ಚಿನ್ನದ ಬೆಲೆ ಇಳಿಯುತ್ತಿದೆ ಅಂತ ಖರೀದಿಸುತ್ತಿದ್ದೀರಾ? ಒಂದು ನಿಮಿಷ, ಇಲ್ಲಿದೆ ನೋಡಿ ಮತ್ತೊಂದು ಗುಡ್‌ ನ್ಯೂಸ್!

Published : Jan 31, 2026, 03:23 PM IST

ಬಹಳ ದಿನಗಳ ನಂತರ ಚಿನ್ನದ ಬೆಲೆ ಇಳಿಕೆಯಾಗುತ್ತಿದೆ. ಚಿನ್ನದ ಜೊತೆಗೆ ಬೆಳ್ಳಿಯ ಬೆಲೆಯೂ ಇಳಿಯಲು ಆರಂಭಿಸಿದೆ. ಆದರೆ, ಈ ಬೆಲೆಗಳು ಮತ್ತಷ್ಟು ಇಳಿಯಲಿವೆಯೇ? ತಜ್ಞರು ಏನು ಹೇಳುತ್ತಾರೆ ಗೊತ್ತಾ? 

PREV
16
ಕೇಂದ್ರ ಬಜೆಟ್‌ಗೆ ಕ್ಷಣಗಣನೆ

ಕೇಂದ್ರ ಸರ್ಕಾರ ನಾಳೆ ಅಂದರೆ ಫೆಬ್ರವರಿ 1 ರಂದು ಕೇಂದ್ರ ಬಜೆಟ್ ಮಂಡಿಸಲಿದೆ. ಈ ಬಜೆಟ್ ಮೇಲೆ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಅವಲಂಬಿತವಾಗಿವೆ ಎಂಬ ಸುದ್ದಿ ಇದೆ. ಇಂತಹ ಸಮಯದಲ್ಲಿ ಚಿನ್ನ, ಬೆಳ್ಳಿ ಕೊಳ್ಳುವುದು ಸರಿನಾ, ಇನ್ನೂ ಕೆಲವು ದಿನ ಕಾದರೆ ಬೆಲೆ ಮತ್ತಷ್ಟು ಇಳಿಯುವ ಸಾಧ್ಯತೆ ಇದೆಯಾ? ಅಸಲಿಗೆ ಬಜೆಟ್ ಹೇಗಿರಲಿದೆ ಅನ್ನೋದನ್ನು ಈಗ ತಿಳಿಯೋಣ.

26
ಚಿನ್ನದ ಬೆಲೆ ಇಳಿದಾಗ ಕೊಳ್ಳಲು ಮುಗಿಬೀಳುತ್ತಾರೆ

ಬೆಲೆ ಇಳಿದಾಗ ಎಲ್ಲರೂ ಚಿನ್ನ ಕೊಳ್ಳಲು ಮುಗಿಬೀಳುತ್ತಾರೆ. ಆದರೆ ಬೆಲೆ ಏರಿಕೆ ಆಗುತ್ತಾ? ತಜ್ಞರ ಪ್ರಕಾರ, ಚಿನ್ನದ ಬೆಲೆ ಅಂತರರಾಷ್ಟ್ರೀಯ ಮಾರುಕಟ್ಟೆಯನ್ನು ಅವಲಂಬಿಸಿದೆ. ಸ್ಥಳೀಯ ಬೇಡಿಕೆ ಹೆಚ್ಚಾದರೆ ತಯಾರಿಕಾ ಶುಲ್ಕ ಏರಬಹುದು.

36
ಚಿನ್ನದ ಬೆಲೆ ಸದ್ಯಕ್ಕೆ ಸ್ಥಿರವಾಗುವ ಸಾಧ್ಯತೆಯಿದೆ

ಸದ್ಯದ ಮಾರುಕಟ್ಟೆ ಟ್ರೆಂಡ್ ಪ್ರಕಾರ, ಚಿನ್ನದ ಬೆಲೆ ಸ್ಥಿರವಾಗಿರಬಹುದು. ಬಜೆಟ್‌ನಲ್ಲಿ ಆಮದು ಸುಂಕ ಇಳಿಸಿದರೆ ಬೆಲೆ ಮತ್ತಷ್ಟು ಇಳಿಯಲಿದೆ. ಏರಿಸಿದರೆ, ಬೆಲೆ ಗಗನಕ್ಕೇರಲಿದೆ. ಹಾಗಾಗಿ, ಈಗ ಅರ್ಧದಷ್ಟು ಖರೀದಿಸಿ, ಬಜೆಟ್‌ಗಾಗಿ ಕಾಯುವುದು ಉತ್ತಮ ತಂತ್ರ.

46
ಬೆಂಗಳೂರಲ್ಲಿ ಇವತ್ತಿನ ಚಿನ್ನದ ಬೆಲೆ ಎಷ್ಟು?

ಸದ್ಯ ಬೆಂಗಳೂರಿನಲ್ಲಿ 24 ಕ್ಯಾರಟ್ ಚಿನ್ನದ ಬೆಲೆ ಒಂದು ಗ್ರಾಮ್‌ಗೆ 16,058 ರುಪಾಯಿಗಳಾಗಿದ್ದು, 862 ರುಪಾಯಿ ಇಂದು ಬೆಲೆಯಲ್ಲಿ ಇಳಿಕೆ ಕಂಡಿದೆ. ಇನ್ನು 22 ಕ್ಯಾರಟ್ ಚಿನ್ನದ ಬೆಲೆಯಲ್ಲೂ ಬರೋಬ್ಬರಿ 790 ರುಪಾಯಿ ಇಳಿಕೆ ಕಂಡಿದ್ದು, ಒಂದು ಗ್ರಾಮ್‌ಗೆ 14,720 ಗ್ರಾಮ್‌ಗಳಾಗಿವೆ.

56
ಒಂದೇ ದಿನದಲ್ಲಿ 45 ಸಾವಿರ ರುಪಾಯಿ ಕುಸಿತ ಕಂಡ ಬೆಳ್ಳಿ ಬೆಲೆ!

ಇನ್ನು ರಾಕೆಟ್‌ ಸ್ಪೀಟ್‌ನಲ್ಲಿ ಮುನ್ನಗ್ಗುತ್ತಿದ್ದ ಬೆಳ್ಳಿ ಬೆಲೆಯಲ್ಲೂ ದಿಢೀರ್ ಕುಸಿತ ಕಂಡಿದೆ. ನಿನ್ನೆಯ ದಿನಕ್ಕೆ ಹೋಲಿಸಿದರೆ, ಇಂದು ಒಂದು ಕೆಜಿ ಬೆಳ್ಳಿ ತೂಕದ ಮೇಲೆ ಬರೋಬ್ಬರಿ 45,000 ರುಪಾಯಿ ಇಳಿಕೆ ಕಂಡಿದೆ. ಸದ್ಯ ಒಂದು ಕೆಜಿ ಬೆಳ್ಳಿಯ ಬೆಲೆ 3,50,000 ರುಪಾಯಿಗಳಾಗಿವೆ.

66
ಕೇಂದ್ರ ಬಜೆಟ್ ಬಳಿಕ ಸ್ಪಷ್ಟ ಚಿತ್ರಣ

ಸದ್ಯ ಚಿನ್ನ ಹಾಗೂ ಬೆಳ್ಳಿಯ ಮಾರುಕಟ್ಟೆಯಲ್ಲಿ ಮಹಾ ಕುಸಿತ ಕಂಡಿದ್ದು, ನಾಳೆಯ ಬಜೆಟ್ ಬಳಿಕ ಚಿನ್ನ-ಬೆಳ್ಳಿಯ ಬೆಲೆಯಲ್ಲಿ ಮತ್ತಷ್ಟು ಕುಸಿತ ಕಾಣಲಿದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories