ಪ್ರತಿಯೊಂದು ಬ್ಯಾಂಕುಗಳು ಸೇವಿಂಗ್ಸ್ ಅಕೌಂಟ್ ಹೊಂದಿರುವ ಗ್ರಾಹಕರಿಗೆ ಬೇರೆ ಬೇರೆ ಬಡ್ಡಿ ದರಗಳನ್ನು ನೀಡುತ್ತಿರುವಾಗ ಖಾಸಗಿ ಬ್ಯಾಂಕ್ ಒಂದು ತನ್ನ ಸೇವಿಂಗ್ಸ್ ಅಕೌಂಟ್‌ನ ಬಡ್ಡಿಯನ್ನು ಭರ್ಜರಿಯಾಗಿ ಏರಿಸಿದೆ.
ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ತನ್ನ ಉಳಿತಾಯ ಖಾತೆ ಗ್ರಾಹಕರಿಗೆ ಒಳ್ಳೆಯ ಸುದ್ದಿ ನೀಡಿದೆ. ಉಳಿತಾಯ ಖಾತೆ ಗ್ರಾಹಕರಿಗೆ ಬಡ್ಡಿದರವನ್ನು ಹೆಚ್ಚಿಸಿರುವುದಾಗಿ ಬ್ಯಾಂಕ್ ಘೋಷಿಸಿದೆ. ಈ ಹೊಸ ಬಡ್ಡಿದರಗಳು ಜನವರಿ 10 ರಿಂದ ಜಾರಿಗೆ ಬಂದಿದೆ ಎಂದು ಬ್ಯಾಂಕ್ ಹೇಳಿದೆ. ಬ್ಯಾಂಕ್‌ನ ಹೊಸ ಬಡ್ಡಿದರ ಎಷ್ಟು ಅನ್ನೋದರ ಮಾಹಿತಿ ಇಲ್ಲಿದೆ.
26
ಬ್ಯಾಂಕ್ ಬಡ್ಡಿದರಗಳು: ಸಾಮಾನ್ಯವಾಗಿ ಬ್ಯಾಂಕ್‌ನ ಸೇವಿಂಗ್ಸ್ ಅಕೌಂಟ್‌ಗಳಲ್ಲಿಯೇ ನಮ್ಮ ಹೆಚ್ಚಿನ ಹಣ ಇಡುತ್ತೇವೆ. ಇದಕ್ಕೆ ಬ್ಯಾಂಕ್‌ಗಳು ಅತ್ಯಂತ ಕಡಿಮೆ ಬಡ್ಡಿಯನ್ನು ನೀಡುತ್ತವೆ. ಕಡಿಮೆ ಬಡ್ಡಿಯಾದರೂ, ನಮ್ಮ ಉಳಿತಾಯ ಸುರಕ್ಷಿತವಾಗುವುದರೊಂದಿಗೆ ನಮಗೆ ಲಾಭವೂ ಸಗುತ್ತಿದೆ. ಉಳಿತಾಯ ಖಾತೆಗೆ ಪ್ರತಿ ಬ್ಯಾಂಕಿನ ಬಡ್ಡಿದರವು ವಿಭಿನ್ನವಾಗಿರುತ್ತದೆ, ಇದು ಠೇವಣಿ ಮಾಡಿದ ಮೊತ್ತವನ್ನು ಅವಲಂಬಿಸಿರುತ್ತದೆ. ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಉಳಿತಾಯ ಖಾತೆಗಳನ್ನು ಹೊಂದಿರುವ ಗ್ರಾಹಕರಿಗೆ ಒಳ್ಳೆಯ ಸುದ್ದಿಯನ್ನು ನೀಡಿದೆ.
36
ಬ್ಯಾಂಕ್ ಸೇವಿಂಗ್ಸ್ ಅಕೌಂಟ್ ಗ್ರಾಹಕರಿಗೆ ಬಡ್ಡಿ ದರವನ್ನು ಹೆಚ್ಚಿಸಿರುವುದಾಗಿ ಘೋಷಿಸಿದೆ. ಜೊತೆಗೆ, ಈ ಹೆಚ್ಚಳ ಜನವರಿ 10 ರಿಂದ ಜಾರಿಗೆ ಬಂದಿರುವುದಾಗಿ ತಿಳಿಸಿದೆ.
46
ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಹೇಳೋದೇನು?: ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ NSEಗೆ ಈ ಬಗ್ಗೆ ಮಾಹಿತಿ ನೀಡಿದೆ. “ಭಾರತದ ಪ್ರಮುಖ ಸಣ್ಣ ಹಣಕಾಸು ಬ್ಯಾಂಕ್‌ಗಳಲ್ಲಿ ಒಂದಾದ ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್ ತನ್ನ ಉಳಿತಾಯ ಖಾತೆ ಗ್ರಾಹಕರಿಗೆ ಬಡ್ಡಿದರಗಳನ್ನು ಪರಿಷ್ಕರಿಸಿದೆ. ಈ ಹೊಸ ಬಡ್ಡಿದರಗಳು ಜನವರಿ 10 ರಿಂದ ಜಾರಿಗೆ ಬರುತ್ತವೆ ಎಂದು ಹೇಳಿದೆ.
56
ಬ್ಯಾಂಕ್ ಬಡ್ಡಿದರವನ್ನು ಎಷ್ಟು ಹೆಚ್ಚಿಸಿದೆ?: ರೂ. 1 ಲಕ್ಷದವರೆಗಿನ ಬ್ಯಾಲೆನ್ಸ್‌ಗಳಿಗೆ 3.00% ಬಡ್ಡಿದರವು ಮೊದಲಿನಂತೆಯೇ ಇರುತ್ತದೆ ಎಂದು ಬ್ಯಾಂಕ್ ತಿಳಿಸಿದೆ. ಅದೇ ಸಮಯದಲ್ಲಿ, ರೂ. 1 ಲಕ್ಷದಿಂದ ರೂ. 10 ಲಕ್ಷದವರೆಗಿನ ಬ್ಯಾಲೆನ್ಸ್ ಹೊಂದಿರುವ ಗ್ರಾಹಕರು ವಿಸ್ತೃತ ಸ್ಲ್ಯಾಬ್‌ನಲ್ಲಿ 5.00% ಬಡ್ಡಿದರವನ್ನು ಪಡೆಯುತ್ತಾರೆ. ಇದಲ್ಲದೆ, ಹೊಸ ಶ್ರೇಣಿಯ ಅಡಿಯಲ್ಲಿ ರೂ. 10 ಲಕ್ಷದಿಂದ ರೂ. 25 ಲಕ್ಷದವರೆಗಿನ ಬ್ಯಾಲೆನ್ಸ್‌ಗಳಿಗೆ 7% ಬಡ್ಡಿದರ ಅನ್ವಯಿಸುತ್ತದೆ. 25 ಲಕ್ಷದಿಂದ ರೂ. 1 ಕೋಟಿವರೆಗಿನ ಬ್ಯಾಲೆನ್ಸ್‌ಗಳಿಗೆ ಹೊಸ ಶ್ರೇಣಿಯು 7.25% ಬಡ್ಡಿದರವನ್ನು ಸಿಗಲಿದೆ. 1 ಕೋಟಿಯಿಂದ ರೂ. 25 ಕೋಟಿವರೆಗಿನ ಬ್ಯಾಲೆನ್ಸ್‌ಗಳಿಗೆ 7.50% ಬಡ್ಡಿದರವನ್ನು ನೀಡಲಾಗುತ್ತದೆ.
ಇದರೊಂದಿಗೆ, 25 ಕೋಟಿ ರೂ.ಗಿಂತ ಹೆಚ್ಚಿನ ಠೇವಣಿಗಳಿಗೆ ಪ್ರಸ್ತುತ ಶೇ.7.80 ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಬ್ಯಾಂಕ್ ತಿಳಿಸಿದೆ. ಗುರುವಾರ ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಷೇರುಗಳ ಬಗ್ಗೆ ಹೇಳುವುದಾದರೆ, ಬ್ಯಾಂಕಿನ ಷೇರುಗಳು ಶೇ.2.16 ರಷ್ಟು ಏರಿಕೆಯಾಗಿ ರೂ.69.08 ಕ್ಕೆ ಮುಕ್ತಾಯಗೊಂಡವು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.