ಚಿನ್ನ ಬೆಳ್ಳಿ ಖರೀದಿಸುವವರಿಗೆ ಶುಭ ಶುಕ್ರವಾರ; ಮಹಾ ಕುಸಿತ ಕಂಡ ಬಂಗಾರದ ಬೆಲೆ! ಇಂದಿನ ಚಿನ್ನದ ರೇಟ್ ಎಷ್ಟು?

Published : Feb 13, 2026, 10:45 AM IST

ಬೆಂಗಳೂರು: ಚಿನ್ನ ಬೆಳ್ಳಿ ಖರೀದಿಸುವವರ ಪಾಲಿಗೆ ಇಂದು ಶುಭ ಶುಕ್ರವಾಗಿ ಪರಿಣಮಿಸಿದ್ದು, ಇಂದು ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಭರ್ಜರಿ ಕುಸಿತ ಕಂಡಿದೆ. ಫೆಬ್ರವರಿ 14ರ ಶುಕ್ರವಾರ ಬೆಳ್ಳಂಬೆಳಗ್ಗೆ ಚಿನ್ನ ಹಾಗೂ ಬೆಳ್ಳಿ ಬೆಲೆ ಎಷ್ಟಿದೆ ನೋಡೋಣ ಬನ್ನಿ. 

PREV
16
ಬಂಗಾರ ಹಾಗೂ ಬೆಳ್ಳಿ ಬೆಲೆಯಲ್ಲಿ ಇಂದು ಭಾರೀ ಕುಸಿತ

ಸತತ ಚಿನ್ನದ ಬೆಲೆಯಲ್ಲಿ ಏರಿಕೆ ಕಾಣುತ್ತಿದ್ದು, ಈ ಏರಿಕೆಯ ಓಟಕ್ಕೆ ಗುರುವಾರ ಅಂದರೆ ನಿನ್ನೆ ಬ್ರೇಕ್ ಬಿದ್ದಿತ್ತು. ಆದರೆ ಬೆಳ್ಳಿ ಬೆಲೆಯಲ್ಲಿ ನಿನ್ನೆ ಕೊಂಚ ಏರಿಕೆ ಕಂಡಿತ್ತು. ಆದರೆ ಇದೀಗ ಶುಕ್ರವಾರ ಚಿನ್ನ ಹಾಗೂ ಬೆಳ್ಳಿ ಖರೀದಿಸುವವರ ಪಾಲಿಗೆ ಶುಭಶುಕ್ರವಾರವಾಗಿ ಪರಿಣಮಿಸಿದ್ದು, ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಮಹಾ ಕುಸಿತ ಕಂಡಿದೆ.

26
24 ಕ್ಯಾರಟ್ ಚಿನ್ನದ ಬೆಲೆಯಲ್ಲಿ 10 ಗ್ರಾಮ್‌ಗೆ 2620 ರುಪಾಯಿ ಕುಸಿತ

ಹೌದು, ಗುರುವಾರ 24 ಕ್ಯಾರಟ್ ಪ್ರತಿ 10 ಗ್ರಾಮ್ ಚಿನ್ನದ ಬೆಲೆಯಲ್ಲಿ 1,200 ರುಪಾಯಿ ಇಳಿಕೆ ಕಂಡಿತ್ತು. ಇದೀಗ ಶುಕ್ರವಾರ ಕೂಡಾ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಪ್ರತಿ ಗ್ರಾಮ್‌ಗೆ 262 ರುಪಾಯಿ ಕುಸಿತ ಕಂಡಿದೆ. ಅಂದರೆ ಪ್ರತಿ 10 ಗ್ರಾಮ್ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಇಂದು ಒಂದೇ ದಿನ ಬರೋಬ್ಬರಿ 2,620 ರುಪಾಯಿ ಕುಸಿತ ಕಂಡಿದೆ.

36
24 ಕ್ಯಾರಟ್ ಚಿನ್ನದ ಮೇಲೆ ಹೂಡಿಕೆ ಮಾಡೋರಿಗೆ ಗುಡ್ ನ್ಯೂಸ್

ನಿನ್ನೆ 15,840 ರುಪಾಯಿ ಇದ್ದ 24 ಕ್ಯಾರಟ್ ಚಿನ್ನದ ಬೆಲೆ ಇಂದು 15,578 ರುಪಾಯಿಗೆ ಇಳಿಕೆ ಕಂಡಿದೆ. ಈ ಮೂಲಕ 24 ಕ್ಯಾರಟ್ ಚಿನ್ನದ ಮೇಲೆ ಹೂಡಿಕೆ ಮಾಡುವವರು ಕೊಂಚ ನಿಟ್ಟುಸಿರುಬಿಡುವಂತೆ ಆಗಿದೆ.

46
ಆಭರಣ ಚಿನ್ನದ ಬೆಲೆಯಲ್ಲಿ 2400 ರುಪಾಯಿ ಕುಸಿತ

ಇನ್ನು ಇದೇ ವೇಳೆ ಆಭರಣ ಚಿನ್ನವಾದ 22 ಕ್ಯಾರಟ್ ಬಂಗಾರದ ಬೆಲೆಯಲ್ಲೂ ಭಾರೀ ಕುಸಿತ ಕಂಡಿದೆ. ಇಂದು ಒಂದೇ ದಿನ 22 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 2400 ರುಪಾಯಿ ಇಳಿಕೆ ಕಂಡಿದೆ. ಇಂದು ಪ್ರತಿ ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ 14,280 ರುಪಾಯಿಗಳಾಗಿವೆ.

56
ನಿನ್ನೆಯ ಬೆಳ್ಳಿ ಬೆಲೆ ಕೆಜಿಗೆ 2,95,000

ನಿನ್ನೆಯಿಂದಲೇ ಚಿನ್ನದ ಬೆಲೆಯಲ್ಲಿ ಇಳಿಕೆ ಕಾಣಲಾರಂಭಿಸಿದ್ದರೂ, ಬೆಳ್ಳಿ ಬೆಲೆಯಲ್ಲಿ ಕೊಂಚ ಏರಿಕೆ ಕಂಡಿತ್ತು. ಗುರುವಾರ ಪ್ರತಿ ಕೆಜಿ ಬೆಳ್ಳಿ ಬೆಲೆಯಲ್ಲಿ 5000 ರುಪಾಯಿ ಏರಿಕೆ ಕಾಣುವ ಮೂಲಕ 2,95,000 ರುಪಾಯಿ ತಲುಪಿತ್ತು.

66
ಇಂದು ಪ್ರತಿ ಕೆಜಿಗೆ ಬೆಳ್ಳಿ ಬೆಲೆಯಲ್ಲಿ 15,000 ಕುಸಿತ

ಆದರೆ ಇಂದು ಬೆಳ್ಳಿ ಬೆಲೆಯಲ್ಲಿ ಬರೋಬ್ಬರಿ 15,000 ರುಪಾಯಿ ಕುಸಿತ ಕಂಡಿದೆ. ಈ ಮೂಲಕ ಒಂದು ಕೆಜಿ ಬೆಳ್ಳಿಯ ಬೆಲೆ 2,95,000 ರುಪಾಯಿಯಿಂದ ಒಂದೇ ದಿನ 2,80,000 ರುಪಾಯಿಗೆ ಬಂದಿಳಿದಿದೆ. ಈ ಮೂಲಕ ಶುಭಶುಕ್ರವಾರ ಬೆಳ್ಳಿ ಖರೀದಿಸುವವರ ಮುಖದಲ್ಲೂ ಮಂದಹಾಸ ಬೀರುವಂತೆ ಮಾಡಿದೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories