ಆಗುತ್ತಿರುತ್ತದೆ, ಆದ್ದರಿಂದ ಇಂದಿನ ದರ ತಿಳಿಯುವುದು ಮುಖ್ಯ. ಇಂದು ದೇಶದಲ್ಲಿ 24 ಕ್ಯಾರಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ 8,200 ರೂ. ಮತ್ತು 1 ಕೆಜಿ ಬೆಳ್ಳಿ ಬೆಲೆಯಲ್ಲಿ 5 ಸಾವಿರ ರೂ. ಕುಸಿತವಾಗಿದೆ.

PREV
15
ಚಿನ್ನ ಮತ್ತು ಬೆಳ್ಳಿ ದರದಲ್ಲಿ ಬದಲಾವಣೆ

ಪ್ರತಿದಿನವೂ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಬದಲಾವಣೆ ಆಗುತ್ತಿರುತ್ತದೆ. ಹಾಗಾಗಿ ಚಿನ್ನ-ಬೆಳ್ಳಿ ಖರೀದಿಸುವ ಇಂದಿನ ದರ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳೋದು ಮುಖ್ಯವಾಗುತ್ತದೆ. ಇದರಿಂದ ನಿಮ್ಮ ಬಜೆಟ್‌ನಲ್ಲಿ ಎಷ್ಟು ಚಿನ್ನ ಸಿಗಬಹುದು ಎಂಬುದರ ಸ್ಪಷ್ಟತೆ ಸಿಗುತ್ತೆ. ಇಂದು ದೇಶದಲ್ಲಿ ಚಿನ್ನದ ಬೆಲೆ ಕುಸಿತವಾಗಿದೆ. 24 ಕ್ಯಾರಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ 8,200 ರೂ.ನಷ್ಟು ಕಡಿಮೆಯಾಗಿದೆ.

25
ಭಾರತದಲ್ಲಿ 22 ಕ್ಯಾರಟ್ ಚಿನ್ನದ ಬೆಲೆ
  • 1 ಗ್ರಾಂ: 12,540 ರೂಪಾಯಿ
  • 8 ಗ್ರಾಂ: 1,00,320 ರೂಪಾಯಿ
  • 10 ಗ್ರಾಂ: 1,25,400 ರೂಪಾಯಿ
  • 100 ಗ್ರಾಂ: 12,54,000 ರೂಪಾಯಿ
45
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ

22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಈ ರೀತಿಯಾಗಿದೆ. ಚೆನ್ನೈ: 1,25,400 ರೂಪಾಯಿ, ಮುಂಬೈ: 1,25,400 ರೂಪಾಯಿ, ದೆಹಲಿ: 1,25,500 ರೂಪಾಯಿ, ಕೋಲ್ಕತ್ತಾ: 1,25,400 ರೂಪಾಯಿ, ಬೆಂಗಳೂರು: 1,25,400 ರೂಪಾಯಿ, ಅಹಮದಾಬಾದ್: 1,25,450 ರೂಪಾಯಿ

  • 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 750 ರೂಪಾಯಿ ಕಡಿಮೆಯಾಗಿದೆ.
  • 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 820 ರೂಪಾಯಿ ಕಡಿಮೆಯಾಗಿದೆ.
55
ಇಂದಿನ ಬೆಳ್ಳಿ ಬೆಲೆ

ಚಿನ್ನದ ದರ ಏರಿಕೆಯಾಗುತ್ತಿದ್ದಂತೆ ಹೂಡಿಕೆದಾರರು ಬೆಳ್ಳಿಯತ್ತ ಮುಖ ಮಾಡಿದ್ದಾರೆ. ಈ ಕಾರಣದಿಂದ ಚಿನ್ನದ ಜೊತೆಯಲ್ಲಿ ಬೆಳ್ಳಿ ದರ ಏರಿಕೆಯಾಗುತ್ತಿದೆ. ಇಂದು 1 ಕೆಜಿ ಬೆಳ್ಳಿ ಬೆಲೆಯಲ್ಲಿ 5 ಸಾವಿರ ರೂ.ಗಳಷ್ಟು ಕುಸಿತವಾಗಿದೆ.

  • 10 ಗ್ರಾಂ: 1900 ರೂಪಾಯಿ
  • 100 ಗ್ರಾಂ: 19,000 ರೂಪಾಯಿ
  • 1000 ಗ್ರಾಂ: 1,90,000 ರೂಪಾಯಿ

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories